Categories
ಚಿಕ್ಕಮಗಳೂರು

ಅನ್ಯಕೋಮಿನ ಯುವಕನಿಂದ ಕುಟುಂಬವೊಂದಕ್ಕೆ ಹಲ್ಲೆ ಬೆದರಿಕೆ

ಅನ್ಯಕೋಮಿನ ಯುವಕನಿಂದ ಕುಟುಂಬವೊಂದಕ್ಕೆ ಹಲ್ಲೆ ಬೆದರಿಕೆ 

* ಈ ಹಿಂದೆಯೂ ಹಲವು ಕೃತ್ಯಗಳಲ್ಲಿ ಆರೋಪಿ ಮೇಲೆ ಪ್ರಕರಣ ದಾಖಲು
* ಪ್ರಕರಣ ದಾಖಲಾದರು ಆರೋಪಿಯನ್ನು ಬಂಧಿನವಾಗಿಲ್ಲ

NAMMMUR EXPRESS NEWS
ಎನ್.ಆರ್ ಪುರ: ತಾಲೂಕಿನಲ್ಲಿ ಅನ್ಯಕೋಮಿನ ಯುವಕನೊಬ್ಬ ಕುಟುಂಬವೊಂದಕ್ಕೆ ಫೋನ್ ಮಾಡಿ ಹಲ್ಲೆ ಮಾಡುವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ಕುಟುಂಬವು ಪೊಲೀಸ್ ಠಾಣೆಗೆ ದೂರು ನೀಡಿದೆ.

* ಏನಿದು ಪ್ರಕರಣದ ಹಿನ್ನೆಲೆ ?
ಕೆಲವು ದಿನಗಳ ಹಿಂದೆ ಆರೋಪಿ ಯುವಕ ಯುವತಿಯೊಬ್ಬಳನ್ನು ಪ್ರೀತಿಸುವಂತೆ ಪದೇ ಪದೇ ಫೋನ್ ಮಾಡಿ ಪೀಡಿಸುತ್ತಿದ್ದ ಹಾಗೂ ಪ್ರೀತಿ ನಿರಾಕರಿಸಿದಲ್ಲಿ ಯುವತಿಯನ್ನು ಹತ್ಯೆಗಯ್ಯುವ ಎಚ್ಚರಿಕೆ ನೀಡದ್ದ ವಿಷಯ ಬೆಳಕಿಗೆ ಬಂದಿತ್ತು ಆದ್ದರಿಂದ ಯುವತಿ ಮನೆಯವರು ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದು ಲವ್ ಜಿಹಾದ್ ಎಂದು ಆರೋಪ ಕೇಳಿಬಂದಿತ್ತು. ನಂತರ ಆರೋಪಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಈಗ ಕೆಲವು ದಿನಗಳಿಂದ ಆರೋಪಿ ಯುವಕ ಯುವತಿಯ ಮನೆಯವರಿಗೆ ಫೋನ್ ಕಾಲ್ ಮಾಡಿ ಹಲ್ಲೆಯ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿ ಕುಟುಂಬಸ್ಥರು ಮತ್ತೆ ಪ್ರಕರಣ ದಾಖಲಿಸಿದ್ದಾರೆ.

* ದೂರಿನಲ್ಲೇನಿದೆ?
ಯುವತಿ ಕುಟುಂಬಸ್ಥರು ಸಲ್ಲಿಸಿದ ದೂರಿನಲ್ಲಿ ದಿ.25/05/2025 ರಲ್ಲಿ ಪ್ರಕರಣ ದಾಖಲಿಸಿದ್ದು ಇದನ್ನು ಹಿಂಪಡೆಯುವಂತೆ ಇಲ್ಲವಾದಲ್ಲಿ ತಾನು ಹೈಕೋರ್ಟ್‌ಗೆ ಹೋಗುತ್ತೇನೆ, ಯುವತಿಯ ಮಾನ ಕಳೆಯುತ್ತೇನೆ ಹಾಗು ನಿಮ್ಮನ್ನು ನಿಮ್ಮ ಮಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿರುತ್ತಾನೆ ಎಂದು ಯುವಕ ಮಾಡಿದ ಫೋನ್ ಕಾಲ್ ರೆಕಾರ್ಡ್‌ನೊಂದಿಗೆ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

* ಈ ಹಿಂದೆ ಕೂಡ ಹಲವು ಪ್ರಕರಣ ದಾಖಲಾದರೂ ಬಂಧನವಾಗಿಲ್ಲ 
ಆರೋಪಿ ಯುವಕನ ಮೇಲೆ ಇದೇ ಠಾಣೆಯಲ್ಲಿ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿವೆ. ಹಿಂದೆ ಪಟ್ಟಣದಲ್ಲಿ ಹಲ್ಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು,ನಂತರ ಆರೋಪಿ ಬೆಂಗಳೂರಿಗೆ ಹೋಗಿ ಸುತ್ತಾಡಿ ಬಂದಿದ್ದ,ನಂತರ ಯುವತಿಗೆ ಪ್ರೀತಿಸುವಂತೆ ಫೋನ್ ಕಾಲ್ ಮಾಡಿ ಪೀಡಿಸಿ ಒಪ್ಪದಿದ್ದಕ್ಕೆ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ. ಹೀಗೆ ಹಲವು ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದ್ದು,ಈತನ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ಇಷ್ಟೆಲ್ಲ ಇದ್ದರೂ ಆರೋಪಿಯನ್ನು ಬಂಧಿಸದೇ ಬಿಟ್ಟಿದ್ದು ಆರೋಪಿ ಇಷ್ಟರ ಮಟ್ಟಿಗೆ ಮುಂದುವರೆಯಲು ಕಾರಣವಾಗಿದೆ ಎಂಬ ಆರೋಪವು ಕೇಳಿಬರುತ್ತಿದೆ.
ಅದೇನೇ ಇದ್ದರೂ ಈ ಪ್ರಕರಣವನ್ನು ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ತರಿಗೆ ಕಾನೂನಡಿಯಲ್ಲಿ ಕಠಿಣ ಶಿಕ್ಷೆ ಕೊಡಿಸಬೇಕಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.