Categories
ರಾಜ್ಯ ಹವಾಮಾನ ಸುದ್ದಿ

ಸಣ್ಣ ಮಳೆ ಬರಬಹುದು!

ಸಣ್ಣ ಮಳೆ ಬರಬಹುದು!
– ಜ.19ರಿಂದ ಮಳೆ, ಶೀತ ಗಾಳಿ
– ಚಳಿಗಾಲದಲ್ಲೂ ಮಳೆ ಆತಂಕ!

NAMMUR EXPRESS NEWS
ಬೆಂಗಳೂರು: ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಜನವರಿ 21ರವರೆಗೆ ಮತ್ತು ಜನವರಿ 19 ರಂದು ತೀವ್ರ ಶೀತದ ಅಲೆಗಳು ಮುಂದುವರಿಯುವ ಸಾಧ್ಯತೆಯಿದೆ. ಜನವರಿ 20 ಮತ್ತು 21 ರಂದು ಮತ್ತು ಜನವರಿ 19 ರಿಂದ 21, 2024 ರ ಅವಧಿಯಲ್ಲಿ ಚಳಿಗಾಲದ ಶೀತ ಅಲೆಗಳು ತೀವ್ರಗೊಳ್ಳುವ ಸಾಧ್ಯತೆಯಿದೆ. ಎರಡು ದಿನಗಳಲ್ಲಿ ದಟ್ಟವಾದ ಮಂಜು ಬೀಳಲಿರುವುದರಿಂದ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಿದೆ.

Categories
ಮಲ್ನಾಡ್ ಹವಾಮಾನ ಸುದ್ದಿ

ಸಂಕಷ್ಟ ತಂದಿಟ್ಟ ಹವಾಮಾನ ವೈಪರೀತ್ಯ..!

ಸಂಕಷ್ಟ ತಂದಿಟ್ಟ ಹವಾಮಾನ ವೈಪರೀತ್ಯ..!
– ಮಲೆನಾಡು, ಕರಾವಳಿ ರೈತರು ಕಂಗಾಲು
– ಭತ್ತ, ಅಡಿಕೆಗೆ ಮುಳುವಾದ ಮಳೆ!

NAMMUR EXPRESS NEWS
ಮಲೆನಾಡು: ರಾಜ್ಯಾದ್ಯಂತ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಗುರುವಾರ ಬೆಳಗ್ಗೆಯಿಂದ ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ಸುರಿದ ತುಂತುರು ಮಳೆಯಿಂದಾಗಿ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸಂಕ್ರಾಂತಿ ಕಾಲಿಡುತ್ತಿದ್ದು, ಎಲ್ಲೆಡೆ ಬೆಳೆಗಳ ಕೊಯ್ಲು, ಸುಗ್ಗಿ ಆರಂಭವಾಗಿದೆ. ಕಳೆದೆರಡು ವಾರಗಳಿಂದ ಉತ್ತಮ ಬಿಸಿಲಿನ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಡಿಕೆ, ಹಾಸನ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಕಾಫಿ ಮತ್ತು ಈ ಎಲ್ಲ ಜಿಲ್ಲೆಗಳಲ್ಲಿ ಭತ್ತದ ಕೊಯ್ಲನ್ನು ರೈತರು ಆರಂಭಿಸಿದ್ದರು. ಭತ್ತವನ್ನು ಕೊಯ್ಲು ಮಾಡಿದ ಎರಡು ದಿನಗಳಲ್ಲಿ ಸ್ಥಳಾಂತರಿಸಿ ಒಕ್ಕಿ, ರಾಶಿ ಮಾಡಲೇಬೇಕು. ಕೆಲವೆಡೆ ಕುಯ್ದ ಬತ್ತವನ್ನು ಗದ್ದೆಗಳಲ್ಲೇ ಬಿಡಲಾಗಿದೆ, ಇನ್ನು ಕೆಲವೆಡೆ ಒಕ್ಕಲು ನಡೆಯುತ್ತಿದ್ದು ಫಸಲು ಗದ್ದೆಯಲ್ಲಿ ನೆನೆಯುವಂತಾಗಿದೆ. ಹೀಗಾಗಿ ಭತ್ತದ ತೆನೆ ಅಲ್ಲೇ ಮೊಳಕೆ ಒಡೆಯುವ ಅಪಾಯವಿದೆ.

ಇದಲ್ಲದೆ ಇತ್ತೀಚಿನ ವರ್ಷಗಳಲ್ಲಿ ಭತ್ತ, ರಾಗಿ ಒಕ್ಕಲಿಗೆ ರೈತರು ಪ್ರತ್ಯೇಕ ನಿರ್ಮಿಸುವ ಸಾಂಪ್ರದಾಯಕ್ಕೆ ಮಂಗಳ ಹಾಡಿದ್ದಾರೆ. ಎತ್ತುಗಳಿಂದ ಒಕ್ಕಣೆಕಲ್ಲು ಬಳಕೆಯು ಅಪರೂಪ. ಬದಲಿಗೆ ಯಂತ್ರ ಬಳಸಿ ಕೊಯ್ಲು ಮಾಡಿ ಸಿಮೆಂಟ್ / ಡಾಂಬರು ರಸ್ತೆಗಳಲ್ಲಿ ಹರವಿ ಟ್ರ್ಯಾಕ್ಟರ್ ಮೂಲಕ ಒಕ್ಕಲಾಗುತ್ತಿದೆ. ಇದೀಗ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ಬಿದ್ದ ನೀರು ಹೀರಿ ಹೋಗದೆ ಭತ್ತದ ಹೊರೆಗಳಲ್ಲಿ ಸಿಲುಕಿ ಬೆಳಗ್ಗೆ ಬೂಸಲು ಬರುತ್ತಿದೆ. ಮಳೆ ನಿಂತ ಮೇಲೆ ರಾಶಿ ಎತ್ತಲು ಹೋದರೆ, ಭತ್ತ ಉದುರುವುದು ಒಂದು ಸಮಸ್ಯೆಯಾದರೆ, ನೆಲ್ಲಿನ ತೊಟ್ಟು ಭಾಗದಲ್ಲಿ ನೀರು ಸಿಲುಕಿ ಅಕ್ಕಿಯ ಗುಣಮಟ್ಟ ನಾಶವಾಗುವ ಭೀತಿ ಎದುರಾಗಿದೆ. ಮಿಲ್ ಗಳಲ್ಲಿ ನುಚ್ಚು ಹೆಚ್ಚುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ.

ಕಾಫಿಗೆ ಕಾಡುವ ಫಂಗಸ್ ಭೀತಿ : ಇನ್ನು ಕಾಫಿ ಬೆಳೆಗಾರರದ್ದು ಮತ್ತೊಂದು ಸಮಸ್ಯೆ. ಕಳೆದ ಡಿಸೆಂಬರ್ ನಲ್ಲಿ ಬೆಳೆಗಾರರು ಹಣ್ಣು ಕೊಯ್ಲು ಪ್ರಾರಂಭಿಸಿದ್ದರು. ಕುಯ್ದ ದಿನವೇ ಸಿಪ್ಪೆ ಸುಲಿಯಲು ಪಲ್ಚರ್ ಮಾಡುತ್ತಾರೆ. ಇದಾದ ಬಳಿಕ ಕನಿಷ್ಠ ನಾಲ್ಕೈದು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಆದರೆ ಬಿಸಿಲು ಇಲ್ಲದೆ ವಾರದಿಂದ ಮೋಡಕವಿದ ವಾತಾವರಣ ಹಾಗೂ ಎರಡು ದಿನಗಳಿಂದ ಮಳೆ ಆಗುತ್ತಿರುವುದರಿಂದ ಕಾಫಿ ಬೀಜದಲ್ಲಿ ಫಂಗಸ್ ಉಂಟಾಗಿ ಕಂದು ಬಣ್ಣಕ್ಕೆ ತಿರುಗಿದೆ. ಕಣ್ಣದಲ್ಲಿ ಒಣಗಿಸಲು ಹಾಕಿದ ಕಾಫಿ ನೀರಿನಿಂದ ಕೊಳೆಯುವಂತಾಗಿದೆ.

ಇದರಿಂದ ಗುಣಮಟ್ಟ ಕ್ಷೀಣಿಸುತ್ತದೆ. ಇದನ್ನು ತಪ್ಪಿಸಲು ಸಿರಿವಂತ ಬೆಳೆಗಾರರು ಡ್ರೈಯರ್ ಬಳಸುತ್ತರಾದರೂ ಸಣ್ಣ, ಮಧ್ಯಮ ಬೆಳೆಗಾರರಿಗೆ ಇದು ಕಷ್ಟ ಸಾಧ್ಯ ಎನ್ನುವುದು ಅಳಲು. ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಅರೇಬಿಕ ಕಾಫಿ ಕುಯ್ಲು ಆರಂಭವಾಗಿದೆ. ರೋಬಸ್ಟಾ ಕಾಫಿಯು ಹಣ್ಣಾಗಿದ್ದು, ರೈತರು ಕೂಯ್ಲಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಮಳೆ ಸುರಿಯುತ್ತಿರುವುದರಿಂದ ಬೆಳೆ ಗಿಡದಿಂದ ಉದುರುವಂತಾಗಿದೆ. ಕಾಫಿ ಬೆಳೆಗೆ ಮಂಗಗಳ ಕಾಟವು ಅತಿಯಾಗಿದ್ದು, ಕಾಫಿ ಹಣ್ಣು ತಿಂದು ಹಾಳು ಮಾಡುತ್ತಿವೆ. ಬೆಲೆ ಗಗನಮುಖಿಯಾಗಿದ್ದರು ಕುಯ್ಲು ಮಾಡಲಾಗದೆ, ಕುಯ್ದ ಫಸಲು ಗುಣಮಟ್ಟವಿಲ್ಲದೆ ರೈತರು ನಷ್ಟ ಎದುರಿಸುವ ಆತಂಕ ತಲೆದೂರಿದೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ರಾಜ್ಯಾದ್ಯಂತ ಶೀತಗಾಳಿ, ಮಳೆ!

ರಾಜ್ಯಾದ್ಯಂತ ಶೀತಗಾಳಿ, ಮಳೆ!
– ಇಂದಿನಿಂದ 6 ದಿನಗಳ ಕಾಲ ಮಳೆ ಸಾಧ್ಯತೆ
– ಹವಮಾನ ವರದಿ ಹೇಗಿದೆ!?

NAMMUR EXPRESS NEWS
ಬೆಂಗಳೂರು: ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಜನವರಿ 4ರಿಂದ 6 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಶೀತಗಾಳಿ ಬೀಸುತ್ತಿದೆ. ಮಂಜು ಮುಸುಕಿದ ವಾತಾವರಣವಿದೆ. ಇದರ ನಡುವೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಇಂದಿನಿಂದ ಜನವರಿ 10ರವರೆಗೆ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಬುಧವಾರದಿಂದಲೂ ಮೋಡಕವಿದ ವಾತಾವರಣವಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡದ ಮಾಣಿಯಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ ವಿಜಯಪುರದಲ್ಲಿ 12.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ, 27 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್​ಎಎಲ್​ನಲ್ಲಿ 27.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 27.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 33.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 34.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳೂರಿನಲ್ಲಿ 30.4ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 30.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 15.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಮೈಸೂರಿನಲ್ಲಿ 29.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಶಿವಮೊಗ್ಗದಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Categories
ತೀರ್ಥಹಳ್ಳಿ ಹವಾಮಾನ ಸುದ್ದಿ

ಮಲೆನಾಡು, ಕರಾವಳಿಯಲ್ಲಿ ಮಳೆ!?

ಮಲೆನಾಡು, ಕರಾವಳಿಯಲ್ಲಿ ಮಳೆ!?
– ಹವಾಮಾನ ಇಲಾಖೆ ಎಚ್ಚರಿಕೆ..!
– ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ
– ಕೊಪ್ಪ‌ ಸೇರಿದಂತೆ ಹಲವೆಡೆ ಮಳೆ!

NAMMUR EXPRESS NEWS
ತೀರ್ಥಹಳ್ಳಿ : ಮಂಗಳವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಸಾಧ್ಯತೆ ಇದ್ದರೆ, ಉತ್ತರ ಕನ್ನಡದಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಹಾವೇರಿಯಲ್ಲಿ ಅಲ್ಲಲ್ಲಿ ಹಗುರ ಮಳೆ ಇರಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಲ್ಲೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೊಪ್ಪ, ಗಡಿಕಲ್ಲು, ದೇವಂಗಿ ಭಾಗದಲ್ಲಿ ಮಳೆಯಾಗುತ್ತಿದ್ದು ತೀರ್ಥಹಳ್ಳಿಯ ಸುತ್ತಮುತ್ತ ಮೋಡ ಕವಿದ ವಾತಾವರಣವಿದೆ. ಈ ಅಕಾಲಿಕ ಮಳೆಯಿಂದ ಅಡಿಕೆ ಮತ್ತು ಭತ್ತದ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಮಳೆ ಬರುವ ಸಾಧ್ಯತೆ ಹೆಚ್ಚಿದ್ದು ಬೆಳೆಗಾರರು ಎಚ್ಚರವಹಿಸಬೇಕಿದೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ಕರ್ನಾಟಕಕ್ಕೆ ಜ.1ರಿಂದ ಮತ್ತೆ ಮಳೆ ಆಗುವ ಸಾಧ್ಯತೆ!

ಕರ್ನಾಟಕಕ್ಕೆ ಜ.1ರಿಂದ ಮತ್ತೆ ಮಳೆ ಆಗುವ ಸಾಧ್ಯತೆ!
-ಹವಾಮಾನ ಇಲಾಖೆ ಮುನ್ಸೂಚನೆ
– ಜಿಲ್ಲಾವಾರು ವರದಿ!

NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಕೆಲವು ದಿನಗಳ ಕಾಲ ಮರೆಯಾಗಿದ್ದ ಮಳೆರಾಯ ಹೊಸ ವರ್ಷಕ್ಕೆ ಮತ್ತೆ ಆಗಮಿಸುವ ಮುನ್ಸೂಚನೆ ನೀಡಿದ್ದಾರೆ. ಜನವರಿ 1ರಿಂದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾರ್ಭಟ ಕಂಡು ಬರಲಿದೆ. ಇದರೊಂದಿಗೆ ಚಳಿಯ ವಾತಾವರಣವು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೊಸ ವರ್ಷಕ್ಕೆ ಹಿಂಗಾರು ಮಳೆ ತಂಪೆರೆಯಲಿದೆ. ಈವರೆಗೆ ಶುಷ್ಕ ವಾತಾವರಣವನ್ನೇ ಕಂಡಿದ್ದ ಉತ್ತರ ಒಳನಾಡಿಗೂ ಈ ಬಾರಿ ಮಳೆ ಸುರಿಯುವ ಲಕ್ಷಣಗಳು ಕಂಡು ಬಂದಿವೆ.

ಈ ಭಾಗದಲ್ಲಿ 2024ರ ಜನವರಿ 2 ರಂದು ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ವಿಜಯಪುರ ಮತ್ತು ಕೊಪ್ಪಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಆಗಲಿದೆ. ಹಲವೆಡೆ ತುಂತುರು ಮಳೆ ಸಂಭವವು ಇದೆ. ಇನ್ನೂ ಜನವರಿ 1ರಿಂದ ಎರಡು ದಿನ ಕರಾವಳಿ ಭಾಗ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ. ಒಂದೆರೆಡು ಕಡೆಗಳಲ್ಲಿ ಜೋರು ಮಳೆಯ ದರ್ಶನವು ಈ ವೇಳೆ ಆಗಲಿದೆ. ಕರಾವಳಿ ಭಾಗದಲ್ಲಿ ಇತರ ಭಾಗಕ್ಕಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಈ ಒಳನಾಡಿನ ಜಿಲ್ಲೆಗಳಿಗೂ ಮಳೆ

ದಕ್ಷಿಣ ಒಳನಾಡಿನಲ್ಲೂ ಜನವರಿ ಮೊದಲ ಎರಡು ದಿನ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ. ಎರಡು ದಿನ ಪೈಕಿ ಜನವರಿ 1ರಂದು ಚಾಮರಾಜನಗರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಲಿದೆ. ಜನವರಿ 2ರಂದು ಮೇಲಿನ ಮೂರು ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಹಾಸನ, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಲವೆಡೆ ಸಾಧಾರಣವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಳೆಯ ನಡುವೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಹೊತ್ತಿಗೆ ಚಳಿಯ ವಾತಾವರಣ, ದಟ್ಟ ಮಂಜು ಕಂಡು ಬರಲಿದೆ. ಮಧ್ಯಾಹ್ನ ಹೊತ್ತಿನಲ್ಲಿ ಎಂದಿನಂತೆ ಬಿಸಲಿನ ಕಾವು ಹೆಚ್ಚಿರಲಿದೆ. ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ ಕಂಡು ಬರಲಿದೆ.

ಗರಿಷ್ಠ-ಕನಿಷ್ಠ ತಾಪಮಾನದ ವಿವರ

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನ ಹೊನ್ನಾವರ, ಕಾರವಾರದಲ್ಲಿ ದಾಖಲಾಗಿದೆ. ಇಲ್ಲಿ ಗರಿಷ್ಠ ಕ್ರಮವಾಗಿ 36.5 ಡಿಗ್ರಿ ಸೆಲ್ಸಿಯಸ್, 36.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಳಿದಂತೆ ಪೆಣಂಬೂರಿನಲ್ಲಿ 35.6 ಡಿಗ್ರಿ ಸೆಲ್ಸಿಯಸ್, ಮಂಗಳೂರು ವಿಮಾನ ನಿಲ್ದಾಣದಲ್ಲಿ 34.5 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32, ಶಿವಮೊಗ್ಗದಲ್ಲಿ 32, ಬಾಗಲಕೋಟೆ 31, ವಿಜಯಪುರ 31, ಮಂಡ್ಯ, ಮೈಸೂರು, ಚಿಂತಾಮಣಿ ಗಳಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರದಲ್ಲಿ ಅತ್ಯಧಿಕ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ ಗೆ ಇಳಿಕೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

Categories
ರಾಜ್ಯ ಹವಾಮಾನ ಸುದ್ದಿ

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ!

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ!
– ಹವಾಮಾನ ಇಲಾಖೆ ಮುನ್ಸೂಚನೆ
– ರೈತರಿಗೆ ಮಹತ್ವದ ಮಾಹಿತಿ: ಯಾವತ್ತು ಎಲ್ಲೆಲ್ಲಿ ಮಳೆ?

NAMMUR EXPRESS NEWS
ರಾಜ್ಯದಲ್ಲಿ ಮೂರು ದಿನ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಹವಾಮಾನ ಇಲಾಖೆ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ಮೂರು ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ಉಡುಪಿ, ದ.ಕನ್ನಡ, ಉ.ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕೋಲಾರ ಮತ್ತು ರಾಮನಗರದಲ್ಲಿ ಡಿ.10ರಿಂದ ಡಿ.12ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಇನ್ನೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಮುಂದಿನ 2-3 ದಿನಗಳಲ್ಲಿ ಮತ್ತೊಂದು ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು, ಕೇರಳ, ತಮಿಳುನಾಡಿನಲ್ಲಿ ಆಲಿಕಲ್ಲು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಬಹುತೇಕ ಕಡೆ ಕೃಷಿ ಚಟುವಟಿಕೆ ಗರಿಗೆದರಿದ್ದು ಮಳೆ ಅತಂಕ ಸೃಷ್ಟಿ ಮಾಡಿದೆ.

Categories
ಮಲ್ನಾಡ್ ಹವಾಮಾನ ಸುದ್ದಿ

ಬೆಳಗ್ಗೆ 9 ಗಂಟೆವರೆಗೆ ಮುಂದುವರಿದ ಮಂಜು!

ಬೆಳಗ್ಗೆ 9 ಗಂಟೆವರೆಗೆ ಮುಂದುವರಿದ ಮಂಜು!
– ಸೈಕ್ಲೋನ್ ಎಫೆಕ್ಟ್ : ಚಳಿಗೆ ಜನ ಜೀವನ ತತ್ತರ
– ಸುಗಮ ಸಂಚಾರಕ್ಕೂ ಅಡಚಣೆ: ಬೆಂಕಿ ಮೊರೆ!

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಚಳಿಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಚಳಿ ಅನುಭವ ಜನರಿಗೆ ಅಷ್ಟಾಗಿ ಆಗಿರಲಿಲ್ಲ. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಂಜು ಆವರಿಸಿಕೊಳ್ಳುತ್ತಿದ್ದು, ನೀರಿನ ಹನಿ ಸುರಿಸುತ್ತಿದೆ. ಕಳೆದ ಎರಡು ದಿನಗಳಿಂದ ಮಂಜಿನಿಂದಾಗಿ ಬೆಳಗ್ಗೆ 9 ಗಂಟೆಯಾದರೂ ರಸ್ತೆಗಳು ಕಾಣದಂತಾಗಿದ್ದು, ಸೈಕ್ಲೋನ್ ಎಫೆಕ್ಟ್ ನಿಂದಾಗಿ ಎಲ್ಲೆಡೆ ತಂಡಿ ಹೆಚ್ಚಾಗಿ ಮಂಜು ಮುಸುಕಿದೆ. ಸೂರ್ಯ ಮುಳಗುತ್ತಿದ್ದಂತೆ ಆರಂಭವಾಗುವ ತಣ್ಣನೆಯ ಚಳಿ ರಾತ್ರಿ ಪೂರಾ ವಾತಾವರಣದೊಂದಿಗೆ ಬೆರತು ಬೆಳಗ್ಗೆ 9 ಗಂಟೆಯಾದರೂ ಮಂಜು ಆವರಿಸಿಕೊಂಡು ಜನರನ್ನು ಮನೆಯಿಂದ ಹೊರಬಾರದಂತೆ ಮಾಡಿದೆ.

ವಾಹನ ಸಂಚಾರಕ್ಕೆ ಅಡಚಣೆ

ಮಂಜಿನ ಎಫೆಕ್ಟ್‌ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಒಂಬತ್ತು ಗಂಟೆ ಯಾದರೂ ವಾಹನಗಳ ಹೆಡ್‌ಲೈಟ್‌ ಆರಿಸದೆ ಸಂಚರಿಸುವ ವಾಹನಗಳು, ಮನೆಯಿಂದ ಜನ ಆಚೆ ಬರಲು ಹಿಂದೆಮುಂದೆ ನೋಡುವಂತಾಗಿದೆ. ನಿತ್ಯ ಕೆಲಸಕ್ಕೆ ಹೋಗುವ ರೈತರು ಹೇಗಾಪ್ಪ ತೋಟದತ್ತ ಹೋಗುವುದು ಎಂದು ಯೋಚಿಸುತ್ತಾ ಕಂಬಳಿ ಹೊದ್ದು ಮನೆಯಲ್ಲಿ ಕೂರುತ್ತಿದ್ದಾರೆ. ಆಗುಂಬೆ ಸೇರಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾತಾವರಣ ಕೂಲ್ ಕೂಲ್ ಆಗಿದೆ.

ಬೆಂಕಿ ಶಾಖಕ್ಕೆ ಮೊರೆ!

ಚುಮು ಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಜನತೆ ಮನೆಯ ಒಲೆಯ ಮುಂದೆ ಬೆಂಕಿ ಕಾಯಿಸಲು ಮುಂದಾಗುತ್ತಿದ್ದು, ಕೆಲಸಗಳಿಗೆ ಬೆಳಗ್ಗೆ ಹೊರಡುವ ಜನತೆ ಬಸ್‌ ನಿಲ್ದಾಣಗಳಲ್ಲಿ ಚಳಿಗೆ ನಡುಗುತ್ತ ನಿಂತಿರುವಂತ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದೆ.

ರಾಜಧಾನಿಯಲ್ಲೂ ಚಳಿ ಚಳಿ

ಸೈಕ್ಲೋನ್ ಎಫೆಕ್ಟ್ ಹಿನ್ನೆಲೆ ರಾಜಧಾನಿಯಲ್ಲಿ ಭಾರೀ ಚಳಿ, ತಂಡಿ ಗಾಳಿ ಹೆಚ್ಚಾಗಿದೆ. ಅನೇಕರ ಅರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ.

Categories
ಬೆಂಗಳೂರು ಹವಾಮಾನ ಸುದ್ದಿ

ಮಿಚುಂಗ್ ಚಂಡಮಾರುತ ಎಫೆಕ್ಟ್: ಮತ್ತೆ ಮಳೆ!

ಮಿಚುಂಗ್ ಚಂಡಮಾರುತ ಎಫೆಕ್ಟ್: ಮತ್ತೆ ಮಳೆ!
– ರಾಜ್ಯದಲ್ಲೂ ಇನ್ನೆರಡು ದಿನ ಮಳೆ ಸಾಧ್ಯತೆ
– ಬೆಂಗಳೂರು ಸೇರಿ ಎಲ್ಲೆಡೆ ಮಳೆ ವಾತಾವರಣ

NAMMUR EXPRESS NEWS
ಬೆಂಗಳೂರು: ಮಿಚುಂಗ್ ಚಂಡಮಾರುತ ಎಫೆಕ್ಟ್ ಹಿನ್ನೆಲೆ ರಾಜ್ಯದಲ್ಲೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಕರಾವಳಿ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

ದಕ್ಷಿಣ ಕನ್ನಡಸೇರಿ ಕರಾವಳಿ ಭಾಗದಲ್ಲಿಯೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.ಮಿಚುಂಗ್ ಚಂಡಮಾರುತ ಮೂರು ರಾಜ್ಯಗಳಿಗೆ ಕಟ್ಟೆಚ್ಚರ ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಗಂಟೆಗೆ 100 – 130 ಕಿಮೀ ವೇಗದಲ್ಲಿ ಮಿಚುಂಗ್ ಚಂಡಮಾರುತ ಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ.

Categories
ಹವಾಮಾನ ಸುದ್ದಿ

ಇನ್ನೂ ಐದು ದಿನ ಭಾರೀ ಮಳೆ..!

ಇನ್ನೂ ಐದು ದಿನ ಭಾರೀ ಮಳೆ..!
– ಹವಮಾನ ಇಲಾಖೆ ಮುನ್ಸೂಚನೆ
– 17 ಜಿಲ್ಲೆಗಳಲ್ಲಿ ಮಳೆ ಅಲರ್ಟ್

NAMMUR EXPRESS NEWS
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಿಧಿಲಿ ಚಂಡಮಾರುತ ಬಳಿಕ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದೆ. ಆಗ್ನೆಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತವು ಗಂಟೆಗೆ 45 ರಿಂದ 80 ಕಿಲೋ ಮೀಟ‌ರ್ ವೇಗದಲ್ಲಿ ಬಂಗಾಳಕೊಲ್ಲಿ ಕರಾವಳಿ ಭಾಗಕ್ಕೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Categories
ಹವಾಮಾನ ಸುದ್ದಿ

4 ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್!

4 ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್!
– ಕರಾವಳಿ, ಮಲೆನಾಡಲ್ಲಿ ಅಬ್ಬರಿಸುವ ವರುಣ
– ರಾಜ್ಯದಲ್ಲಿ ಮರೆಯಾದ ಮಳೆರಾಯ

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಸೋಮವಾರ, ಮಂಗಳವಾರ, ಬುಧವಾರ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಮಲೆನಾಡಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯ ಸೂಚನೆ ಇದ್ದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಮಲೆನಾಡಲ್ಲಿ ಅಬ್ಬರಿಸುವ ವರುಣ

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯೆತೆಯೂ ಇದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸಾಧಾರಣದಿಂದ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಕೆಲವು ಗುಡುಗು, ಮಿಂಚಿನ ಮಳೆಯಾಗುವ ಬಹಳ ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.