Categories
ಚಿಕ್ಕಮಗಳೂರು

ಕಾಫಿ ನಾಡಿಗೆ ಬಂದ 340 ಕೆಜಿ ಮೀನು!

ಕಾಫಿ ನಾಡಿಗೆ ಬಂದ 340 ಕೆಜಿ ಮೀನು!
– ಚಿಕ್ಕಮಗಳೂರಲ್ಲಿ ಮೀನು ನೋಡಲು ಮುಗಿಬಿದ್ದ ಜನ
– ಎನ್.ಆರ್.ಪುರದಲ್ಲಿ ಇತ್ತೀಚಿಗೆ ದೊಡ್ಡ ಮೀನು ಪತ್ತೆ!

NAMMUR EXPRESS NEWS
ಚಿಕ್ಕಮಗಳೂರು: ಈ ವರ್ಷ ಹಲವೆಡೆ ದೊಡ್ಡ ದೊಡ್ಡ ಮೀನುಗಳು ಪತ್ತೆಯಾಗಿವೆ. ಮಂಗಳೂರು, ಉಡುಪಿ, ಎನ್. ಆರ್. ಪುರ ಸೇರಿ ಚಿಕ್ಕಮಗಳೂರಲ್ಲಿ ಬೃಹತ್ ಮೀನುಗಳು ಬಂದಿವೆ. ಈ ನಡುವೆ ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಮಂಗಳೂರಿನಿಂದ 340 ಕೆ.ಜಿ. ತೂಕದ ಬೃಹತ್ ಮೀನು ಬಂದಿದ್ದು ಆ ಮೀನು ನೋಡಲು ಗ್ರಾಹಕರು ಮುಗಿ ಬಿದ್ದಿದ್ದಾರೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಯಲ್ಲಿ ಬೃಹತ್ ಮೀನು ಬಂದಿತ್ತು. ಜನ ಅಚ್ಚರಿಗೊಂಡು ಫೋಟೋ ತೆಗೆಯಲು ಮುಂದಾಗಿದ್ದು ಕಂಡು ಬಂತು. ಇನ್ನೂ ಒಂದು ಕೆ.ಜಿ. ನಮಗೆ ಕೊಡಿ ಸಾವಿರ ರೂಪಾಯಿ ಕೊಡ್ತೀವಿ ಅಂತ ಗ್ರಾಹಕರು ದಂಬಾಲು ಬಿದ್ದರೂ ಅಂಗಡಿ ಮಾಲಿಕರು ಕೊಡಲಿಲ್ಲ. ಇತ್ತೀಚಿಗೆ ಎನ್. ಆರ್. ಪುರದಲ್ಲಿ ದೊಡ್ಡ ದೊಡ್ಡ ಮೀನುಗಳು ಸಿಕ್ಕಿರುವುದು ಭಾರೀ ಸುದ್ದಿಯಾಗಿತ್ತು.

ಏನಿದು ವಿಶೇಷ…?

ಮಂಗಳೂರಿಂದ ಬಂದ ಈ ಮೀನು ಬೃಹತ್ ಅಂಬೂರು ಫಿಶ್ ಆಗಿದ್ದು, ಸೌದಿ ಅರೇಬಿಯಾದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಮೊದಲ ಬಾರಿಗೆ ಈ ಬೃಹತ್ ಗಾತ್ರದ ಅಂಬೂರು ಮೀನನ್ನು ಅಂಗಡಿ ಮಾಲೀಕ ತರಿಸಿದ್ದಾರೆ ಎಂದು ಹೇಳುತ್ತಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.