ಶಾರದಾಂಬೆ ತವರೂರು ಶೃಂಗೇರಿಯಲ್ಲಿ ಕೊಳಕು ಕೊಳಕು!
– ಸ್ವಚ್ಛತಾ ಕಾರ್ಯ,ನೀರು ಸರಬರಾಜು ಸಂಪೂರ್ಣ ಸ್ಥಗಿತ
– ಶೃಂಗೇರಿ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರ ಕೆಲಸ ಕಾಯಂಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರ ಕೆಲಸ ಕಾಯಂಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಶೃಂಗೇರಿಯ ಪಟ್ಟಣ ಪಂಚಾಯ್ತಿ ಎದುರು ಪೌರ ಕಾರ್ಮಿಕರು ನಡೆಸುತ್ತಿದ್ದಾರೆ. ಈ ಹಿಂದೆಯೂ ಕೂಡ ಇದೇ ವಿಷಯವಾಗಿ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿತ್ತು. ಆಗ ಭೇಟಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪೌರ ಕಾರ್ಮಿಕರಿಗೆ ಅನುಕೂಲ ಮಾಡಿಕೊಡೋದಾಗಿ ಭರವಸೆ ನೀಡಿದ್ದರು, ಶಾಸಕರಾದ ರಾಜೇಗೌಡರವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಕಾರ್ಮಿಕರ ಕೆಲಸ ಕಾಯಂಗೊಳಿಸಿ ಕೊಡೋದಾಗಿ ಭರವಸೆ ನೀಡಿದ್ದರು. ಭರವಸೆ ನೀಡಿ ವರ್ಷ ಕಳೆದರೂ ಕೂಡ ಈ ವಿಚಾರದಲ್ಲಿ ಯಾವುದೇ ಬೆಳವಣಿಗೆ ಕಾಣದ್ದರಿಂದ ಪೌರ ಕಾರ್ಮಿಕರು ಮತ್ತೆ ಅನಿರ್ದಾಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ.
ಪ್ರವಾಸಿ ತಾಣ ಕೊಳಕು ಕೊಳಕು!
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ,ನೀರು ಸರಬರಾಜು,ಪಂಚಾಯ್ತಿ ವಾಹನಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಇದರಿಂದ ನಗರದ ಜನರು ತೊಂದರೆ ಅನುಭವಿಸುವಂತಾಗಿದೆ. ಹೇಳಿ ಕೇಳಿ ಮಳೆಗಾಲ ಬೇರೆ ಶೃಂಗೇರಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರ ಭೇಟಿ ಇರುತ್ತದೆ ಹೀಗಿರುವಾಗ ಸ್ವಚ್ಛತೆಗೆ ಒತ್ತು ಕೊಡದೇ ಇದ್ದಲ್ಲಿ ಪಟ್ಟಣವು ಸಂಪೂರ್ಣ ಕಲುಷಿತವಾಗುತ್ತದೆ. ಈಗಾಗಲೇ ಡೇಂಘೀ ಕಾಯಿಲೆಯಲ್ಲಿ ಶೃಂಗೇರಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಇದ್ದು ಪರಿಸ್ಥಿತಿ ಕೈ ಮೀರಿದರೆ ಡೇಂಘೀ ಉಲ್ಬಣಗೊಂಡು ಮೊದಲ ಸ್ಥಾನಕ್ಕೇರುವುದು ಖಂಡಿತ. ತಕ್ಷಣ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು,ಶಾಸಕರು ಸರ್ಕಾರದ ಗಮನ ಸೆಳೆದು ಪೌರ ಕಾರ್ಮಿಕರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಶೃಂಗೇರಿಯ ಶುಚಿತ್ವ ಮತ್ತು ಆರೋಗ್ಯಕ್ಕೆ ಸಹಕರಿಸಬೇಕೆಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.