ಗೋವಿಂದೇಗೌಡರ ಮನೆಯಲ್ಲಿ ದರೋಡೆ: 24 ಗಂಟೆಯೊಳಗೆ ಅರೆಸ್ಟ್!
* 3 ಆರೋಪಿಗಳನ್ನ ಬಂಧಿಸಿ ಕರೆತಂದ ಕೊಪ್ಪ ಪೊಲೀಸರು
* ಮನೆ ಕೆಲಸಕ್ಕಾಗಿ ದಂಪತಿಗಳೆಂದು ಬಂದ ನೇಪಾಳಿಗಳಿಂದ ಕಳ್ಳತನ
* ಕೊಪ್ಪ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಭಾರೀ ಮೆಚ್ಚುಗೆ
NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ,ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಕೊಪ್ಪ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. 24 ಗಂಟೆಯೊಳಗೆ ಕಳ್ಳರನ್ನು ಮಹಾರಾಷ್ಟ್ರದಿಂದ ಹಿಡಿದು ತಂದಿದ್ದು ಕೊಪ್ಪ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಪ್ಪ ತಾಲೂಕಿನ ಹಂರಂದೂರು ಗ್ರಾಮದ ಅಚ್ಚರಡಿಯಲ್ಲಿರುವ ಮಾಜಿ ಶಿಕ್ಷಣ ಸಚಿವರಾದ ಗೋವಿಂದೇಗೌಡರ ಪುತ್ರ ಹೆಚ್ ಜಿ ವೆಂಕಟೇಶ್ ಅವರ ಮಣಿಪುರ ಎಸ್ಟೇಟ್ ಮನೆಯಲ್ಲಿ ಆ. 21 ರ ಗುರುವಾರ ಬೆಳಗಿನ ಜಾವ ಸುಮಾರು 1:30 ರಿಂದ 3:00 ಗಂಟೆಯ ಸುಮಾರಿಗೆ ಮನೆಯ ಹಿಂಬದಿಯ ಬಾಗಿಲು ಒಡೆದು ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳುವು ಮಾಡಲಾಗಿತ್ತು. ಬಂಧಿತರಿಂದ ಅಪಾರ ಪ್ರಮಾಣದ ಚಿನ್ನ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
1.8 ಕೆಜಿ ಚಿನ್ನ, 2 ಕಾರು, 1.2 ಕೆಜಿ ಬೆಳ್ಳಿ ವಶ
1.8 ಕೆಜಿ ಚಿನ್ನ, 2 ಕಾರು, 1.2 ಕೆಜಿ ಬೆಳ್ಳಿ, ಮೊಬೈಲ್ ಸೇರಿ ಅನೇಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಪ್ಪ ಎಸ್ ಐ ಬಸವರಾಜ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಈ ಕಾರ್ಯಾಚರಣೆ ಮಾಡಿದ್ದಾರೆ. ಕೊಪ್ಪ ಪೊಲೀಸರು ಭೇದಿಸಿದ ಅತೀ ದೊಡ್ಡ ಪ್ರಕರಣ ಇದಾಗಿದೆ.