Categories
ಚಿಕ್ಕಮಗಳೂರು

ಪತ್ನಿಯ ಬರ್ಬರ ಹತ್ಯೆ ಮಾಡಿ ಠಾಣೆಗೆ ಬಂದ ಪತಿ!

ಪತ್ನಿಯ ಬರ್ಬರ ಹತ್ಯೆ ಮಾಡಿ ಠಾಣೆಗೆ ಬಂದ ಪತಿ!
– ಚಿಕ್ಕಮಗಳೂರು ನಗರದಲ್ಲಿ ಘಟನೆ
– ಪರಿಶಿಷ್ಟ ಬಡ ಹೆಣ್ಣಿನ ಮೇಲೆ ದೌರ್ಜನ್ಯ!?
– ಬಾಳೆಹೊನ್ನೂರು: ಸಾಗುವಾನಿ ಮರಗಳರ ಅರೆಸ್ಟ್!
– ಕಾಡಾನೆ ತುಳಿತಕ್ಕೆ ಬಲಿಯಾದ ಕುಟುಂಬಕ್ಕೆ ಶಾಸಕಿ ನಯನ ಮೋಟಮ್ಮ ಸಾಂತ್ವನ

NAMMUR EXPRESS NEWS
ಚಿಕ್ಕಮಗಳೂರು :- ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಸೆಪ್ಟೆಂಬರ್ 5ರಂದು ಹೆಂಡತಿ ಶಹಬಾನುವನ್ನು( 34) ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಗಂಡ ಶಬ್ಬೀರ್ ನಂತರ ನಗರದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ

ಪರಿಶಿಷ್ಟ ಬಡ ಹೆಣ್ಣಿನ ಮೇಲೆ ದೌರ್ಜನ್ಯ!

ಬಾಳೆಹೊನ್ನೂರು: ಪಟ್ಟಣದ ಪೊಲೀಸ್ ಠಾಣೆ ಬಳಿ ಮುಖ್ಯ ರಸ್ತೆಯ ಪಕ್ಕದಲ್ಲಿ 16 ವರ್ಷಗಳಿಂದ ಬುಟ್ಟಿ, ಮೊರ, ಕುಕ್ಕೆ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಭವಾನಿ ಎಂಬುವವರನ್ನು ಇದ್ದ ಜಾಗದಿಂದ ಬಲತ್ಕಾರವಾಗಿ ಹೊರಹಾಕುವ ಮೂಲಕ ಬಿ.ಕಣಬೂರು ಗ್ರಾಮ ಪಂಚಾಯತಿ ದೌರ್ಜನ್ಯ ಎಸಗಿದೆ ಎಂದು ಶೃಂಗೇರಿ ಕ್ಷೇತ್ರದ ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಆರೋಪಿಸಿದರು.

ಬಾಳೆಹೊನ್ನೂರು: ಸಾಗುವಾನಿ ಮರಗಳ್ಳರ ಅರೆಸ್ಟ್!

ಬಾಳೆಹೊನ್ನೂರು ಸಮೀಪದ ಬಸವನಕೋಟೆ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಿಸುತ್ತಿದ್ದ ಎ.ಎನ್.ಆರ್ಥೇಶ್, ಪ್ರದೀಪ್,ಮಂಜುನಾಥ್, ಧರ್ಮಪ್ಪ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ

ಕಾಡಾನೆ ತುಳಿತಕ್ಕೆ ಬಲಿಯಾದ ಕುಟುಂಬಕ್ಕೆ ಸಾಂತ್ವನ

ಆಲ್ದುರ್: ಆನೆದಾಳಿಯಿಂದ ಮೃತಪಟ್ಟಿದ್ದ ದೊಡ್ಡ ಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಚಿನ ಕಲ್ ದುರ್ಗಾ ಗ್ರಾಮದ ಕೂಲಿ ಕಾರ್ಮಿಕ ಕಿನ್ನಿ ಅವರ ಮನೆಗೆ ಭೇಟಿ ನೀಡಿ ಶಾಸಕಿ ನಯನಾ ಮೋಟಮ್ಮ ಅವರು, ಕುಟುಂಬಸ್ಥರಿಗೆ ಪರಿಹಾರ ಮೊತ್ತದ ಚೆಕ್ ನೀಡಿ ಸಾಂತ್ವನ ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.