Categories
ಚಿಕ್ಕಮಗಳೂರು ಶೃಂಗೇರಿ

ಶೃಂಗೇರಿ ಹೆಸರಾಂತ ವೈದ್ಯ ಡಾ.ನಿರಂಜನ್ ಕುಮಾರ್‌ಗೆ ‘ಕನ್ನಡ ಶ್ರೀ’ ಗೌರವ

ಶೃಂಗೇರಿ ಹೆಸರಾಂತ ವೈದ್ಯ ಡಾ.ನಿರಂಜನ್ ಕುಮಾರ್‌ಗೆ ‘ಕನ್ನಡ ಶ್ರೀ’ ಗೌರವ

* ಅದ್ದೂರಿ ಪಂಚ ಕಲ್ಯಾಣೋತ್ಸವದಲ್ಲಿ ನಡೆದ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಗೌರವ
* ಕನ್ನಡ ನಾಡು-ನುಡಿ,ಕಲೆ,ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಸಂದ ಗೌರವ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಹೆಸರಾಂತ ವೈದ್ಯರಾದ ಡಾ.ನಿರಂಜನ್ ಕುಮಾರ್‌ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಳಸದ ಶ್ರೀ 1008 ಭಗವಾನ್ ಚಂದ್ರನಾಥ ಬಸದಿ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ನಡೆದ ಅದ್ದೂರಿ ಪಂಚಕಲ್ಯಾಣೋತ್ಸವ ಮಹೋತ್ಸವದಲ್ಲಿ ನಡೆದ “ರಾಜ್ಯಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನದಲ್ಲಿ” ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ನಾಡು-ನುಡಿ,ಕಲೆ,ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ನಿರಂಜನ್ ಕುಮಾರ್ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ನಿಸ್ವಾರ್ಥ ಸೇವೆ ಸಲ್ಲಿಸಿದ್ದು,ಸಾಮಾಜಿಕವಾಗಿ ಸಹ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.ಪರಿಸರ ಪ್ರೇಮಿಗಳಾದ ಇವರು ಅನೇಕ ಗಿಡನೆಟ್ಟು ಬೆಳೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಮಲೆನಾಡು ಜೈನ್ ಮಿಲನ್‌ನ ಸ್ಥಾಪಕ ಅಧ್ಯಕರಾದ ನಿರಂಜನ್‌ರವರಿಗೆ ಸಮಾಜದ ಎಲ್ಲಾ ಕಡೆಗಳಿಂದಲೂ ಅಭಿನಂದನೆಗಳು ಹರಿದು ಬಂದಿದೆ.

* ಮಲೆನಾಡು ಜೈನ್ ಮಿಲನ್ ವತಿಯಿಂದ ಪ್ರತಿಭಾ ಪುರಸ್ಕಾರ
ಮೇಗುಂದಾ: ಮಲೆನಾಡು ಜೈನ್ ಮಿಲನ್ ಶೃಂಗೇರಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಮೊದಲೆರಡು ಸ್ಥಾನ ಗಳಿಸಿದ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ವಿದ್ಯಾರ್ಥಿಗಳಿಗೆ ಹಾಗೂ ಜೈನ ಪ್ರತಿಭೆಗಳನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 15 ಜನ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು.
ಮಲೆನಾಡು ಜೈನ್ ಮಿಲನ್‌ ಅಧ್ಯಕ್ಷರಾದ ಶ್ರೇಣಿಕ್ ಜೈನ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲೆನಾಡು ಜೈನ್ ಮಿಲನ್ ಸ್ಥಾಪಕ ಅಧ್ಯಕ್ಷರಾದ ಡಾ.ನಿರಂಜನ್ ಕುಮಾರ್, ಕೊಗ್ರೆ ಫ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಹರ್ಬುನ್ನಿಸಾ ಹಾಗೂ ಬಿಳಾಲುಕೊಪ್ಪ ಜೆಸೀಸ್‌ನ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಮೇಗುಂದಾ ಜೈನ ಸಮಾಜದ ಪ್ರಮುಖರಾದ ಭರತ್ ರಾಜ್ ಸೇರಿದಂತೆ ಮಲೆನಾಡು ಜೈನ್ ಮಿಲನ್‌ನ ಸರ್ವ ಪದಾಧಿಕಾರಿಗಳು,ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.