ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಬಸ್ !!
* ಹಲವರಿಗೆ ಗಂಭೀರ ಗಾಯ-ಮನೆ ಸಂಪೂರ್ಣ ಜಖಂ
* ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ,ಮಾಜಿ ಶಾಸಕರ ಭೇಟಿ
NAMMMUR EXPRESS NEWS
ಕೊಪ್ಪ/ಜಯಪುರ: ತಾಲೂಕಿನ ಜಯಪುರ ಸಮೀಪದ ಮೂರುಗದ್ದೆ ಎಂಬಲ್ಲಿ ಚಾಲಕನ ತಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಮನೆ ಮೇಲೆ ಬಿದ್ದಿದೆ. ಜಯಪುರ ಬಾಳೆಹೊನ್ನೂರು ಮಾರ್ಗ ಮಧ್ಯೆಯ ಜಲದುರ್ಗದ ಬಳಿ ಈ ಘಟನೆ ಸಂಭವಿಸಿದ್ದು ಬಸ್ಸಿನಲ್ಲಿದ್ದ 50 ಮಂದಿ ಪ್ರಯಾಣಿಕಲ್ಲಿ 20 ಪ್ರಯಾಣಿಕರಿಗೆ ಗಾಯಗಳಾಗಿದೆ, ಗಾಯಾಳುಗಳನ್ನು ಕೊಪ್ಪ,ಶೃಂಗೇರಿ,ಜಯಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಬಸ್ ಮನೆ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ. ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿದ್ದ ಬಸ್ ಇದಾಗಿದ್ದು ಘಟನೆ ಸಂಬಂಧ ಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹಾಗೂ ಕ್ಷೇತ್ರದ ಮಾಜಿ ಶಾಸಕ ಡಿ.ಎನ್ ಜೀವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯ ಮಾಲೀಕರಾದ ಪುಟ್ಟಪ್ಪ ಹಾಗೂ ಗಾಯಗೊಂಡ ಪ್ರಯಾಣಿಕರ ಆರೋಗ್ಯ ವಿಚಾರಿಸಿದ್ದಾರೆ.ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು.
