Categories
ಚಿಕ್ಕಮಗಳೂರು

ನಿಯಮಿತವಾಗಿ ಬಾರದ ಕೆಎಸ್‌ಆರ್‌ಟಿಸಿ ಬಸ್: ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಗ್ರಾ ಪಂ ಅಧ್ಯಕ್ಷ

ನಿಯಮಿತವಾಗಿ ಬಾರದ ಕೆಎಸ್‌ಆರ್‌ಟಿಸಿ ಬಸ್: ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಗ್ರಾ ಪಂ ಅಧ್ಯಕ್ಷ

* ಕೊಪ್ಪ-ಬಿಲಗದ್ದೆ- ಶೃಂಗೇರಿ ಮಾರ್ಗವಾಗಿ ಸರ್ಕಾರಿ ಬಸ್ ಬೇಕಾಬಿಟ್ಟಿ ಸಂಚಾರ
* ಬಸ್ ಪಾಸ್ ಪಡೆದು ಬಸ್‌ಗೆ ಕಾದು ಸುಸ್ತಾದ ವಿದ್ಯಾರ್ಥಿಗಳು

ಶೃಂಗೇರಿ: ದಿನನಿತ್ಯ ನಿಯಮಿತವಾಗಿ ಓಡಾಡುತ್ತಿದ್ದ ಸರ್ಕಾರಿ ಬಸ್ ಈಗ ಬೇಕಾಬಿಟ್ಟಿ ಓಡಾಡುತ್ತಿದ್ದು ಇದರಿಂದ ಶಾನುವಳ್ಳಿ,ಬಿಲಗದ್ದೆ ಭಾಗದಿಂದ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ,ಕೂಡಲೇ ನಿಯಮಿತವಾಗಿ ಬಸ್ ಬಿಡಿ ಇಲ್ಲವಾದಲ್ಲಿ ಬಸ್ ನಿಲ್ದಾಣದಲ್ಲಿನ ಕೆಎಸ್ಆರ್‌ಟಿ‌ಸಿ ಕಛೇರಿಗೆ ಬೀಗ ಹಾಕಿತ್ತೇವೆಂದು ಸರ್ಕಾರಿ ಬಸ್ ಚಾಲಕ,ನಿರ್ವಾಹಕ ಹಾಗೂ ನಿಲ್ದಾಣ ಕಛೇರಿಯ ಅಧಿಕಾರಿಗಳಿಗೆ ಶಾನುವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿನ ಕೆಎಸ್‌ಆರ್‌ಟಿಸಿ ಕಛೇರಿಗೆ ಬಂದ ಶಾನುವಳ್ಳಿ ಗ್ರಾ ಪಂ ಅಧ್ಯಕ್ಷ ಶರತ್ ಬಿಳುಕೊಪ್ಪ ಮತ್ತು ಗ್ರಾಮಸ್ಥರು ಈ ಹಿಂದೆ ಕೊಪ್ಪದಿಂದ ಸರ್ಕಾರಿ ಬಸ್ ದಿನ ನಿತ್ಯ ಹರಿಹರಪುರ-ಬಿಲಗದ್ದೆ ಮಾರ್ಗವಾಗಿ ಶೃಂಗೇರಿಗೆ ತಲುಪಿ ಸಂಜೆ ಇದೇ ಮಾರ್ಗವಾಗಿ ಹಿಂತಿರುಗುತ್ತಿತ್ತು. ಇದರಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು.ಆದರೆ ಕಳೆದ ಒಂದು ತಿಂಗಳಿನಿಂದ ಹಲವು ಕಾರಣಗಳನ್ನು ಹೇಳಿ ನಿಯಮಿತವಾಗಿ ಬಸ್ ಸಂಚಾರ ಮಾಡುತ್ತಿಲ್ಲ ಇದರಿಂದ ನೂರಾರು ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ,ಪೋಷಕರಿಗೆ ತೀವ್ರ ತೊಂದರೆಯುಂಟಾಗಿದೆ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಹತ್ತುದಿನಗಳಾದರೂ ಸಮಸ್ಯೆ ಬಗೆರಿದಿಲ್ಲ ಇನ್ನೂ ಹೀಗೆ ಮುಂದುವರೆದರೆ ಬಸ್ ನಿಲ್ದಾಣದಲ್ಲಿನ ಕೆಎಸ್‌ಆರ್‌ಟಿ‌ಸಿ ಕಛೇರಿಗೆ ಬೀಗ ಹಾಕುತ್ತೇವೆ ಹಾಗೂ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭ ಗ್ರಾ ಪಂ ಅಧ್ಯಕ್ಷ ಶರತ್ ಬಿಳುಕೊಪ್ಪ ಹಾಗೂ ಸಂತೋಷ್,ಚೇತನ್,ಸುಮನ್ ಸೇರಿದಂತೆ ಆ ಭಾಗದ ವಿದ್ಯಾರ್ಥಿಗಳು ಮತ್ತು ಶಾನುವಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.