ಶಾಸಕರ ವಿರುದ್ಧ ಶೃಂಗೇರಿಯಲ್ಲಿ ಪ್ರತಿಭಟನೆ ನಡೆಸಲಿರೋ ಬಿಜೆಪಿ
* ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ
* ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ವೈಫಲ್ಯ – ಬಿಜೆಪಿ ಆರೋಪ
NAMMUR EXPRESS NEWS
ಶೃಂಗೇರಿ: ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಶೃಂಗೇರಿ ತಾಲೂಕು ಹಾಗೂ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ವೈಫಲ್ಯ ಎದ್ದು ಕಾಣುತ್ತಿದ್ದು ತಾಲೂಕಿನಾದ್ಯಂತ ರೈತರು,ಸಾರ್ವಜನಿಕರಿಗೆ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಶೃಂಗೇರಿ ತಾಲೂಕು ಬಿ ಜೆ ಪಿ ವತಿಯಿಂದ ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದೆ.
ದಿನಾಂಕ 17/03/2025 ರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ರಾಷ್ಟ್ರಕವಿ ಕುವೆಂಪು ಮುಖ್ಯ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಉಮೇಶ್ ತಲಗಾರ್‌ರವರು ಮಾಹಿತಿ ನೀಡಿದ್ದಾರೆ ಮತ್ತು ಈ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ರೈತರು,ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಸಭೆಯಲ್ಲಿ ಆಗ್ರಹಿಸುವ ತಾಲೂಕಿನ ಪ್ರಮುಖ ಅಂಶಗಳೇನು ??
* ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇಯನ್ನು ಈ ಕೂಡಲೇ ಪ್ರಾರಂಭಿಸಬೇಕು.
* ಜಂಟಿ ಸರ್ವೇ ಪೂರ್ಣಗೊಳಿಸದೇ ರೈತರ ಯಾವುದೇ ಕೃಷಿಭೂಮಿಯನ್ನು ತೆರವುಗೊಳಿಸಬಾರದು.
* ರೈತರ ಕೃಷಿ ಭೂಮಿ ಮತ್ತು ಕಾರ್ಮಿಕರ ವಾಸದ ಮನೆ, ದೇವಸ್ಥಾನಗಳನ್ನು ಹೊರತುಪಡಿಸಿ ಜಂಟಿ ಸರ್ವೇ ನಡೆಸಬೇಕು.
* ತಾಲ್ಲೂಕಿನಲ್ಲಿ ಈಗಾಗಲೇ ಮಾಡಿರುವ ಕಾಫಿ ಕೃಷಿಯನ್ನು ಲೀಸ್ ಕಾಯ್ದೆಯಡಿ ರೈತರಿಗೆ ನೀಡಬೇಕು.
* 100 ಬೆಡ್ ಆಸ್ಪತ್ರೆ ಪ್ರಾರಂಭಿಸುವಲ್ಲಿ ಹಾಗೂ ಇರುವ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ತಕ್ಷಣ ಕ್ರಮಗೊಳ್ಳಬೇಕು.
* ಕೆರೆ ಗ್ರಾಮ ಪಂಚಾಯ್ತಿ ಪುನರ್‌ವಸತಿ ಮೌಲ್ಯ ಮಾಪನದಲ್ಲಿ ತಾರತಮ್ಯ ಸರಿಪಡಿಸಬೇಕು.
* ಕಾಡು ಪ್ರಾಣಿಗಳಿಂದ ಜೀವ ಹಾನಿಯಾದಲ್ಲಿ 25 ಲಕ್ಷ ಪರಿಹಾರ ನೀಡಬೇಕು.
* ಕೆರೆ ಗ್ರಾಮ ಪಂಚಾಯ್ತಿಯಲ್ಲಿ ವಾಸವಾಗಿರುವ ಪ್ರತಿ ಮನೆ ಹಾಗೂ ಕೃಷಿ ಒತ್ತುವರಿಯನ್ನು ಮೌಲ್ಯಮಾಪನದಲ್ಲಿ ಪರಿಗಣಿಸಬೇಕು.
* ಕೇಂದ್ರದ ಮಹತ್ವಾಕಾಂಕ್ಷಿ ಜಲಜೀವನ ಯೋಜನೆಯ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚರವನ್ನು ತನಿಖೆ ನಡೆಸಬೇಕು.
* ರೈತರ ಕೃಷಿ ಬಳಕೆ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು.
* ವಿದ್ಯಾರ್ಥಿಗಳ ಪರೀಕ್ಷಾ ವೇಳೆಯಲ್ಲಿ ಮಾರ್ಚ್‌ನಿಂದ ಮೇವರೆಗೆ ವಿದ್ಯುತನ್ನು ಸಮರ್ಪಕವಾಗಿ ಪೂರೈಕೆಮಾಡಬೇಕು.
* ಪಟ್ಟಣ ಮತ್ತು ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಬೇಕು.
* ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಗೆ ಆಶ್ರಯ ನಿವೇಶನಕ್ಕಾಗಿ ತಲಾ 5 ಎಕರೆ ಜಾಗ ಗುರುತು ಮಾಡಿ ನಿಗಧಿಗೊಳಿಸಬೇಕು.
* ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ ಇವುಗಳ ಅಭಿವೃದ್ಧಿ, ವಿದ್ಯಾರ್ಥಿವೇತನಗಳಿಗೆ ಮೀಸಲಿಟ್ಟ ಹಣವನ್ನು ಮರಳಿ ನಿಗಮಗಳಿಗೆ ನೀಡಬೇಕು.
* ರೈತರ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರವನ್ನು ನಿಗದಿಗೊಳಿಸಬೇಕು.
* ಹಾಲು ಇನ್ನಿತರ ದಿನಬಳಕೆ ವಸ್ತುಗಳ ಮಿತಿಮೀರಿದ ಬೆಳೆ ಏರಿಕೆ ಹಾಗೂ ಪೆಟ್ರೋಲ್/ಡೀಸೆಲ್ ಗಳ ರಾಜ್ಯಸುಂಕ ಏರಿಕೆ ವಿರೋಧಿಸಿ,
* ಫಾರಂ ನಂ. 50, 53 ರಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರ ಅರ್ಜಿಗಳನ್ನು ಹಿಂದಿನ ಸರ್ಕಾರದ ನಮ್ಮ ಶಾಸಕರು ವಿಲೇವಾರಿ ಮಾಡಿ ಸಾಗುವಳಿ ಚೀಟಿ ನೀಡಿದ್ದು, ಅಂತಹ ರೈತರಿಗೆ ಕೂಡಲೇ ಯಾವುದೇ ಕಾರಣ ಹೇಳದೇ ಪಹಣಿ ವಿತರಿಸುವ ಕ್ರಮವಹಿಸಬೇಕು.
* ಅಕ್ರಮ-ಸಕ್ರಮ ಸಮಿತಿ ರಚಿಸಿದ್ದರೂ ಸಮಿತಿಯ ಸಭೆ ಮಾಡದೇ ನಿರ್ಲಕ್ಷ್ಯವಹಿಸಿದ್ದು, ಸಮಿತಿಯ ಸಭೆ ನಡೆಸಿ ಫಾರಂ 50, 53, 57 ಮತ್ತು 94ಸಿ, 94ಸಿಸಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು.
