48 ಜನರ ಹನಿಟ್ರ್ಯಾಪ್, ಸಿಡಿ ವಿಚಾರ ಇದು ಸಣ್ಣ ವಿಷಯವಾ? -ಸಿ.ಟಿ ರವಿ
* ಶತೃಗಗಳನ್ನು ಮಣಿಸೋಕೆ ರಾಜ ಮಹಾರಾಜರು ಹೀಗೆ ಮಾಡ್ತಿದ್ರು
* ಹೋರಾಟ ಹತ್ತಿಕ್ಕಲು ನಮ್ಮ 18 ಜನ ಸದಸ್ಯರನ್ನ ಅಮಾನತು ಮಾಡಿದ್ದಾರೆ
NAMMUR EXPRESS NEWS
ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ರಾಜ್ಯ ರಾಜಕಾರಣದಲ್ಲಿ 48 ಜನರ ಹನಿಟ್ರ್ಯಾಪ್ ಹಾಗೂ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಆಡಳಿತ ಪಕ್ಷದ ಸಚಿವ ಸಂಪುಟದ ಸಚಿವರೇ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ ಅಂದ್ರೆ ಇದು ಸಣ್ಣ ವಿಷಯವಾ.? ತಳ್ಳಿ ಹಾಕುವಂತಾ.? ಎಂದು ಪ್ರಶ್ನಿಸಿದ್ದಾರೆ. ಹಿಂದಿನ ಕಾಲದಲ್ಲಿ ಶತೃಗಳನ್ನ ಮಣಿಸೋದಕ್ಕೆ ರಾಜ-ಮಹಾರಾಜರು ಇದನ್ನ ಬಳಸಿಕೊಳ್ತಿದ್ರು ಈಗ ಜಡ್ಜ್, ಶಾಸಕರು, ಮುಖಂಡರು, ಮಂತ್ರಿಗಳನ್ನ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶತ್ರು ದೇಶಗಳು ಬೇಹುಗಾರಿಕೆಗೆ ಸುಂದರ ಹೆಣ್ಣು ಮಕ್ಕಳನ್ನ ಬಳಸಿಕೊಳ್ತಿದ್ರು. ಅದೇ ರೀತಿ ಋಷಿ-ಮುನಿಗಳ ತಪಸ್ಸು ಭಂಗ ಮಾಡೋದಕ್ಕೆ ದೇವ ಕನ್ಯೆಯರನ್ನೇ ಬಳಸಿಕೊಂಡಿದ್ದು ಪುರಾಣಗಳಲ್ಲಿದೆ. ಆದರೆ ಈಗ ಹಿರಿಯ ಸಚಿವ ಮತ್ತೊಬ್ಬ ಹಿರಿಯ ಸಚಿವರ ರಾಜಕೀಯ ಜೀವನ ಮುಗಿಸೋದಕೆ, ಈ ರೀತಿ ಮಾಡಿದ್ದನ್ನ ಗಂಭೀರವಾಗಿ ಪರಿಗಣಿಸಬೇಕು ಅಂತಾ ಸಿ.ಟಿ ರವಿ ಒತ್ತಾಯಿಸಿದ್ದಾರೆ.
ಈ ಕುರಿತು ಯಾರೂ ದೂರು ನೀಡಿಲ್ಲ. ಆದರೆ, ಸದನ, ವಿಧಾನಸಭೆಯಲ್ಲಿ ಆರೋಪ ಮಾಡೋದು ಸಾಮಾನ್ಯ ವಿಷಯವೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪವನ್ನೇ ದೂರೆಂದು ಪರಿಗಣಿಸಿ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ. ನಮ್ಮ ಹೋರಾಟ ಹತ್ತಿಕ್ಕಲು ನಮ್ಮ 18 ಜನ ಸದಸ್ಯರನ್ನ ಅಮಾನತು ಮಾಡಿದ್ದಾರೆ. ಹೀಗಾಗಿ ವಿಧಾನಸಭೆ ಅಧ್ಯಕ್ಷರು ತಮ್ಮ ತೀರ್ಪನ್ನ ಪುನರ್ ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
