ನೀರಿಗಾಗಿ ಎರಡು ಗ್ರಾಮಗಳ ಮಧ್ಯೆ ಕೋಲ್ಡ್ ವಾರ್
* ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಾರೀ ಹೈಡ್ರಾಮ
* ವೇದ ನದಿ ನೀರು ಕೆರೆಗೆ ಹರಿಸಲು ಒಂದು ಗ್ರಾಮದ ವಿರೋಧ,ತಪ್ಪಿದ ಭಾರೀ ಅನಾಹುತ
NAMMMUR EXPRESS NEWS
ಕಡೂರು:ನೀರಿಗಾಗಿ ದೇಶ-ದೇಶ ನಡುವೆ, ರಾಜ್ಯ, ರಾಜ್ಯಗಳ ಮಧ್ಯೆ ಸಂಘರ್ಷ ಹೊಸದಲ್ಲ. ಅಂತೆಯೇ ಚಿಕ್ಕಮಗಳೂರಲ್ಲಿ ಎರಡು ಗ್ರಾಮಗಳ ಮಧ್ಯೆ ನೀರಿಗಾಗಿ ಕೋಲ್ಡ್ ವಾರ್ ನಡೆದಿದೆ.
ವೇದಾ ನದಿ ನೀರಿಗಾಗಿ 2 ಊರಿನ ರೈತರ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ. ತಾಲೂಕಿನ ವೇದಾ ನದಿ ನೀರಿಗಾಗಿ ಹುಲಿಕೆರೆ-ನಾಗೇನಹಳ್ಳಿ ಮತ್ತು ಕಡೂರು-ಸಖರಾಯಪಟ್ಟಣ ರೈತರ ಮಧ್ಯೆ ವಾರ್ ಶುರುವಾಗಿದೆ. ಹುಲಿಕೆರೆ-ನಾಗೇನಹಳ್ಳಿ ಕೆರೆಗೆ ನೀರು ಹರಿಸಲು ಕಡೂರು-ಸಖರಾಯಪಟ್ಟಣ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ನೀರು ವಿವಾದ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಮ್ಮುಖದಲ್ಲಿ ಸಭೆ ನಡೆದಿತ್ತು. ಈ ವೇಳೆ ಎರಡು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೂ ಜಗಳ ಹೋಗಿತ್ತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದಾರೆ.
