Categories
ಚಿಕ್ಕಮಗಳೂರು

ಆನ್‌ಲೈನ್ ವಂಚನೆಗೆ ಒಳಗಾದವರಿಗೆ ಹಣ ಮರಳಿ ನೀಡುವಂತೆ ಬ್ಯಾಂಕ್‌ಗೆ ಆದೇಶ

ಆನ್‌ಲೈನ್ ವಂಚನೆಗೆ ಒಳಗಾದವರಿಗೆ ಹಣ ಮರಳಿ ನೀಡುವಂತೆ ಬ್ಯಾಂಕ್‌ಗೆ ಆದೇಶ

* ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು
* ಆನ್‌ಲೈನ್ ವಂಚನೆಗೆ ಒಳಗಾಗಿದ್ದ ಕೊಪ್ಪದ ರಜನಿ ಸತೀಶ್ ಎಚ್.ಸಿ
NAMMMUR EXPRESS NEWS
ಚಿಕ್ಕಮಗಳೂರು : ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಆನ್‌ಲೈನ್ ಮೂಲಕ ವಂಚನೆಗೆ ಒಳಗಾಗಿದ್ದ ಗ್ರಾಹಕರಿಗೆ ಕಳೆದುಕೊಂಡಿರುವ ಹಣವನ್ನು ಭರಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ರಸ್ತೆಯ ರಜನಿ ಸತೀಶ್ ಹೆಚ್.ಸಿ. ಎಂಬುವರು ಕೆನರಾ ಬ್ಯಾಂಕ್‌ ಕೊಪ್ಪ ಶಾಖೆಯಲ್ಲಿ ಖಾತೆ ಹೊಂದಿದ್ದು, ಆನ್‌ಲೈನ್ ವಂಚನೆಗೆ ಒಳಗಾಗಿ ಖಾತೆಯಿಂದ 2,25,000 ರೂ.ಗಳನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ಬ್ಯಾಂಕ್‌ನಲ್ಲಿ ವ್ಯವಹರಿಸಿ ಈ ಮೊತ್ತವನ್ನು ಹಿಂದಿರುಗಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದ್ದರು. ಬ್ಯಾಂಕ್ ಈ ಹಣವನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಜನಿಯವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ ಮತ್ತು ಸದಸ್ಯೆ ಇ.ಇಂದಿರಾ ಕೆನರಾ ಬ್ಯಾಂಕ್‌ನವರು 2,25,000 ಲಕ್ಷ ರೂ. ಹಣವನ್ನು ವಾರ್ಷಿಕ ಶೇ. 9% ರಂತೆ ಬಡ್ಡಿ ಸೇರಿಸಿ ನೀಡುವಂತೆ ಹಾಗೂ ಪರಿಹಾರವಾಗಿ 15 ಸಾವಿರ ಮತ್ತು ಪ್ರಕರಣದ ಖರ್ಚು-ವೆಚ್ಚಕ್ಕಾಗಿ 10 ಸಾವಿರ ರಜನಿಯವರಿಗೆ ಪಾವತಿಸುವಂತೆ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.