ಸರ್ಕಾರ ಚೆನ್ನಾಗಿದೆ, ಸರ್ಕಾರಕ್ಕೆ ಏನೂ ತೊಂದರೆ ಇಲ್ಲ – ಕೆ.ಜೆ ಜಾರ್ಜ್
* ಹನಿಟ್ರಾಪ್ ಎನ್ನುತ್ತಿದ್ದಂತೆಯೇ ಕೈಮುಗಿದ ಸಚಿವ
* ಮೆಸ್ಕಾಂ ಇಂಜಿನಿಯರ್ ಮೇಲೆ ಗರಂ ಆದ ಇಂಧನ ಸಚಿವ
NAMMUR EXPRESS NEWS
ಚಿಕ್ಕಮಗಳೂರು: ರಾಜ್ಯಾದ್ಯಂತ ಸಚಿವರು-ಶಾಸಕರ ಹನಿಟ್ರ್ಯಾಪ್ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹನಿಟ್ರ್ಯಾಪ್ ಹೆಸರೇಳುತ್ತಿದ್ದಂತೆ ಎರಡೂ ಕೈ ಮುಗಿದ ಸಚಿವ ಜಾರ್ಜ್ ಈ ವಿಚಾರವಾಗಿ ದಯವಿಟ್ಟು ಕ್ಷಮಿಸಿ, ನನ್ನ ಏನೂ ಕೇಳಬೇಡಿ ಎಂದು ಹೇಳಿದರು. ಈ ಬಗ್ಗೆ ಯಾರು ಹೇಳಿದ್ರೋ ಅವರನ್ನೇ ಕೇಳಿ, ನನ್ನ ಕೇಳಬೇಡಿ ಎಂದು ಹೇಳಿದರು.
” ನಾನು ಹನಿಟ್ರ್ಯಾಪ್ ಬಗ್ಗೆ ಏನೂ ಮಾತನಾಡಲ್ಲ, ನನ್ನ ಬಳಿ ಏನೂ ಇಲ್ಲ, ನಾನು ಎಲ್ಲಾದ್ರು ಹೇಳಿದ್ದೀನಾ, ದಯವಿಟ್ಟು ನನ್ನ ಏನೂ ಕೇಳಬೇಡಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಯಾರು ಹೇಳಿದ್ರೋ ಅವರನ್ನೇ ಕೇಳಿ,ರಾಜಣ್ಣ ಅವರ ವಿಚಾರ ಮಾತನಾಡಿದವರು “ಯಾರು…? ಯತ್ನಾಳ್ ರಾಜಣ್ಣ ಹೆಸರೇಳಿದ್ದಕ್ಕೆ ರಾಜಣ್ಣ ಹೇಳಿದ್ದಾರೆ ಅಷ್ಟೇ.
ಗೃಹ ಸಚಿವರು ತನಿಖೆ ಮಾಡ್ತೀವಿ ಅಂತ ಹೇಳಿದ ಮೇಲೆ ಮುಗೀತು. ತನಿಖೆಯಾಗುವವರೆಗೂ ಕಾಯಬೇಕಲ್ವಾ, ಸುಮ್ನೆ ಏಕೆ ಗಲಾಟೆ ಮಾಡೋದು, ಸರ್ಕಾರ ಚೆನ್ನಾಗಿದೆ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ರಾಜ್ಯದಲ್ಲಿ ಜನ ಬಿ ಜೆ ಪಿ ಸಂಖ್ಯೆ ಕಡಿಮೆ ಮಾಡಿದ್ದಾರೆ. ಸದನದಲ್ಲಿ ಅವರದ್ದು ಬರೀ ಹಿಟ್ ಅಂಡ್ ರನ್ ಅಷ್ಟೇ ಎಂದು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.
ಮೆಸ್ಕಾಂ ಇಂಜಿನಿಯರ್ ಮೇಲೆ ಗರಂ ಆದ ಸಚಿವ ಜಾರ್ಜ್ !!
ಉಸ್ತುವಾರಿ ಸಚಿವ ಕೆ. ಜೆ ಜಾರ್ಜ್ ಚಿಕ್ಕಮಗಳೂರು ಪ್ರವಾಸದ ವೇಳೆ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಪವರ್ ಕಟ್ ಆಗುತ್ತಿರುವ ಕುರಿತು ರೈತರು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮೆಸ್ಕಾಂ ಇಂಜಿನಿಯರ್ ಮಾರುತಿ ವಿರುದ್ದ ಗರಂ ಆದ ಉಸ್ತುವಾರಿ ಸಚಿವ ಸಚಿವ ಜಾರ್ಜ್ ಯಾಕೆ ಪವರ್ ಕಟ್ ಮಾಡುತ್ತಿದ್ದೀರಾ? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.
