ಚಿಕ್ಕಮಗಳೂರು ಟಾಪ್ ನ್ಯೂಸ್
* ವಾಹನ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಚಾಲಕನ ಮೃತ ದೇಹ ಪತ್ತೆ
* ಕಾಡಾನೆಗಳ ಸೆರೆಗೆ ಸಕ್ರೇಬೈಲ್‌ನ ಕುಮ್ಕಿ ಆನೆಗಳಿಂದ ಹುಡುಕಾಟ,ಒಂದು ಆನೆಗೆ ಅರವಳಿಕೆ ಮದ್ದು
* ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಅಪಾರ ಹಾನಿ
NAMMMUR EXPRESS NEWS
* ವಾಹನ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಚಾಲಕನ ಮೃತ ದೇಹ ಪತ್ತೆ
ಕಳಸ: ಪಿಕಪ್ ವಾಹನದೊಂದಿಗೆ ಚಾಲಕ ಕೊಚ್ಚಿ ಹೋಗಿದ್ದ ಪ್ರಕರಣ ಸಂಬಂಧ ಐದು ದಿನಗಳ ಬಳಿಕ ಚಾಲಕ ಶಮಂತ್ ಮೃತದೇಹ ಪತ್ತೆಯಾಗಿದೆ.
ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಧು ಹಿಂದಿರುಗುತ್ತಿದ್ದ ವೇಳೆ ಪಿಕಪ್ ವಾಹನ ಭಧ್ರಾ ನದಿ ತೀರದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು . ಚಾಲಕ ಶಮಂತ್ ನಿಯಂತ್ರಣ ತಪ್ಪಿದ ಪಿಕಪ್ ಭದ್ರಾ ನದಿಗೆ ಉರುಳಿತ್ತು. ಶಮಂತ್ ಕೂಡ ನದಿ ಪಾಲಾಗಿದ್ದ, ಮಗ ಶಮಂತ್ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆಯಿಂದ ನೊಂದಿದ್ದ ತಾಯಿ ರವಿಕಲಾ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ತೆ ಮಾಡಿಕೊಂಡಿದ್ದರು.
ಘಟನೆ ನಡೆದ ಎರಡು ದಿನಗಳ ನಂತರ ನದಿಯಲ್ಲಿಪಿಕಪ್ ಪತ್ತೆಯಾಗಿದ್ದು, 5 ದಿನಗಳ ಬಳಿಕ ಶಮಂತ್ ಮೃತದೇಹ ಕಳಸ ಪಟ್ಟಣ ಸಮೀಪದ( ಕೋಟೆಹೊಳೆ)ಎಂಬಲ್ಲಿ ಪತ್ತೆಯಾಗಿದೆ.
ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕದಳ, ಮಂಗಳೂರಿನ ಮುಳುಗು ತಜ್ಜರು 5 ದಿನಗಳಿಂದ ಶಮಂತ್ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದರು.
* ಕಾಡಾನೆಗಳ ಸೆರೆಗೆ ಸಕ್ರೇಬೈಲ್‌ನ ಕುಮ್ಕಿ ಆನೆಗಳಿಂದ ಹುಡುಕಾಟ,ಒಂದು ಆನೆಗೆ ಅರವಳಿಕೆ
ಬಾಳೆಹೊನ್ನೂರು: ನಾಲ್ಕು ದಿನದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡನೆ ಹಾಗೂ ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿರುವ ಎರಡು ಪುಂಡಾನೆಗಳ ಸೆರೆಗೆ ಸಕ್ರೇಬೈಲ್‌ನ ಕುಮ್ಕಿ ಆನೆಗಳ ತಂಡ ಆಗಮಿಸಿದ್ದು, ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ಸದ್ಯ ಕಾಡಾನೆ ಕಡಬಗೆರೆ ಹಾಗೂ ಬನ್ನೂರು ಭಾಗದಲ್ಲಿರುವ ಮಾಹಿತಿ ಇದ್ದು ಆನೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಅರವಳಿಕೆ ತಜ್ಞರು ಭಾಗವಹಿಸಿದ್ದಾರೆ. ಕುಂಬ್ರಕೋಡು ಭಾಗದಲ್ಲಿ ಒಂದು ಆನೆಗೆ ಅರವಳಿಕೆ ಮದ್ದು ನೀಡಿದ್ದು ವಿಪರೀತ ಮಳೆಯ ಕಾರಣ ಆನೆಗೆ ಮದ್ದು ನಾಟುತ್ತಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.ಸದ್ಯ ಮೂರ್ನಾಲ್ಕು ಬಾರಿ ಅರವಳಿಕೆ ನೀಡಿ ಆನೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
* ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಅಪಾರ ಹಾನಿ
ಚಿಕ್ಕಮಗಳೂರು: ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು,ಅನೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಮರಗಳು ಉರುಳಿದ್ದು,ವಿದ್ಯುತ್ ಕಂಬಗಳು ತುಂಡಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದಿಂದ ಅನೇಕ ಮನೆಗಳಿಗೆ ಹಾನಿಯಾಗಿದ್ದು,ದನಕರುಗಳು,ಸಾಕು ಪ್ರಾಣಿಗಳು ಮೃತಪಟ್ಟಿವೆ.