Categories
ಚಿಕ್ಕಮಗಳೂರು

ಶೃಂಗೇರಿ ಭಾಗದಲ್ಲಿ ಕಾಡಾನೆಗಳ ಸಂಚಾರ ಜನರೇ ಎಚ್ಚರ !

ಶೃಂಗೇರಿ ಭಾಗದಲ್ಲಿ ಕಾಡಾನೆಗಳ ಸಂಚಾರ ಜನರೇ ಎಚ್ಚರ !

* ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಕಾಣಿಸಿಕೊಂಡ ಎರಡು ಕಾಡಾನೆಗಳು
* ಶ್ರೀಮಠದ ಸುತ್ತಮುತ್ತಲಿನ ಗ್ರಾಮದಲ್ಲಿ ಓಡಾಟ, ಆ ವ್ಯಾಪ್ತಿಯ ಶಾಲೆಗಳಿಗೆ ರಜೆ
* ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಿರಂತರ ಕಾರ್ಯಾಚರಣೆ

NAMMMUR EXPRESS NEWS
ಶೃಂಗೇರಿ: ಕಳೆದ ಮೂರು ದಿನಗಳ ಹಿಂದೆ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಎರಡು ಕಾಡಾನೆಗಳು ಸದ್ಯ ಶ್ರೀಮಠದ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿವೆ ಎನ್ನಲಾಗಿದೆ. ಬೆಳಿಗ್ಗೆ ವರೆಗೂ ಶ್ರೀಮಠದ ನರಸಿಂಹವನ ಸಮೀಪ ಹಾಗೂ ಕಲ್ಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿತ್ತು ಎಂಬ ಮಾಹಿತಿ ಇತ್ತು,ಸದ್ಯ ಆನೆಗಳು ಎಲ್ಲಿವೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯ ಹೆಜ್ಜೆಯ ಆಧಾರದ ಮೇಲೆ ಆನೆಗಳ ಇರುವಿಕೆಯ ಜಾಗವನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿದ್ದಾರೆ. ಮಾಹಿತಿ ಸಿಕ್ಕ ಬಳಿಕ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿ ತಿಳಿಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
ನಿರಂತರ ಕಾಡಾನೆಗಳನ್ನು ಹಿಂಬಾಲಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ-ಹಗಲು ಆನೆಯ ಚಲನವಲನಗಳ ಬಗ್ಗೆ ಗಮನಿಸುತ್ತಿದ್ದಾರೆ.
ಮಾರನಕೊಡಿಗೆ,ಕುಂಚೇಬೈಲು ಭಾಗದಲ್ಲಿ ಸಂಚರಿಸಿ ಅಡಿಕೆ ತೋಟಗಳಿಗೆ ನುಗ್ಗಿ ನಂತರ ಆ ಅರಣ್ಯ ಪ್ರದೇಶದ ಮೂಲಕ ಬೇಸೂರು,ಸುಂಕುರ್ಡಿ ಭಾಗದಲ್ಲಿ ಕಾಣಿಸಿಕೊಂಡ ಕಾಡಾನೆಗಳು ನಂತರ ವೈಕುಂಠಪುರ ಭಾಗದಲ್ಲಿ ಕಾಣಿಸಿಕೊಂಡಿದ್ದವು.ನಿನ್ನೆ ಮಧ್ಯಾಹ್ನದಿಂದ ರಾತ್ರಿಯವರೆಗೂ ಶ್ರೀಮಠದ ನರಸಿಂಹವನದ ಸಮೀಪ ವೈಂಕುಂಠಪುರ ಭಾಗದ ಅರಣ್ಯ ಪ್ರದೇಶದಲ್ಲಿ ಇದ್ದವು ನಂತರ ಕಲ್ಕಟ್ಟೆ ಭಾಗದಲ್ಲಿ ಕಾಣಿಸಿದ್ದವು ಎಂದು ಹೇಳಲಾಗಿದ್ದು ಸದ್ಯ ನರಸಿಂಹವನದಿಂದ ಸ್ವಲ್ಪ ದೂರದಲ್ಲಿ ತುಂಗಾನದಿಯನ್ನು ದಾಟಿ ವೈಕುಂಠಪುರ ಗ್ರಾಮಕ್ಕೆ ಎಂಟ್ರಿಕೊಟ್ಟಿವೆ ಎಂದು ಹೇಳಲಾಗುತ್ತಿದೆ.ಬೆಳಿಗ್ಗೆ ತಂಗಾ ನದಿಯನ್ನು ದಾಟುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಸದ್ಯ ಕಾಡಾನೆಗಳು ವಿದ್ಯಾರಣ್ಯಪುರ ಭಾಗದ ಅಗ್ರಹಾರದ ಕಾಳಿಕಾಂಬ ದೇವಾಲಯ ಹಾಗೂ ಶ್ರೀರಾಮ ದೇವಾಲಯದ ಬಳಿ ಎಂಬ ಮಾಹಿತಿ ಲಭ್ಯವಾಗಿದೆ. ಜನರು ಯಾವುದೇ ಊಹಾಪೋಹದ ಸಂದೇಶಗಳಿಗೆ ಆತಂಕಕ್ಕೊಳಗಾಗದೇ ಇಲಾಖೆ ನೀಡುವ ಸೂಚನೆ,ಮಾಹಿತಿಯನ್ನು ಪಾಲಿಸಬೇಕಾಗಿ ಈ ಮೂಲಕ ಅರಣ್ಯ ಇಲಾಖೆಗೆ ಸಹಕರಿಸಬೇಕಾಗಿ ಮನವಿ ಮಾಡಿದೆ. ಆನೆಯ ಚಲನವಲನ ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ತಿಳಿಸಿದೆ.

* ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶಾಲೆಗಳಿಗೆ ರಜೆ
ಆನೆಯ ಚಲನವಲನ ಇರುವ ಕೂತುಗೋಡು ಗ್ರಾ ಪಂ ವ್ಯಾಪ್ತಿಯ ತೆಕ್ಕೂರು,ವೈಂಕುಂಠಪುರ,ವಿದ್ಯಾರಣ್ಯಪುರ ಭಾಗಗಳಲ್ಲಿನ ಶಾಲೆಗಳಿಗೆ,ಅಂಗನಾವಡಿಗಳಿಗೆ ಮಕ್ಕಳ ಸುರಕ್ಷತಾ ದೃಷ್ಠಿಯಿಂದ ರಜೆ ಘೋಷಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.