Categories
ಚಿಕ್ಕಮಗಳೂರು

ಶೃಂಗೇರಿ ಜೆಸಿಬಿಎಂ ಕಾಲೇಜಲ್ಲಿ ಕ್ಯಾಂಪಸ್ ಕಟ್ಟೆ!

ಶೃಂಗೇರಿ ಜೆಸಿಬಿಎಂ ಕಾಲೇಜಲ್ಲಿ ಕ್ಯಾಂಪಸ್ ಕಟ್ಟೆ!

– ರೇಡಿಯೋ ಕೇಳುವ ಹವ್ಯಾಸ ವೃದ್ಧಿಗೆ ಹೊಸ ಯೋಜನೆ
– ಸುಬ್ರಮಣ್ಯ ಶರ್ಮ ಅವರಿಂದ ವಿಶೇಷ ಕಾರ್ಯಕ್ರಮ
– ಶೃಂಗೇರಿ ವಿದ್ಯಾರ್ಥಿಗಳ ಜೋಶ್, ಕ್ರಿಯೇಟಿವಿಟಿಗೆ ಮೆಚ್ಚುಗೆ

NAMMUR EXPRESS NEWS
ಶೃಂಗೇರಿ: ವಿದ್ಯಾರ್ಥಿಗಳಲ್ಲಿ ರೇಡಿಯೋ ಕೇಳುವ ಹವ್ಯಾಸವನ್ನು ಉತ್ತೇಜಿಸುವ ಉದ್ದೇಶದಿಂದ ಕ್ಯಾಂಪಸ್ ಕಟ್ಟೆ ಎನ್ನುವ ಕಾರ್ಯಕ್ರಮ ಆಯೋಜನೆ ಮಾಡಿದ್ದು ಈ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ಶ್ರೀ ಜೆ ಸಿ ಬಿ ಎಂ ಕಾಲೇಜಿನ ಸಹಯೋಗದೊಂದಿಗೆ ಸುಬ್ರಮಣ್ಯ ಶರ್ಮ ಅವರು ಈ ಕಾರ್ಯಕ್ರಮವನ್ನು ಇತ್ತೀಚಿಗೆ ನಡೆಸಿಕೊಟ್ಟರು.

ವಿದ್ಯಾರ್ಥಿಗಳಲ್ಲಿ ರೇಡಿಯೋ ಕೇಳುವ ಹವ್ಯಾಸವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ ಪ್ರತಿನಿಧಿಯಾಗಿ ಡಾ. ಬಸವರಾಜ್ ಹೆಚ್ ಅವರು ಕ್ಯಾಂಪಸ್ ಕಟ್ಟೆ ಎಂಬ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಆರ್ ಎಂ ರಕ್ಷಿತ್ ದ್ವಿತೀಯ ಪಿಯುಸಿ ಇವರು ಶೃಂಗೇರಿ ಕ್ಷೇತ್ರದ ಕುರಿತು, ಐಶ್ವರ್ಯ ಪಿ ಪ್ರಥಮ ಬಿಎಸ್ಸಿ ಇವರು ಕಾಲೇಜಿನ ಸಂಸ್ಥಾಪಕರ ಕುರಿತು, ಪೂಜಾ ವಿ ಪಿ ದ್ವಿತೀಯ ಪಿಯುಸಿ ಇವರು ಪುಣ್ಯಕ್ಷೇತ್ರ ಕಿಗ್ಗದ ಕುರಿತು, ಸುಭಾಷ್ ಶರ್ಮ ಅಂತಿಮ ಬಿಕಾಂ ಅವರು ಶಂಕರಾಚಾರ್ಯರ ಕುರಿತು, ಚಂದನ್ ಹೊರನಾಡು ಪ್ರಥಮ ಬಿಎ ಅವರು ಶಿವರಾಮ ಕಾರಂತರ ಕುರಿತು, ವಿಜಿತ ಎಸ್ ವಿ ಅಂತಿಮ ಬಿಕಾಂ ಅವರು ಸ್ಥಳೀಯ ಕಲಾವಿದರಾದ ರಮೇಶ್ ಬೇಗಾರ ರವರ ಕುರಿತು, ಸಚಿನ್ ಹೊಳೆಹದ್ದು ಅಂತಿಮ ಬಿಎ ಅವರು ಮಲೆನಾಡಿನ ಸಂಸ್ಕೃತಿಯ ಕುರಿತು ಹಾಗೂ ತೇಜಸ್ವಿನಿ ಅಂತಿಮ ಬಿಕಾಂ ಅವರು ಶೃಂಗೇರಿ ರಾಮಣ್ಣನವರ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬರಲು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಸ್ವಾಮಿ, ಸಂತೋಷ್ ಕುಮಾರ್, ಪ್ರಜ್ವಲಾ ರಾಜ್, ಕುಮಾರಿ ಶಶಿರೇಖಾ, ರಶ್ಮಿ ಕೆ, ನಾಗೇಂದ್ರ ಎನ್.ವಿ ಕಾರಣರಾದರು. ವಿದ್ಯಾರ್ಥಿಗಳ ಭಾಷೆ ಹಾಗೂ ಜ್ಞಾನ ಮೆಚ್ಚುಗೆ ಪಡೆಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.