Categories
ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗೋ ಮಾತೆ ರಕ್ಷಿಸಿ ಪ್ರತಿಭಟನೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗೋ ಮಾತೆ ರಕ್ಷಿಸಿ ಪ್ರತಿಭಟನೆ

* ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಬಿಸಿ ಬಿಸಿ ಬೀಫ್ ಬಿರಿಯಾನಿ ಬೀಫ್ ಕಬಾಬ್
* ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ ಬೃಹತ್ ಪ್ರತಿಭಟನೆ

NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗೋಹತ್ಯೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಹಿಂದೂ ಹಿತರಕ್ಷಣಾ ಸಮಿತಿ ಚಿಕ್ಕಮಗಳೂರು ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಪರಿಷತ್ ಸದಸ್ಯ ಸಿ ಟಿ ರವಿ ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಗರದ ಕತ್ರಿ ಮಾರಮ್ಮ ದೇವಸ್ಥಾನದಿಂದ ಆಜಾದ್ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂ ಕಾರ್ಯಕರ್ತರು,ಜಿಲ್ಲೆಯಲ್ಲಿ ಗೋಹತ್ಯೆ,ಗೋ ಕಳ್ಳತನ,ಅಕ್ರಮ ಗೋಮಾಂಸ ಮಾರಾಟ,ಲವ್ ಜಿಹಾದ್ ಇವೆಲ್ಲವೂ ಎಗ್ಗಿಲ್ಲದೇ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

* ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ದನದ ಬಿರಿಯಾನಿ,ಕಬಾಬ್
ಪ್ರತಿಭಟನಾ ಮೆರವಣಿಗೆ ಆಜಾದ್ ಪಾರ್ಕ್ ಬಳಿ ತಲುಪಿದಾಗ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಪರಿಷತ್ ಸದಸ್ಯ ಸಿ ಟಿ ರವಿಯವರಿಗೆ ನಗರದ ಹೋಟೆಲ್‌ಗಳಲ್ಲಿ ನಡೆಯುತ್ತಿರುವ ದನದ ಬಿರಿಯಾನಿ,ದನದ ಕಬಾಬ್ ಬಗ್ಗೆ ವಿಷಯ ತಿಳಿಸಿ ಹೋಟೆಲ್‌‌ವೊಂದರಿಂದ ತಂದ ದನದ ಕಬಾಬ್ ಹಾಗೂ ದನದ ಬಿರಿಯಾನಿಯನ್ನು ಸಿ ಟಿ ರವಿಯವರಿಗೆ ತೋರಿಸಿದರು ಮತ್ತು ಇದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ನೀಡಿ ಅವರ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸಿ ಟಿ ರವಿ ಇದನ್ನು ಅಲ್ಲೇ ಇದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷರಿಗೆ ನೀಡಿ ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದರು.
ಇನ್ನು ಜಿಲ್ಲಾಡಳಿತ ಇಂತಹ ಅಕ್ರಮಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳದಿದ್ದರೆ ಅಧಿಕಾರಿಗಳ ಮನೆ ಮನೆಗೆ ಹಾಗೂ ಮುಖ್ಯಮಂತ್ರಿಗಳಿಗೂ ಬೀಫ್ ಬಿರಿಯಾನಿ ಹಾಗೂ ಕಬಾಬ್ ಕಳಿಸುವುದಾಗಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಎಚ್ಚರಿಕೆ ನೀಡಿದರು.

* ಗೋವಿನ ಬಾಲಕ್ಕೆ ಬೆಂಕಿ ಹಚ್ಚಿದ ಅನ್ಯಕೋಮಿನ ಬಾಲಕ
ಕೆಲದಿನಗಳ ಹಿಂದೆ ನಗರದಲ್ಲಿ ಅನ್ಯಕೋಮಿನ ಬಾಲಕನೊಬ್ಬ ಹಸುವೊಂದರ ಬಾಲಕ್ಕೆ ಸೆಂಟ್ ಬಳಸಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ,ಇದನ್ನು ಕಂಡಿಸಿದ್ದ ಯುವ ಮೋರ್ಚಾ ಅಧ್ಯಕ್ಷ ಹಾಗೂ ಹಿಂದೂ ಸಂಘಟನೆಯ ಶ್ಯಾಮ್ ಗೌಡ ಪೊಲೀಸರಿಗೆ ದೂರು ನೀಡಿದ್ದರು. ಆದರೆ ವಿಕೃತಿ ಮೆರೆದಿದ್ದ ಬಾಲಕನ ಮೇಲೆ ಪಿಟ್ಟಿ ಕೇಸ್ ದಾಖಲಿಸಿ,ಪ್ರಶ್ನೆ ಮಾಡಿ ದೂರು ನೀಡಿದ ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ಡೌಡ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು.ಇದರಿಂದ ಆಕ್ರೋಶಗೊಂಡ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಜಿಲ್ಲಾಡಳಿತ,ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪದೇ ಪದೇ ಗೋವಿನ ಮೇಲಾಗುತ್ತಿರುವ ಇಂತಹ ಅಕ್ರಮಗಳನ್ನು ಕೂಡಲೇ ನಿಲ್ಲಿಸಬೇಕೆಂದು ಇಂದು ಹಿಂದೂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದವು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.