Categories
ಚಿಕ್ಕಮಗಳೂರು

ಶೃಂಗೇರಿ ‌ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಗೆ ಕರೆ

ಶೃಂಗೇರಿ ‌ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಗೆ ಕರೆ

* ತಜ್ಞ ವೈದ್ಯರ ಕೊರತೆ,ಅವ್ಯವಸ್ಥೆಯ ಆಗರ ಶೃಂಗೇರಿ ಸರ್ಕಾರಿ ಆಸ್ಪತ್ರೆ
* ಇನ್ನೂ ಶುರುವಾಗಿಲ್ಲ ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ಕಾಮಗಾರಿ
* ಎನ್ ಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯರಿಲ್ಲ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ವೈದ್ಯರುಗಳ ಕೊರತೆಯನ್ನು ಖಂಡಿಸಿ ಆ.11 ರ ಸೋಮವಾರ ಬೆಳಿಗ್ಗೆ 10:30 ರಿಂದ ಪ್ರತಿಭಟನೆಗೆ ಶೃಂಗೇರಿ ತಾಲೂಕು ಬಿಜೆಪಿ ಕರೆ ಕೊಟ್ಟಿದೆ.
ಬಿಜೆಪಿ ನಾಯಕ,ಮಾಜಿ ಶಾಸಕ ಡಿ ಎನ್ ಜೀವರಾಜ್ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿಯ ಎಲ್ಲಾ ಪದಾಧಿಕಾರಿಗಳು,ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು,ಚುನಾಯಿತ ಪ್ರತಿನಿಧಿಗಳು,ಕಾರ್ಯಕರ್ತರು,ಸಾರ್ವಜನಿಕರು ಭಾಗವಹಿಸಿ ಸರ್ಕಾರ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಶೃಂಗೇರಿ ತಾಲೂಕು ಬಿಜೆಪಿ ಮಾಹಿತಿ ನೀಡಿದೆ.

* ಶುರುವಾಗದ ನೂರು ಬೆಡ್ ಆಸ್ಪತ್ರೆ ಕಾಮಗಾರಿ
ತಾಲೂಕಿನ ಜನರ ಹಲವು ವರ್ಷಗಳ ಬೇಡಿಕೆಯಾದ ಸುಸಜ್ಜಿತ ನೂರು ಬೆಡ್ ಸರ್ಕಾರಿ ಆಸ್ಪತ್ರೆ ಹಲವು ಹೋರಾಟಗಳ ನಂತರ ಕೊನೆಗೂ ಅನುಮೋದನೆ ದೊರೆತು ಜಾಗ ಗುರುತು ಮಾಡಲಾಗಿದೆ.ಆದರೆ ಒಮ್ಮೆ ಶಂಕುಸ್ಥಾಪನೆ ದಿನಾಂಕ ನಿಗದಿಯಾಗಿ ಆರೋಗ್ಯ ಸಚಿವರೇ ಬಂದು ಕಾರ್ಯಕ್ರಮ ನೆರವೇರಿಸೋದಾಗಿ ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿತ್ತು ಆದರೆ ಕಡೇ ಕ್ಷಣದಲ್ಲಿ ಅತಿಯಾದ ಮಳೆಯ ಕಾರಣ ಕಾರ್ಯಕ್ರಮ ಸ್ಥಗಿತಗೊಂಡಿತ್ತು, ಮುಂದೂಡಿದ ಕಾರ್ಯಕ್ರಮ ಮತ್ತೆ ನಿಗದಿಯಾಗದೇ ಹಾಗೇ ಶಂಕುಸ್ಥಾಪನೆಯಾಗದೇ ಉಳಿದಿದೆ ಆದ್ದರಿಂದ ಬೇರಾವ ಕಾಮಗಾರಿಯು ಶುರುವಾಗಿಲ್ಲ ಈ ಬಗ್ಗೆ ತಾಲೂಕಿನ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ,ಅಂತೆಯೇ ಸದ್ಯ ಗುರುತಿಸಿದ ಜಾಗ ಶೃಂಗೇರಿ ಪಟ್ಟಣದಿಂದ ಸುಮಾರು 3 ಕಿ.ಮೀ ದೂರದಲ್ಲಿದ್ದು,ಪಟ್ಟಣ ವ್ಯಾಪ್ತಿಯಿಂದ ಹೊರಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ತಾಲೂಕು ಬಿಜೆಪಿ ಪ್ರತಿಭಟನೆಗೆ ಕರೆಕೊಟ್ಟಿದ್ದು,ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದೆ.

* ಎನ್ ಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲೂ ವೈದರಿಲ್ಲ
ಎನ್ ಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯರಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು,ಈ ಹಿಂದೆ ಲಭ್ಯವಿದ್ದ ನುರಿತ ವೈದ್ಯರ ಅಲಭ್ಯತೆ ಬಗ್ಗೆ ಹಾಗೂ ಸೂಕ್ತ ಚಿಕಿತ್ಸೆ ಸಿಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.