Categories
ಚಿಕ್ಕಮಗಳೂರು

ದೇವರ ಗುಡಿಯಲ್ಲಿನ ವಿಗ್ರಹ ಕದ್ದ ಕಳ್ಳನ ಬಂಧನ

ಚಿಕ್ಕಮಗಳೂರು ಟಾಪ್ ನ್ಯೂಸ್

* ದೇವರ ಗುಡಿಯಲ್ಲಿನ ವಿಗ್ರಹ ಕದ್ದ ಕಳ್ಳನ ಬಂಧನ
* ಹಾಡ ಹಗಲೇ ಒಂಟಿ ಸಲಗದ ಓಡಾಟ, ಆತಂಕದಲ್ಲಿ ಜನ
* ಕಳಸದಲ್ಲಿ ಅಕ್ರಮ ಗೋಸಾಗಾಟ ಮೂವರ ಬಂಧನ
* ಕೊಪ್ಪದಲ್ಲಿ ಗೋಕಳ್ಳತನಕ್ಕೆ ವಿಫಲ ಯತ್ನ,ವಿಡಿಯೋ ಸಾಕ್ಷ್ಯ ನೀಡಿದರು ಕ್ರಮ ಇಲ್ಲ ಬಜರಂಗದಳ ಆಕ್ರೋಶ

NAMMMUR EXPRESS NEWS
* ದೇವರ ಗುಡಿಯಲ್ಲಿನ ವಿಗ್ರಹ ಕದ್ದ ಕಳ್ಳನ ಬಂಧನ
ಚಿಕ್ಕಮಗಳೂರು: ನಗರದ ನಗರ ಪೊಲೀಸ್ ಸ್ಟೇಷನ್ ಹಿಂಭಾಗದ ಶಾಂತಿನಗರದ ಸರ್ಕಲ್‌ನಲ್ಲಿ ಬೇವಿನ ಮರದಡಿ ಸುಮಾರು ವರ್ಷಗಳಿಂದ ಪೂಜಿಸಲ್ಪಟ್ಟ ಶ್ರೀ ಮಾರಿಯಮ್ಮನವರ ವಿಗ್ರಹ ದಿನಾಂಕ 24:05:2025ರ ಸಂಜೆ 6.30 ಕ್ಕೆ ಕಾಣೆಯಾಗಿತ್ತು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿಂತೆ ಆರೋಪಿಯ ಪತ್ತೆಗೆ ಬಲೆಬೀಸಿದ ಪೊಲೀಸರು ಅನೀಸ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಕಳ್ಳತನವಾದ ವಿಗ್ರಹವನ್ನು ಆರೋಪಿಯ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

* ಹಾಡ ಹಗಲೇ ಒಂಟಿ ಸಲಗದ ಓಡಾಟ, ಆತಂಕದಲ್ಲಿ ಜನ
ಎನ್.ಆರ್ ಪುರ: ತಾಲೂಕಿನ ಮುತ್ತಿನಕೊಪ್ಪ,ಕುಶಾಲಪುರ,ಚಬ್ಬೆನಾಡು,ಜಂಬಳ್ಳಿ ಭಾಗದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಒಂಟಿಸಲಗವೊಂದು ಏಕಾಏಕಿ ಓಡಾಟ ನಡೆಸಿದೆ. ಈ ಒಂಟಿ ಸಲಗವು ಬೆಳಿಗ್ಗೆಯಿಂದ ಓಡಾಟ ನಡೆಸಿದ್ದು ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಶಾಲೆಯೊಂದರ ಪಕ್ಕದಲ್ಲೇ ಓಡಾಡಿದ ಆನೆಯನ್ನು ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಅರಣ್ಯ ಇಲಾಖೆ,ಭದ್ರಾ ವೈಡ್ ಲೈಫ್,ಇಪಿಎಫ್ ಸಿಬ್ಬಂಧಿಗಳು ಸೇರಿ ಆನೆಯನ್ನು ಓಡಿಸಿದ್ದಾರೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮಕೈಗೊಂಡು ಆನೆ ಮತ್ತು ಮನುಷ್ಯನ ಸಂಘರ್ಷ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

* ಕಳಸದಲ್ಲಿ ಅಕ್ರಮ ಗೋಸಾಗಾಟ, ಮೂವರ ಬಂಧನ
ಕಳಸ: ಎಡೂರು ಗ್ರಾಮದಲ್ಲಿ ಅಕ್ರಮ ಗೋ ಸಾಗಣೆ ವೇಳೆ ಕಳಸ ಪೊಲೀಸರು ದಾಳಿ ನಡೆಸಿ ಗೋವುಗಳ ರಕ್ಷಣೆ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಗುರುವಾರ ಬೆಳಗಿನ ಜಾವ ಕಳಸ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಶಿವಕುಮಾರ್, ಗಿರೀಶ್, ವಿಶ್ವನಾಥ್ ಪಿಕ್ಅಪ್ ವಾಹನ ತಡೆದು ನಿಲ್ಲಿಸಿದರು. ವಾಹನದಲ್ಲಿ ಮೂರು ಜಾನುವಾರುಗಳು ಇದ್ದವು. ಗೋ ಸಾಗಣೆ ಮಾಡುತ್ತಿದ್ದ ಒಬ್ಬ ಸ್ಥಳೀಯ ಮತ್ತು ಇಬ್ಬರು ಬೇರೆ ಊರಿನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

* ಕೊಪ್ಪದಲ್ಲಿ ಗೋಕಳ್ಳತನಕ್ಕೆ ವಿಫಲ ಯತ್ನ, ಸಾಕ್ಷ್ಯ ನೀಡದರೂ ಕ್ರಮವಿಲ್ಲ ಬದರಂಗದಳ ಆರೋಪ
ಕೊಪ್ಪ: ತಾಲೂಕಿನ ಶಿವಪುರದಲ್ಲಿ ಗೋವುಗಳನ್ನು ಕದಿಯಲು ವಿಫಲ ಯತ್ನ ನಡೆದಿದೆ. ತಡರಾತ್ರಿ 2:10 ರ ಸುಮಾರಿಗೆ ಗೋವುಗಳನ್ನು ಕದಿಯಲು ಯತ್ನಿಸಿದ್ದಾರೆ, ಆದರೆ ಅದೇ ಸಮಯಕ್ಕೆ ಮಹಿಳೆಯೊಬ್ಬರು ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಕಳ್ಳರು ಪರಾರಿಯಾಗಿದ್ದಾರೆ. ಘಟನೆ ನಂತರ ಸ್ಥಳಕ್ಕೆ ಬಜರಂಗದಳ ಕಾರ್ಯಕರ್ತರು ಆಗಮಿಸಿ ಮನೆಯವರಿಗೆ ಸಹಾಯ ಮಾಡಿದ್ದಾರೆ.
ಗೃಹ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೇಲೆ ಅನುಮಾನ ಶುರುವಾಗಿದೆ, ಕಳೆದ ಎರಡು ಮೂರು ತಿಂಗಳಿನಲ್ಲಿ 10 ಸಿಸಿಟಿವಿ ದೃಶ್ಯವನ್ನು ನೀಡಿದ್ದೇವೆ. ಆದರೆ ಇಂದಿಗೂ ಕೂಡ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆಯೇ ಇವರ ಜೊತೆಗೆ ಶಾಮೀಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಪೊಲೀಸ್‌ ಇಲಾಖೆ ಆದಷ್ಟೂ ಬೇಗ ಗೊಕಳ್ಳರನ್ನು ಪತ್ತೆ ಹಚ್ಚಬೇಕು. ಗೋ ಸಾಗಾಟವನ್ನು ನಿಲ್ಲಸಬೇಕು ಎಂದು ಎಂದು ಕೊಪ್ಪ ತಾಲ್ಲೂಕು ಬಜರಂಗದಳ ಸಂಚಾಲಕ ವಿನಯ್ ಶಿವಪುರ ಆಗ್ರಹಿಸಿದ್ದಾರೆ.
ಇದು ಇಂದು ನಿನ್ನೆಯಿಂದ ನಡೆಯುತ್ತಿಲ್ಲ, ಜೂನ್ 6 ನೇ ತಾರೀಕು ಬಕ್ರೀದ್‌ ಇದೆ, ಈ ಕಾರಣಕ್ಕಾಗಿ ಇನ್ನು ಹೆಚ್ಚಿನ ಗೋಸಾಗಾಟ ಆಗುವಂತಹ ಸಂಭವವಿದ್ದು,ಹೀಗಾಗಿ ಆದಷ್ಟೂ ಬೇಗ ಪೊಲೀಸ್ ಇಲಾಖೆ ಇನ್ನೂ ಅನೇಕ ಚೆಕ್‌ ಪೋಸ್ಟ್‌ ಗಳನ್ನು ಹಾಕಿ ವಾಹನವನ್ನು ಪರಿಶೀಲನೆ ಮಾಡಿ ಗಾಡಿಗಳನ್ನು ಬಿಡಬೇಕು. ಅಕ್ರಮವಾಗಿ ಗೋಸಾಗಾಟವನ್ನು ತಡೆಯಬೇಕು ಎಂದು ಕೊಪ್ಪ ಬಜರಂಗದಳ ಒತ್ತಾಯಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.