Categories
ಚಿಕ್ಕಮಗಳೂರು

ಕಾರ್ಮಿಕ ಮಿತ್ರ ಬಳಗದಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಕಾರ್ಮಿಕ ಮಿತ್ರ ಬಳಗದಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

* ಹೆಚ್ಚಾಗಿ ಕಾರ್ಮಿಕ ವರ್ಗದ ಮಕ್ಕಳು ಓದುವುದು ಸರ್ಕಾರಿ ಶಾಲೆಗಳು
* ಶೃಂಗೇರಿ ತಾಲೂಕಿನ ನಲ್ಲೂರು ಪ್ರಾಥಮಿಕ ಶಾಲೆಯಲ್ಲಿ ವಿತರಣೆ

NAMMMUR EXPRESS NEWS
ಶೃಂಗೇರಿ: ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇವರಿಂದ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಹಾಗೂ ನೀರಿನ ಬಾಟೆಲ್ ವಿತರಿಸಲಾಯಿತು. ತಾಲೂಕಿನ ನಲ್ಲೂರು ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶೃಂಗೇರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಡಾ.ಮೋಹನ್ ರಾಜಣ್ಣನವರು ಉದ್ಘಾಟಿಸಿ ಮಾತನಾಡಿ ಮಧ್ಯಮ ವರ್ಗ,ಕಾರ್ಮಿಕ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗಳಲ್ಲಿ ಕಾರ್ಮಿಕ ಮಿತ್ರ ಬಳಗ ಹಮ್ಮಿಕೊಂಡಿರುವ ಈ ಕಾರ್ಯ ಬಹಳ ಉತ್ತಮವಾದುದು ಎಂದು ಪ್ರಶಂಸಿದರು.ಸತ್ಯನಾರಾಯಣ ನಲ್ಲೂರು ರವರು ಉಪನ್ಯಾಸ ನೀಡಿದರು. ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಖಾ ನಿರಂಜನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಮಿತ್ರ ಬಳಗದ ಉಪಾಧ್ಯಕ್ಷರಾದ ಜಗದೀಶ್ ಸೇರಿದಂತೆ ಸುಮಂಗಲಾ ಆನಂದ ಸ್ವಾಮಿ,ಶಾಲೆಯ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ,ಆನಂದ ಸ್ವಾಮಿ ಹಾಗೂ ಶಾಲೆಯ ಎಸ್‌ಡಿಎಂಸಿ ಸದಸ್ಯರುಗಳು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.