ಚಿಕ್ಕಮಗಳೂರು ಟಾಪ್ ನ್ಯೂಸ್
* ಕರ್ತವ್ಯನಿರತ ಫಾರೆಸ್ಟ್ ಗಾರ್ಡ್ ನಾಪತ್ತೆ,ತೀವ್ರ ಶೋಧ
* ಎರಡು ಪ್ರತ್ಯೇಕ ಘಟನೆ ಪ್ರವಾಸಿಗರ ಮಾರಿಮಾರಿ
* ಕೆಲಸದಲ್ಲಿರುವಾಗಲೇ ಸೆಕ್ಯುರಿಟೀಗಾರ್ಡ್ಗೆ ಹೃದಯಾಘಾತ
NAMMMUR EXPRESS NEWS
* ಕರ್ತವ್ಯನಿರತ ಫಾರೆಸ್ಟ್ ಗಾರ್ಡ್ ನಾಪತ್ತೆ,ತೀವ್ರ ಶೋಧ
ಚಿಕ್ಕಮಗಳೂರು : 3 ದಿನದ ಹಿಂದೆ ಫಾರೆಸ್ಟ್ ಗಾರ್ಡ್ವೊಬ್ಬರು ನಾಪತ್ತೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಮೂಲತಃ ಮಡಿಕೇರಿ ಮೂಲದ ಶರತ್ (33) ನಾಪತ್ತೆಯಾಗಿರುವ ಫಾರೆಸ್ಟ್ ಗಾರ್ಡ್.
3 ದಿನದಿಂದ ಪೊಲೀಸರು ಕಡೂರು ತಾಲೂಕಿನ ಸಖರಾಯಪಟ್ಟಣದ ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ನಾಪತ್ತೆಯಾಗಿರುವ ಗಾರ್ಡ್ಗಾಗಿ ಪೊಲೀಸರು ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದು, ನೀಲಗಿರಿ ಪ್ಲಾಂಟೇಷನ್ನಲ್ಲಿ ಆತನ ಬೈಕ್, ಜರ್ಕಿನ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಎರಡು ಪ್ರತ್ಯೇಕ ಪ್ರಕರಣ,ಪ್ರವಾಸಿಗರ ಮಾರಾಮಾರಿ
ಮೂಡಿಗೆರೆ/ಚಿಕ್ಕಮಗಳೂರು: ಎರಡು ಪ್ರತ್ಯೇಕ ಘಟನೆಯಲ್ಲಿ ಕುಡಿದ ಮತ್ತಿನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಡುರಸ್ತೆಯಲ್ಲೇ ಪ್ರವಾಸಿಗರ ಬಡಿದಾಡಿಕೊಂಡಿರುವ ಘಟನೆ ಮೂಡಿಗೆರೆ ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ನಡೆದಿದೆ.
ಭಾನುವಾರ (ಜೂ.29) ರಾತ್ರಿ 11 ಗಂಟೆ ಸಮಾರಿಗೆ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಪ್ರವಾಸಿಗರು ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ. ಸ್ಥಳೀಯರು ಗಲಾಟೆ ಬಿಡಿಸಲು ಎಷ್ಟೇ ಪ್ರಯತ್ನಿಸಿದರು ಮತ್ತೆ-ಮತ್ತೆ ಪ್ರವಾಸಿಗರ ಬಡಿದಾಡಿಕೊಂಡಿರುವುದುದು ವಿಡಿಯೋದಲ್ಲಿ ಸೆರೆಯಾಗಿದೆ. ಮೂವರು ಯುವಕರು ಹೊಡೆದಾಡಿಕೊಂಡಿದ್ದು, ಪ್ರವಾಸಿಗರ ಗಲಾಟೆಯ ಬಗ್ಗೆ ಮೂಡಿಗೆರೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಚಿಕ್ಕಮಗಳೂರು ನಗರದ ಟೌನ್ ಕ್ಯಾಂಟೀನ್ ಸರ್ಕಲ್ ನಲ್ಲಿಈ ಘಟನೆ ನಡೆದಿದೆ.
ನಶೆಯ ಏಟಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಅಜಯ್ (23) ಯತೀಶ್ (23) ಎನ್ನುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಇಬ್ಬರನ್ನು ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ.
ಅಜಯ್ ತಲೆಗೆ 7-8 ಕಡೆ ಮಚ್ಚಿನ ಏಟು ಬಿದ್ದಿದ್ದು, ಸ್ಥಿತಿ ತೀವ್ರ ಗಂಭೀರವಾಗಿದೆ. ಯತೀಶ್ ಎಡಗೈಗೆ ಗಂಭೀರ ಗಾಯವಾಗಿದ್ದು, ನರಗಳು ಕಟ್ ಆಗಿವೆ ಎನ್ನಲಾಗಿದೆ.
ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.
* ಕೆಲಸದಲ್ಲಿರುವಾಗಲೇ ಸೆಕ್ಯುರಿಟೀಗಾರ್ಡ್ಗೆ ಹೃದಯಾಘಾತ
ಚಿಕ್ಕಮಗಳೂರು : ಕೆಲಸ ನಿರ್ವಹಿಸುತ್ತಿರುವಾಗಲೇ ಸೆಕ್ಯೂರಿಟಿ ಗಾರ್ಡ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.
ನಗರದ ಬೇಲೂರು ರಸ್ತೆಯಲ್ಲಿರುವ ಬೈಕ್ ಶೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದ ಹಿರೇಗೌಜದ ಶಿವಮೂರ್ತಿ (50) ಎನ್ನುವವರು ಕುಳಿತಲ್ಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.