Categories
ಚಿಕ್ಕಮಗಳೂರು

ಜಂಬಿಟ್ಟಿಗೆ ಉತ್ಪಾದನೆ ಪುನರಾರಂಭಿಸಲು ತಹಶೀಲ್ದಾರ್,MLA,MP ಗೆ ಮನವಿ

ಜಂಬಿಟ್ಟಿಗೆ ಉತ್ಪಾದನೆ ಪುನರಾರಂಭಿಸಲು ತಹಶೀಲ್ದಾರ್,MLA,MP ಗೆ ಮನವಿ

* ದಕ್ಷಿಣ ಕನ್ನಡದಲ್ಲಿ ಜಂಬಿಟ್ಟಿಗೆ ಉತ್ಪಾದನೆ ಸ್ಥಗಿತ
* ಕಾರ್ಮಿಕ ಮಿತ್ರ ಬಳಗ ಹಾಗೂ ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘದಿಂದ ಮನವಿ

NAMMMUR EXPRESS NEWS
ಶೃಂಗೇರಿ : ದಕ್ಷಿಣ ಕನ್ನಡದಲ್ಲಿ ಜಂಬಿಟ್ಟಿಗೆ (ಕೆಂಪುಕಲ್ಲು) ಉತ್ಪಾದನೆ ಸ್ಥಗಿತಗೊಂಡಿದ್ದು,ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದೆ. ಇದರಿಂದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತಹ ಪರಿಸ್ಥಿತಿ ಎದುರಾಗಿದೆ ಹಾಗಾಗಿ ಕೂಡಲೇ ಈ ಆದೇಶವನ್ನು ಮರುಪರಿಶೀಲಿಸಿ ಜಂಬಿಟ್ಟಿಗೆ ಉತ್ಪಾದನೆಯನ್ನು ಪುನರಾಂಭಗೊಳಿಸಬೇಕು ಎಂದು ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಹಾಗೂ ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘದ ವತಿಯಿಂದ ತಾಲೂಕಿನ ತಹಶೀಲ್ದಾರ್,ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಯಿತು.
ಮಲೆನಾಡು ಭಾಗದಲ್ಲಿ ಈ ಕೆಲಸವನ್ನೇ ಆಧರಿಸಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದೆ. ಸರ್ಕಾರದ ಈ ನಿಯಮದಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಈ ಆದೇಶವನ್ನು ಪುನರ್ ಪರಿಶೀಲಿಸಿ ಜಂಬಿಟ್ಟಿಗೆ ಉತ್ಪಾದನೆ ಪುನರಾರಂಭಿಸಬೇಕು ಎಂದು ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇದರ ಅಧ್ಯಕ್ಷರಾದ ರಮೇಶ್ ಶೂನ್ಯ ಸರ್ಕಾರ ಹಾಗೂ ಇಲಾಖೆಯನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ್ ಶೂನ್ಯ,ಉಪಾಧ್ಯಕ್ಷ ಪ್ರಶಾಂತ್ ಕೆ.ಶೆಟ್ಟಿ,ಕಾರ್ಯದರ್ಶಿ ವಿಶ್ವಾಸ್ ಜಿ.ವಿ,ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಭಾಸ್ಕರ್ ಪೂಜಾರಿ,ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ,ಕಾರ್ಯದರ್ಶಿ ಶ್ರೀಹರ್ಷ,ಮುನಿಸ್ವಾಮಿ,ರಮೇಶ್ ಬಿ,ರಾಜು ಕೆ.ಎಸ್‌ರವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.