ಶೃಂಗೇರಿಯಲ್ಲಿ ಭಾರೀ ಮಳೆ!
– ಮಲೆನಾಡಲ್ಲಿ ಮುಂದುವರಿದ ಮೋಡ ಕವಿದ ವಾತಾವರಣ
– ಬಿಸಿಲಿನ ಧಗೆಗೆ ಕಂಗೆಟ್ಟ ಜನರಿಗೆ ಮಳೆಯಿಂದ ಸಂಭ್ರಮ
NAMMUR EXPRESS NEWS
ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಕಂಗಾಲಾಗಿದ್ದ ಜನರಿಗೆ ವರುಣದೇವನ ಆಗಮನದಿಂದ ಇಳೆ ತಂಪಾಗಿದೆ. ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ ಸುರಿದಿದೆ. ಇನ್ನು ಕೆಲವಡೆ ಮೋಡ ಕವಿದ ವಾತಾವರಣ. ಶೃಂಗೇರಿಯಾಗಿ ಮಹಾರುದ್ರ ಹೋಮದ ಪೂರ್ಣಹುತಿ ಬಳಿಕ ಶೃಂಗೇರಿಯಲ್ಲಿ ಅಬ್ಬರಿಸಿದ ಮಳೆ. ಕಿಗ್ಗಾದಲ್ಲಿ ನಡೆಯುತ್ತಿರುವ ಮಹಾರುದ್ರ ಹೋಮ, ಶೃಂಗೇರಿ ತಾಲೂಕಿನ ಅತ್ಯಂತ ವರ್ಷದ ಮೊದಲ ಮಳೆ. ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, NR ಪುರ, ಕೊಪ್ಪ, ಕಳಸ ತಾಲೂಕಿನ ಹಲವೆಡೆಯಲ್ಲಿ ಹೆಚ್ಚು ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆಯಿಂದ ಸಂಭ್ರಮ ನೀಡಿದ್ದು, ದಿಢೀರ್ ಸುರಿದ ಮಳೆಯಿಂದ ವಾಹನ ಸವಾರರು ಪರದಾಡಿದರು. ಕೆಲವೆಡೆ ಗುಡುಗು – ಸಿಡಿಲಿನ ಆರ್ಭಟದೊಂದಿಗೆ ಮಳೆರಾಯ ಧರೆಗಿಳಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭೂಮಿಗೆ ಸಾಕಷ್ಟು ತಂಪು ಎರೆದಿದೆ.
ಆಗುಂಬೆಯಲ್ಲೂ ಕೂಡ ಬಾರಿ ಮಳೆ, ತೀರ್ಥಹಳ್ಳಿ, ಸಾಗರ, ಹೊಸನಗರ ಈ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದೆ. ಬೇಸಿಗೆಯ ಬಿಸಿಲು ತಾಳಲಾರದೆ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಇನ್ನು ಕೂಡ ಮಳೆ ಧರೆಗೆ ಇಳಿದಿಲ್ಲ.
