Categories
ಚಿಕ್ಕಮಗಳೂರು

ತಾಲ್ಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ ಮತ್ತು ಲಕ್ಷ ಗಾಯತ್ರಿ ಹೋಮ

ತಾಲ್ಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ ಮತ್ತು ಲಕ್ಷ ಗಾಯತ್ರಿ ಹೋಮ

* ತಾಲ್ಲೂಕಿನಲ್ಲಿ ನಡೆಯುತ್ತಿರುವ ಪ್ರಪ್ರಥಮ ವಿಪ್ರ ಮಹಿಳಾ ಸಮಾವೇಶ
* ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಬ್ರಾಹ್ಮಣ ಮಹಿಳಾ ಘಟಕದ ವತಿಯಿಂದ ಕಾರ್ಯಕ್ರಮ

NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ (ರಿ.) ಮತ್ತು ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 22.03.2025ರ ಶನಿವಾರದಂದು ಪ್ರಪ್ರಥಮ ತಾಲ್ಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶವನ್ನು ಹಾಗೂ 23.03.2025 ಭಾನವಾರದಂದು ಲಕ್ಷ ಗಾಯಿತ್ರಿ ಹೋಮವನ್ನು ಆಯೋಜಿಸಲಾಗಿದೆ.
ಸಮಾವೇಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಬ್ರಾಹ್ಮಣ ಮಹಿಳಾ ಘಟಕ ಶೃಂಗೇರಿಯ ಅಧ್ಯಕ್ಷರು ಪದಾಧಿಕಾರಿಗಳು ದಿನಾಂಕ 22.03.2025ರ ಶನಿವಾರದಂದು ನಡೆಯುವ ವಿಪ್ರ ಮಹಿಳಾ ಸಮಾವೇಶದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು ಮಹಿಳಾ ಘಟಕದ ಚಿಕ್ಕಮಗಳೂರು ಜಿಲ್ಲಾ ಸಂಚಾಲಕಿ ಶಾಂತಕುಮಾರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು ಉಪಾಧ್ಯಕ್ಷರಾದ ರಾಘವೇಂದ್ರಭಟ್ಟ, ಬೆಟ್ಟಗೆರೆ, ಮಹಾಬಲರಾವ್ ಕೊಪ್ಪ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕ, ಚಿಕ್ಕಮಗಳೂರು ತಾಲ್ಲೂಕು ಸಂಚಾಲಕರಾದ ಸುಮಪ್ರಸಾದ್ ಮತ್ತು ಉದಯೋನ್ಮುಖ ಕಿರುತೆರೆ ನಟಿ ಕು. ಶ್ರೀವಿದ್ಯಾ ಚಿದಂಬರಶಾಸ್ತ್ರಿ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭವು ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಿಳಾ ಘಟಕದ ಅಧ್ಯಕ್ಷರಾದ ಕವನ ಬಿ. ಶಾಮಸುಂದರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು,
ಉದ್ಘಾಟನಾ ಸಮಾರಂಭದ ನಂತರ ವಿವಿಧ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಗೋಷ್ಠಿ 1 ರಲ್ಲಿ ಮಹಿಳೆ ಮತ್ತು ಧಾರ್ಮಿಕ ಆಚರಣೆ ವಿಷಯವಾಗಿ ಆಶ್ರಿತಾ ಸುಜಿತ್‌ ರಾವ್ ಇವರು ವಿಷಯವನ್ನು ಮಂಡಿಸಲಿದ್ದಾರೆ. ಮಹಿಳೆ ಮತ್ತು ಆರೋಗ್ಯವ ಕುರಿತು ಮೈಸೂರಿನ ಡಾ. ಲಲಿತಾ ಭಾಸ್ಕರ್‌ರವರು ಉಪನ್ಯಾಸ ನೀಡಲಿದ್ದಾರೆ. ಈ ಗೋಷ್ಠಿಯು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಡಾ. ಲಕ್ಷ್ಮೀ ಎನ್. ಪ್ರಸಾದ್ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಧ್ಯಾಹ್ನ ನಂತರ ನಡೆಯುವ ಗೋಷ್ಠಿ 2 ರಲ್ಲಿ ಮಹಿಳೆ ಮತ್ತು ಔದ್ಯೋಗಿಕ ಕ್ಷೇತ್ರದ ಸವಾಲುಗಳು ಎಂಬ ವಿಚಾರದ ಬಗ್ಗೆ ಡಾ. ಅರುಣಾ ಬೆಂಗಳೂರು ಇವರು ಬೆಳಕನ್ನು ಚೆಲ್ಲಲಿದ್ದಾರೆ. ಮಹಿಳೆ ಮತ್ತು ಕೌಟುಂಬಿಕ ಸವಾಲುಗಳ ಬಗ್ಗೆ ಶೃಂಗೇರಿಯವರಾದ ರಾಜೇಶ್ವರಿ ಜಿ.ವಿ. ಮಾತನಾಡಲಿದ್ದಾರೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಪುಷ್ಪಾ ಲಕ್ಷ್ಮೀನಾರಾಯಣ್ ವಹಿಸಲಿದ್ದಾರೆ.
ಸಂಜೆ 4.00 ಘಂಟೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕ, ಶೃಂಗೇರಿ ತಾಲ್ಲೂಕು ಸಂಚಾಲಕರಾದ ನಾಗಮಣಿ ಮುರಳೀಕೃಷ್ಣರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಎನ್.ಆರ್.ಪುರದ ಸಾಹಿತಿಗಳಾದ ಭಾಗ್ಯ ನಂಜುಂಡಸ್ವಾಮಿ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.
ಮಹಿಳೆಯರಿಗೆ ಸಮಾವೇಶದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕ, ಕೊಪ್ಪ ತಾಲ್ಲೂಕು ಸಂಚಾಲಕರಾದ ಶ್ರೀಮತಿ ಟಿ.ವಿ. ನಾಗರಾಜ್, ಕೊಪ್ಪ ಇವರು ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಲನಚಿತ್ರ, ಕಿರುತೆರೆ, ರಂಗಭೂಮಿ ನಟಿ ಕು. ನಾಗಶ್ರೀ ಬೇಗಾರು ಇವರು ಪಾಲ್ಗೊಳ್ಳಲಿದ್ದಾರೆ.
ಸಮಾರೋಪದ ನಂತರ ಶೃಂಗೇರಿ ತಾಲ್ಲೂಕು ವಿಪ್ರ ಮಹಿಳೆಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದಿನಾಂಕ 23.03.2025ರ ಭಾನುವಾರದಂದು ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭೆಯು ಪ್ರತೀ ವರ್ಷವೂ ನಡೆಸಿಕೊಂಡು ಬರುವ ಲಕ್ಷ ಗಾಯತ್ರಿ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 10.30ಕ್ಕೆ ಪೂರ್ಣಾಹುತಿ ನಡೆಯಲಿದ್ದು ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿ ತಾಲ್ಲೂಕು ಮಹಾಸಭಾದ ಅಧ್ಯಕ್ಷರಾದ ಜಿ.ಎಂ. ಸತೀಶ್ ವಹಿಸಲಿದ್ದು, ಇದರಲ್ಲಿ ಶೃಂಗೇರಿ-ಕೊಪ್ಪ-ಎನ್.ಆರ್.ಪುರ ತಾಲ್ಲೂಕು ಬ್ರಾಹ್ಮಣ ಮಹಾಸಭಾಗಳ ಪರವಾಗಿ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿದ್ದು, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ವೇ.ಬ್ರ.ಶ್ರೀ ಶಂ.ನ. ಕೃಷ್ಣಮೂರ್ತಿಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಭಿನಂದನಾ ಭಾಷಣವನ್ನು ಹಿರಿಯ ಪತ್ರಕರ್ತರಾದ ಎಂ.ಎಂ. ಪ್ರಭಾಕರ ಕಾರಂತ್ ನಡೆಸಿಕೊಡಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಸಿ.ಇ.ಓ. ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಎಂ.ಎಸ್. ಮಹಾಬಲೇಶ್ವರರವರು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೃಂಗೇರಿ ಕ್ಷೇತ್ರ ವಿಪ್ರ ಭಾರತೀ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಸ್. ಚಂದ್ರಶೇಖರರಾವ್, ಹುಲುಗಾರು, ಕೊಪ್ಪ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೃಷ್ಣಮೂರ್ತಿ ಕೆಸರಿಕುಡಿಗೆ ಹಾಗೂ ಎನ್.ಆರ್.ಪುರ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಗಣೇಶ್ ಕನೋಡಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಸಮಿತಿಯು ವಿನಂತಿಸಿದೆ.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಸತೀಶ್ ಜಿ.ಎಂ ಮತ್ತು ಬ್ರಾಹ್ಮಣ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಕವನ ಬಿ. ಶಾಮಸುಂದರ್ ಸೇರಿದಂತೆ ಕಾರ್ಯದರ್ಶಿಗಳಾದ ರವಿ ಕುಮಾರ್,ಉಪಾಧ್ಯಕ್ಷ ಮಹಾಬಲ ಭೀಡೆ,ಕೋಶಾಧ್ಯಕ್ಷರಾದ ಸುಧೀಂದ್ರ ಬೆಟ್ಟಗದ್ದೆ,ಮಹಿಳಾ ತಾಲೂಕು ಸಂಚಾಲಕರಾದ ನಾಗಮಣಿ,ನಿರ್ದೇಶಕರಾದ ಶ್ರೀಧರ್ ಅಣ್ಣುಕೊಡಿಗೆ,ಕಲಾ ರಮೇಶ್,ಸುಧಾ ರಾಜಾನಗರ,ಸುಮಂಗಲಿ ಆನಂದಸ್ವಾಮಿ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.