ಟಾಪ್ 3 ನ್ಯೂಸ್
ಚಿಕ್ಕಮಗಳೂರು: 750ಕ್ಕೂ ಹೆಚ್ಚು ಕಾಫಿಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು..!!
– ಶಿರಸಿ : ಕಾಲುಜಾರಿ ಬಿದ್ದು ಜೋಗನ ಹಕ್ಕಲು ಜಲಪಾತದಲ್ಲಿ ಯುವಕ ನಾಪತ್ತೆ..!!
– ಸಾಗರ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ…!!!
NAMMUR EXPRESS NEWS
ಚಿಕ್ಕಮಗಳೂರು : ಬಿಜೆಪಿ ಕಾರ್ಯಕರ್ತರೊಬ್ಬರ ಕಾಫಿ ತೋಟವನ್ನು ದುಷ್ಕರ್ಮಿಗಳು ನಾಶಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತುಪೂರು ಗ್ರಾಮದಲ್ಲಿ ನಡೆದಿದೆ. ತುಪೂರು ಗ್ರಾಮದ ಅಲಗೇಶ್ವರ ಎ.ಸಿ.ಶಂಕರ್ ಜಮೀನಿನಲ್ಲಿ 10 ವರ್ಷಗಳಿಂದ ಸುಮಾರು 750ಕ್ಕೂ ಹೆಚ್ಚು ಕಾಫಿಗಿಡಗಳನ್ನು ಬೆಳೆಸಲಾಗಿತ್ತು. ಕೆಲವು ದಿನಗಳು ಕಳೆದಿದ್ದರೆ ಫಸಲು ಕೈ ಸೇರುತ್ತಿತ್ತು. ಅಷ್ಟರಲ್ಲಿ ದುಷ್ಕರ್ಮಿಗಳು ಕಾಫಿ ತೋಟವನ್ನು ನಾಶಮಾಡಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿರಸಿ : ಕಾಲುಜಾರಿ ಬಿದ್ದು ಜೋಗನ ಹಕ್ಕಲು ಜಲಪಾತದಲ್ಲಿ ಯುವಕ ನಾಪತ್ತೆ..!!
ಶಿರಸಿ: ಗೆಳೆಯರೊಂದಿಗೆ ಫಾಲ್ಸ್ ನೋಡಲು ಹೋಗಿ ಕಾಲು ಜಾರಿ ಬಿದ್ದು ಯುವಕ ಕಣ್ಣರೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ನಡೆದಿದೆ. ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕಪವನ್ ಗಣಪತಿ ಜೋಗಿ (24 ವರ್ಷ) ಕಣ್ಮರೆಯಾದ ಯುವಕನಾಗಿದ್ದು ತನ್ನ ಸ್ನೇಹಿತ ವಾಸುದೇವ್ ಜೊತೆ ಜೋಗನ ಹಕ್ಕಲು ಫಾಲ್ಸ್ ನೋಡಲು ಭಾನುವಾರ ಸಂಜೆ ತೆರಳಿದ್ದನು. ಜಲಪಾತದ ಸಮೀಪ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ಬಿದ್ದು ಹಳ್ಳ ದಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾನೆ. ಸ್ಥಳದಲ್ಲಿ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ,ತಡರಾತ್ರಿ ಆದ್ದರಿಂದ ಇಂದು ಶೋಧಕಾರ್ಯ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ…!!!
ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ತಿರುವಿನ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಹಿಮಾಲಯ ಬೈಕ್ ವಾಹನ ಸವಾರನಿಗೂ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ತೆರಳುತ್ತಿದ್ದ ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರರು ಸಾಗರ ಹಾಗೂ ಸಿದ್ದಾಪುರ ಮೂಲದವರು ಎಂಬ ಮಾಹಿತಿ ತಿಳಿದು ಬಂದಿದ್ದು, ಬೈಕ್ ಸವಾರರೊಬ್ಬರಿಗೆ ಕಾಲಿನ ಮೂಳೆ ಮುರಿದಿರುವ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಇದಾಗಿದೆ.