ಕಾಫಿನಾಡಿನಲ್ಲಿಂದು ಬಿಜೆಪಿಯಿಂದ ಜನಾಕ್ರೋಶ ಯಾತ್ರೆ
* ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರೋ ಯಾತ್ರೆ
* ಆರ್.ಅಶೋಕ್,ಸಿ.ಟಿ ರವಿ,ಕೋಟಾ,ಛಲವಾದಿ ನಾರಾಯಣ ಸ್ವಾಮಿ ಹಲವು ನಾಯಕರು ಭಾಗಿ
NAMMMUR EXPRESS NEWS
ಚಿಕ್ಕಮಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ,ಮುಸ್ಲಿಮರ ಓಲೈಕೆ,ಹಿಂದುಳಿದ ವರ್ಗದ ಹಣ ಲೂಟಿ,ಜನವಿರೋಧಿ ನೀತಿಗಳನ್ನು ಖಂಡಿಸಿ ರಾಜ್ಯದ್ಯಾದಂತ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಇಂದು ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಲಿದೆ.
ಮಧ್ಯಾಹ್ನ 1 ಗಂಟೆಗೆ ಉಡುಪಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದು ನಂತರ 4 ಗಂಟೆಗೆ ಮೂಡಿಗೆರೆ ಮೂಲಕ ಚಿಕ್ಕಮಗಳೂರಿಗೆ ಆಗಮಿಸಲಿದೆ.
ನಗರದ ಅರಳಿ ಮರದಿಂದ ಬಸವನಹಳ್ಳಿ ಮುಖ್ಯ ರಸ್ತೆಯ ಮೂಲಕ ಅಜಾದ್ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನೆಡೆಯಲಿದ್ದು ನಂತರ ಶಂಕರ ಮಠದಲ್ಲಿ ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ.
ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಪರಿಷತ್ ಸದಸ್ಯ ಸಿ.ಟಿ ರವಿ,ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಕಾರ್ಕಳ ಶಾಸಕ ಸುನಿಲ್ ಕುಮಾರ್,ಡಿ.ಎನ್ ಜೀವರಾಜ್,ದೀಪಕ್ ದೊಡ್ಡಯ್ಯ,ಬೆಳ್ಳಿ ಪ್ರಕಾಶ್,ಸುರೇಶ್ ಸೇರಿದಂತೆ ಜಿಲ್ಲೆಯ ಐದೂ ಕ್ಷೇತ್ರಗಳಿಂದ ಸಾವಿರಾರೂ ಜನ ಸೇರಲಿದೆ. ಪ್ರತಿ ತಾಲೂಕಿನ ಪ್ರತಿ ಬೂತ್‌ನಿಂದ ಕಾರ್ಯಕರ್ತರು,ಪ್ರಮುಖರು ಜನೋಕ್ರೋಶ ಯಾತ್ರೆಗೆ ಆಗಮಿಸಲಿದ್ದಾರೆ.
