Categories
ಚಿಕ್ಕಮಗಳೂರು

ಆ.23ಕ್ಕೆ ಶೃಂಗೇರಿಯಲ್ಲಿ ಬೃಹತ್ ಉದ್ಯೋಗ ಮೇಳ

ಆ.23ಕ್ಕೆ ಶೃಂಗೇರಿಯಲ್ಲಿ ಬೃಹತ್ ಉದ್ಯೋಗ ಮೇಳ

* ಕ್ಷೇತ್ರದಲ್ಲಿ 2ನೇ ಉದ್ಯೋಗ ಮೇಳ,30 ಕ್ಕೂ ಹೆಚ್ಚು ಕಂಪನಿಗಳು ಭಾಗಿ
* ಅಮ್ಮ ಫೌಂಡೇಶನ್‌ನಿಂದ ಆಯೋಜನೆ,ಸ್ಥಾಪಕ ಸುಧಾಕರ್ ಶೆಟ್ಟಿ ಮಾಹಿತಿ
* ಮಲೆನಾಡ ಸರ್ವರಿಗೂ ಸ್ವಾಗತ:

NAMMMUR EXPRESS NEWS
ಕೊಪ್ಪ: ಆ.23ರಂದು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈಗಾಗಲೇ ಉದ್ಯೋಗ ಮೇಳಕ್ಕೆ ಅಂತಿಮ ಸಿದ್ಧತೆ ನಡೆದಿದೆ. ಈ ಬಗ್ಗೆ ಉದ್ಯೋಗ ಮೇಳ ಮಾಡುತ್ತಿರುವ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕ‌ರ್ ಎಸ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಕೊಪ್ಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು ರಾಜ್ಯದಲ್ಲಿ ಅಮ್ಮ ಫೌಂಡೇಶನ್‌ನಿಂದ ನಡೆಯುವ 5ನೇ ಉದ್ಯೋಗಮೇಳ ಇದಾಗಿದ್ದು ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿರುವ 2ನೇ ಉದ್ಯೋಗ ಮೇಳ ಇದಾಗಿದೆ. ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗುತ್ತಿದ್ದಾರೆ. ಅವರಿಗೆ ರೀತಿಯಲ್ಲಿ ಸಹಾಯವಾಗಲೆಂದು ಈ ಉದ್ಯೋಗಮೇಳ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಮ್ಮ ಫೌಂಡೇಶನ್ ಮತ್ತು ಉದ್ಯೋಗದಾತ ಫೌಂಡೇಶನ್ ಸಹಯೋಗದಲ್ಲಿ ನಡೆಯಲಿರುವ ಉದ್ಯೋಗಮೇಳದಲ್ಲಿ ರಾಜ್ಯದ 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು. 1500ಕ್ಕೂ ಹೆಚ್ಚು ಉದ್ಯೋಗಾವಕಾಶ ಲಭ್ಯವಿದೆ. ಉಚಿತ ಪ್ರವೇಶ ಇದ್ದು ಶೃಂಗೇರಿ ಹಾಗೂ ಸುತ್ತಮುತ್ತಲಿನ ಯುವಜನರು ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ ಎಂದು ಸುಧಾಕರ್ ಶೆಟ್ಟಿ ಕರೆನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ಬಿ.ಎಚ್. ದಿವಾಕರ್‌ಭಟ್ ಭಂಡಿಗಡಿ, ದಿನೇಶ್ ಹೆಗಡೆ ಶೃಂಗೇರಿ, ಎಚ್.ಎಸ್. ಕಳಸಪ್ಪ, ಮಲ್ಲೇಶ್ ಹೆಗಡೆ, ನವೀನ್ ಕೊಲ್ಲಿ ದೇವೇಂದ್ರ, ಶ್ರೀನಿವಾಸ್, ಅಚ್ಯುತ್, ಅರವಿಂದ್ ಮುಂತಾದವರು ಉಪಸ್ಥಿತರಿದ್ದರು. ಈಗಾಗಲೇ ನೂರಾರು ಮಂದಿಯ ತಂಡ ಈ ಉದ್ಯೋಗ ಮೇಳಕ್ಕಾಗಿ ಶ್ರಮಿಸುತ್ತಿದೆ.

ಉದ್ಯೋಗ ಮೇಳ ಪ್ರಕ್ರಿಯೆ ಹೇಗೆ?  

ಆ.23ರ ಶನಿವಾರ ಬೆಳಗ್ಗೆ 9ರಿಂದ ನೋಂದಣಿ ಆರಂಭಗೊಳ್ಳಲಿದೆ. 18 ರಿಂದ 35 ವರ್ಷ ವಯೋಮಿತಿಯ ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಡಿಗ್ರಿ ಅಥವಾ ಸ್ನಾತಕ್ಕೋತ್ತರ ಪದವಿ ಪಡೆದವರು, ಎಂಜಿನಿಯರಿಂಗ್ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಫೋಟೋ, ಆಧಾರ್‌ಕಾರ್ಡ್, ಸ್ವವಿವರದ ಎಲ್ಲಾ ದಾಖಲೆಗಳ ಒಟ್ಟು 10 ಪ್ರತಿಯೊಂದಿಗೆ ನೋಂದಣಿ, ಹೆಚ್ಚಿನ ವಿವರಗಳಿಗೆ 8095679666 ರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.