ಕೊಪ್ಪ ಸಂಪೂರ್ಣ ಬಂದ್ ಯಶಸ್ವಿ
* ವಿದ್ಯಾರ್ಥಿನಿಯರ ಅನುಮಾಸ್ಪದ ಸಾವು ಪ್ರಕರಣ ಸಿಬಿಐಗೆ ಕೊಡಿ
* ಕೊಪ್ಪ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಕರೆ ಕೊಟ್ಟಿದ್ದ ಬಂದ್ ಹಾಗೂ ಪ್ರತಿಭಟನಾ ಸಭೆ
NAMMMUR EXPRESS NEWS
ಕೊಪ್ಪ: ಕಳೆದ ಜೂನ್ 30 ರಂದು ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿನಿ ಶಮಿತಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಕೊಪ್ಪ ಇದರ ನೇತೃತ್ವದಲ್ಲಿ ಪಟ್ಟಣದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕೊಪ್ಪ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕರೆಕೊಟ್ಟಿದ್ದ ಬಂದ್‌ಗೆ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ನಂತರ ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರಿಂದ ಸಲ್ಲಿಕೆಯಾದ ಪ್ರಕರಣದ ತನಿಖಾ ವರದಿಯು ಈ ಮೊದಲೇ ಹಬ್ಬಿಸಿದಂತೆ ಅತ್ಮಹತ್ಯೆ ಎಂದು ವರದಿ ಮಾಡಲಾಗಾದೆ ಆದರೆ ಈ ವರದಿಯ ಬಗ್ಗೆ ಅನುಮಾನವಿದ್ದು,ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯಿಸಲಾಯಿತು.
ಪ್ರಕರಣದ ದಿಕ್ಕುತಪ್ಪಿಸುವ ಕೆಲಸವಾಗುತ್ತಿದ್ದು, ಪ್ರಕರಣದಲ್ಲಿ ಯಾರೇ ಇರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು,ಯಾರನ್ನು ರಕ್ಷಿಸುವ ಕೆಸಲವನ್ನು ಶಾಸಕರು,ಸರ್ಕಾರ ಮಾಡಬಾರದು ಒಂದು ವೇಳೆ ತಪ್ಪಿದಲ್ಲಿ ಈ ಮಣ್ಣಿನಲ್ಲಿ ಹೆಣ್ಣಾಗಾಗಿ ರಾಮಾಯಣವೂ ನಡೆದಿದೆ ಹಾಗೇ ಮಹಾಭಾರತವೂ ನಡೆದಿದೆ ಈಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಸ್ಥಾನದಲ್ಲಿರುವ ಶಾಸಕರೇ ನಿಮ್ಮ ಕುರ್ಚಿ,ಅಧಿಕಾರ ಕೂಡ ಅಲುಗಾಡಲಿದೆ ಆದ್ದರಿಂದ ಶಾಸಕರು ಅನ್ಯತಾ ಭಾವಿಸದೇ ಈ ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಿ ಎರಡು ಕುಟುಂಬಗಳಿಗೆ ನ್ಯಾಯ ಒದಗಿಸಬೇಕು, ನಿಮ್ಮ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಇಂದು ಪ್ರತಿಭಟನಾಕಾರರ ಒತ್ತಾಯ ಇದೇ ಆಗಿರುತ್ತಿತ್ತು ಎಂದು ಶಾಸಕ ಟಿ ಡಿ ರಾಜೇಗೌಡರಿಗೆ ಪ್ರತಿಭಟನಾ ನಿರತರು ಆಗ್ರಹಿಸಿದರು.
* ಅನುಮಾನ ಹುಟ್ಟಿಸಿದ ಒಂದೇ ಶೈಲಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ
ಕೊಪ್ಪದಲ್ಲಿರುವ ವಸತಿ ಶಾಲೆಯ ಹಾಸ್ಟೆಲ್ ಶೌಚಾಲಯದಲ್ಲಿ ಈ ಹಿಂದೆಯೂ ಓರ್ವ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಇದೀಗ ಅದೇ ಜಾಗದಲ್ಲಿ ಅದೇ ಶೈಲಿಯಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರು ನಡೆಸಿದ ತನಿಖೆಯಲ್ಲಿ ಲೋಪವಿದೆ ಹಾಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿ ಇಂದು ಕೊಪ್ಪ ಪಟ್ಟಣ ಬಂದ್ ಗೆ ಕರೆ ನೀಡಿತ್ತು.
