Categories
ಚಿಕ್ಕಮಗಳೂರು

ಚಿಕ್ಕಮಗಳೂರಿಂದ ಬಸರೀಕಟ್ಟೆಗೆ ಸರ್ಕಾರಿ ಬಸ್ ಸಂಚಾರಕ್ಕೆ ಮನವಿ

ಚಿಕ್ಕಮಗಳೂರಿಂದ ಬಸರೀಕಟ್ಟೆಗೆ ಸರ್ಕಾರಿ ಬಸ್ ಸಂಚಾರಕ್ಕೆ ಮನವಿ

* 20000 ಕ್ಕೂ ಅಧಿಕ ಜನರು ವಾಸಿಸುವ ಬಸರೀಕಟ್ಟೆ
* ಹೆರೂರು – ಬಸರೀಕಟ್ಟೆ ವೃತ್ತದಲ್ಲಿ ಬಸ್ ನಿಲ್ಲಿಸಿ

NAMMMUR EXPRESS NEWS
ಕೊಪ್ಪ/ಬಸರೀಕಟ್ಟೆ: ಬಸರಿಕಟ್ಟೆಯಿಂದ ಚಿಕ್ಕಮಗಳೂರಿಗೆ ಹೋಗುವ ನಾಗರಿಕರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಸಿನ ಅವಶ್ಯಕತೆ ಇದೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದ ಸ್ವಾಮಿ ತಿಳಿಸಿದ್ದಾರೆ.ಈ ಸಂಬಂಧ ರಾಜ್ಯ ರಸ್ತೆ ಸಾರಿಗೆಯ ಚಿಕ್ಕಮಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ.
ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಹೋಗಲು ರಾಜ್ಯ ಸಾರಿಗೆ ಬಸ್ ಇಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅತ್ತಿಕೊಡಿಗೆ, ತೆನೆಕಲ್ಲು ಸೇರಿದಂತೆ ಹಲವಾರು ಗ್ರಾಮದಲ್ಲಿ ಸುಮಾರು 20000 ನಾಗರೀಕರು ವಾಸಿಸುತ್ತಿದ್ದು ಇವರ ಅನುಕೂಲಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಂದರ್ಭದಲ್ಲಿ ಹೇರೂರು ಬಸರೀಕಟ್ಟೆ ವೃತ್ತದಲ್ಲಿ ಎಲ್ಲಾ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಲಾಗಿದೆ.
ಮನವಿಗೆ ಸ್ಪಂದಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕ ಸುರೇಂದ್ರ, ಗಿರೀಶ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.