– ಲೋಡ್ ಶೆಡ್ಡಿಂಗ್ ವಿರುದ್ಧ ಬೀದಿಗಳಿದ ರೈತರು!
– ಚಿಕ್ಕಮಗಳೂರು ನಗರದಲ್ಲಿ ರೈತ ಸಂಘದ ಹೋರಾಟ
– ಮೂಡಿಗೆರೆ: ಅರಣ್ಯಾಧಿಕಾರಿಗಳ ಕಾಲಲ್ಲೇ ಕಿತ್ತಾಟ: ವೈರಲ್
– ದೇವರಮನೆ ಗುಡ್ಡ ಪ್ರವಾಸಿ ಮಾರ್ಗದಲ್ಲಿ ಅನೈತಿಕ ಚಟುವಟಿಕೆ
– ಏಟಿಎಂ ಒಡೆದು 15 ಲಕ್ಷ ದೋಚಿದರು!
NAMMUR EXPRESS NEWS
ಚಿಕ್ಕಮಗಳೂರು: ಎಲ್ಲೆಡೆ ಈಗ ಲೋಡ್ ಶೆಡ್ಡಿಂಗ್ ಗಲಾಟೆ ಶುರುವಾಗಿದೆ. ಅನಿಯಂತ್ರಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶೆಡ್ಡಿಂಗ್‌ನಿಂದಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರದ ತಾಲ್ಲೂಕು ಕಚೇರಿಯಿಂದ ಮೆಸ್ಕಾಂ ಕಚೇರಿ ವರೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದ್ದಲ್ಲದೆ ಕೂಡಲೇ ಲೋಡ್ ಶೆಡ್ಡಿಂಗ್ ಸ್ಥಗಿತಗೊಳಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ,ಮುಖಂಡರುಗಳಾದ ಎಂ.ಸಿ.ಬಸವರಾಜು, ಕೆ.ಬಿಲೋಕೇಶ್, ಪರ್ವತೇಗೌಡ, ಶಂಕರಪ್ಪ ಇತರರು ಭಾಗವಹಿಸಿದ್ದರು.
ಕುಡಿದ ಮತ್ತಿನಲ್ಲಿ ಕರ್ತವ್ಯ ಮರೆತ ಅಧಿಕಾರಿಗಳು!
ಕುಡಿದ ಮತ್ತಿನಲ್ಲಿ ಕರ್ತವ್ಯ ಮರೆತ ಅಧಿಕಾರಿಗಳಿಂದ ಪರಸ್ಪರ ನಿಂದನೆ, ಕಿತ್ತಾಟ ನಡೆಸಿದ್ದು ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ವಸತಿಗೃಹದ ಶೌಚಾಲಯದಲ್ಲಿನ ಪೈಪ್ ಒಡೆದು ಹೋಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಬ್ಬರು ಕಿತ್ತಾಡಿಕೊಂಡಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ನವೀನ್ ಕಿತ್ತಾಟದ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಾಚ್ಯ ಶಬ್ದಗಳಿಂದ ಸಣ್ಣ ಮಕ್ಕಳಂತೆ ವರ್ತಿಸಿದ್ದಾರೆ ಎನ್ನಲಾಗಿದೆ.
ದೇವರಮನೆ ಗುಡ್ಡ ಪ್ರವಾಸಿ ಮಾರ್ಗದಲ್ಲಿ ಅನೈತಿಕ ಚಟುವಟಿಕೆ
ಇತಿಹಾಸ ಪ್ರಸಿದ್ಧ ದೇವರಮನೆಗುಡ್ಡ ಪ್ರವಾಸಿ ತಾಣದ ಬಳಿ ಪ್ರವಾಸಿಗರು ಮದ್ಯ ಸೇವಿಸಿ ರಸ್ತೆ ಬದಿ ಕುಣಿದು ಮೋಜು ಮಸ್ತಿ ಮಾಡಿದ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣ ಆಗಿದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ದೇವರಮನೆಗುಡ್ಡಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬ ಸಮೇತ ಭೇಟಿ ನೀಡುವ ಸುಂದರ ಸೊಬಗಿನ ತಾಣ ಇದಾಗಿದ್ದು ಪ್ರವಾಸಿಗರ ವರ್ತನೆಗೆ ಇಲ್ಲಿ ಬಂದ ಇತರ ಪ್ರವಾಸಿಗರಿಗೆ ಇರುಸು ಮುರಿಸು ಆದಂತಾಗಿದೆ.
ರಸ್ತೆ ಬದಿ ಮದ್ಯ ಸೇವಿಸಿ ಪ್ರವಾಸಿಗರು ನೃತ್ಯ ಮಾಡಿದ್ದು ಅಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಯುವಕರ ವರ್ತನೆಯನ್ನು ಸೆರೆ ಹಿಡಿದಿದ್ದಾರೆ ಅಲ್ಲದೆ ಪ್ರವಾಸಿ ತಾಣಗಳಲ್ಲಿ ಈ ರೀತಿ ದುರ್ವರ್ತನೆ ತೋರಿದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಏಟಿಎಂಯಿಂದ 14 ಲಕ್ಷ ದೋಚಿದ ಖದೀಮರು
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಲೂಟಿ ಮಾಡಲಾಗಿದೆ. ರಾತ್ರೋರಾತ್ರಿ ಕೆನರಾ ಬ್ಯಾಂಕ್ ಏಟಿಎಂಗೆ ನುಗ್ಗಿದ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಇರುವ ಏಟಿಎಂನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನು ಈ ಖದೀಮರು ಸಿಸಿ ಟಿವಿ ನಿಷ್ಕ್ರಿಯಗೊಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಕೆನರಾ ಬ್ಯಾಂಕ್ ಅಧಿಕಾರಿಗಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ
