ಟಾಪ್ 5 ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: ಬಸ್ ಹತ್ತುವಾಗ ತುಂಡಾದ ಡೋರ್ ಲಾಕ್, ಮಹಿಳೆಗೆ ಗಂಭೀರ ಗಾಯ !
– ಕೊಪ್ಪ: ಅಕ್ರಮವಾಗಿ ಸಂಪಿಗೆ ಮರವನ್ನು ಕಡಿದ ಅರಣ್ಯ ಇಲಾಖೆ
– ಚಿಕ್ಕಮಗಳೂರು: 30 ಬೈಕ್ ಗಳನ್ನು ಕದ್ದ ಗ್ಯಾಂಗ್ ಅರೆಸ್ಟ್
– ಮೂಡಿಗೆರೆ : ಮಾಕೋನಹಳ್ಳಿ ರಸ್ತೆ ಮಳೆಯಿಂದ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ ತೆರವು
– ಕೊಟ್ಟಿಗೆಹಾರ : ಹೇಮಾವತಿ ನದಿ ದಡದಲ್ಲಿ ಕೊಳೆತ ಮೀನಿನ ರಾಶಿ
NAMMUR EXPRESS NEWS
ಚಿಕ್ಕಮಗಳೂರು : ಸರ್ಕಾರಿ ಬಸ್ ಹತ್ತುವ ವೇಳೆ ಬಾಗಿಲಿನ ಲಾಕ್ ತುಂಡಾದ ಪರಿಣಾಮ ಬಸ್ನಿಂದ ಕೆಳಗೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದ ಬಳಿ ನಡೆದಿದೆ. ಐದಳ್ಳಿ ಗ್ರಾಮದ ಶಕುಂತಲಮ್ಮ ಎಂಬ ಮಹಿಳೆಗೆ ಗಂಭೀರ ಗಾಯಯವಾಗಿದ್ದು ಅವರನ್ನು ಆಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದು ಶಕುಂತಳಮ್ಮ ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಬಸ್ನ ಬಾಗಿಲಿನ ಲಾಕ್ ತುಂಡಾಗಿದೆ ಪರಿಣಾಮ ಬಾಗಿಲು ಹಿಡಿದ್ದಿದ್ದ ಮಹಿಳೆ ಏಕಾಏಕಿ ಬಸ್ನಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ. ಬಸ್ ಸರಿಯಾದ ನಿರ್ವಹಣೆ ಇಲ್ಲದೆ ಈ ರೀತಿ ಆಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕೊಪ್ಪ: ಅಕ್ರಮವಾಗಿ ಸಂಪಿಗೆ ಮರವನ್ನು ಕಡಿದ ಅರಣ್ಯ ಇಲಾಖೆ
ಕೊಪ್ಪ: ಪಟ್ಟಣದ ವಾಟರ್ ಟ್ಯಾಂಕ್ ಸರ್ಕಲ್ ಬಳಿ ಕಾನೂನು ಬಾಹಿರವಾಗಿ ಸಂಪಿಗೆ ಮರವನ್ನು ಕಡಿಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ವೀರಭದ್ರ ಸ್ವಾಮಿ ದೇವಾಲಯದ ಸಮೀಪವಿರುವ ಈಶ್ವರ ದ್ವೇವಸ್ಥಾನದ ಮುಂಭಾಗ ಸಂಪಿಗೆ ಮರವಿತ್ತು. ಇದು ಇದ್ದಕ್ಕಿದ್ದಂತೆಯೇ ಮಾಯವಾಗಿದೆ. ಈ ಆಕ್ರಮ ಚಟುವಟಿಕೆಯಲ್ಲಿ ಅರಣ್ಯ ಇಲಾಖೆಯ ಫಾರೆಸ್ಟರ್ ಮತ್ತು ಗಾರ್ಡ್ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಕ್ರಮವಾಗಿ ಮರವನ್ನು ಕಡಿದದ್ದು ಮಾತ್ರವಲ್ಲದೇ ಮಾರಾಟದ ಪ್ರಯತ್ನ ಕೂಡಾ ನಡೆದಿತ್ತು. ಆದರೆ, ಸಾಮಾಜಿಕ ಕಾರ್ಯಕರ್ತರು ಅರಣ್ಯ ಇಲಾಖೆಗೆ ಕ್ಲಾಸ್ ತೆಗೆದುಕೊಂಡ ನಂತರ ಸದ್ಯ ಸಂಪಿಗೆ ಮರವನ್ನು ಅರಣ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಇರಿಸಲಾಗಿದೆ.
– ಚಿಕ್ಕಮಗಳೂರು: 30 ಬೈಕ್ ಗಳನ್ನು ಕದ್ದ ಗ್ಯಾಂಗ್ ಅರೆಸ್ಟ್
ಚಿಕ್ಕಮಗಳೂರು: ಬೈಕುಗಳ ಸರಣಿ ಕಳ್ಳತನ ಮಾಡುತ್ತಿದ್ದ ಕಜಡೀಮರ ಗುಂಪನ್ನು ಬಸವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬರೋಬ್ಬರಿ 30 ಬೈಕುಗಳನ್ನು ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಖಯ್ಯಮ್ ಪಾಷಾ, ನವೀನ್ ಕುಮಾರ್, ಮತ್ತು ಉಮರ್ ಬೇಗ್ ಬಂಧಿತರು. ಆರೋಪಿಗಳು ಚಿಕ್ಕಮಗಳೂರು, ಶಿವಮೊಗ್ಗ, ಕಡೂರು, ಭದ್ರಾವತಿ ಸೇರಿದಂತೆ ಹಲವೆಡೆ ಒಟ್ಟು 30 ಬೈಕುಗಳನ್ನು ಕಳ್ಳತನ ಮಾಡಿದ್ದರು. ಅವುಗಳಲ್ಲಿ 13 ಬೈಕುಗಳನ್ನು ಉಮರ್ ಬೇಗ್ ಗೆ ಸೇರಿದ ಗುಜರಿಯಲ್ಲಿ ಮಾರಾಟ ಮಾಡಿದ್ದರು. ಒಟ್ಟು 11,15,000 ರೂ. ಮೌಲ್ಯದ ಕಳ್ಳತನ ಮಾಡಿದ್ದು, ಅವುಗಳಲ್ಲಿ ಸುಸ್ಥಿತಿಯಲ್ಲಿರುವ 17 ಬೈಕ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಜೊತೆಗೆ 2,15,000 ರೂ ನಗದು ಮತ್ತು 50,000 ರೂ ಮೌಲ್ಯದ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
– ಮೂಡಿಗೆರೆ : ಮಾಕೋನಹಳ್ಳಿ ರಸ್ತೆ ಮಳೆಯಿಂದ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ ತೆರವು
ಮೂಡಿಗೆರೆ : ತಾಲೂಕಿನ ಮಾಕೋನಹಳ್ಳಿ ಸಮೀಪದಲ್ಲಿ ಗಾಳಿ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬೆಳಗ್ಗೆ ಬಿದಿದ್ದು, ಸುಮಾರು 4 ಗಂಟೆ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಬೃಹತ್ ಮರ ವಿದ್ಯುತ್ ಲೈನಿನ ಮೇಲೂ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯವು ಉಂಟಾಗಿತ್ತು. ಕೂಡಲೇ ಮೂಡಿಗೆರೆ ಶೌರ್ಯ ವಿಪತ್ತು ನಿರ್ವಹಣ ತಂಡ, ಅರಣ್ಯ ಹಾಗೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ವಿದ್ಯುತ್ ಲೈನ್ ಸರಿಪಡಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ಕ್ರಮ ವಹಿಸಲಾಗಿದೆ.
ಕಾರ್ಯಚರಣೆಯಲ್ಲಿ ಶೌರ್ಯ ವಿಪತ್ತು ತಂಡದ ಮಾಸ್ಟರ್ ಪ್ರವೀಣ್ ಪೂಜಾರಿ, ಕಿಶೋರ್, ಗೀತಾ ಹಾಗೂ ಮೆಸ್ಕಾಂ, ಅರಣ್ಯ ಸಿಬ್ಬಂದಿ ಮೆಸ್ಕಾಂ ಸಿಬ್ಬಂದಿ ಭಾಗವಹಿಸಿದ್ದರು.
– ಕೊಟ್ಟಿಗೆಹಾರ : ಹೇಮಾವತಿ ನದಿ ದಡದಲ್ಲಿ ಕೊಳೆತ ಮೀನಿನ ರಾಶಿ
ಕೊಟ್ಟಿಗೆಹಾರ: ಬಣಕಲ್ ಸಮೀಪದ ಹೇಮಾವತಿ ನದಿ ದಡದಲ್ಲಿ ಕೊಳೆತ ಮೀನಿನ ರಾಶಿಯನ್ನು ಸುರಿದು ನದಿ ನೀರು ಕಲುಷಿತಗೊಳ್ಳುವಂತೆ ಮಾಡಲಾಗಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮೀನು ಮಾರಾಟಗಾರರು ಮಾರಾಟವಾಗದೆ ಉಳಿದ ಮೀನನ್ನು ಅಥವಾ ಮೀನು ಸಾಗಿಸುವ ಲಾರಿಯವರು ವಾಹನ ಸ್ವಚ್ಛಗೊಳಿಸುವಾಗ ಉಳಿದ, ಹಾಳಾದ ಮೀನುಗಳನ್ನು ಇಲ್ಲಿ ಎಸೆದಿರುವ ಸಾಧ್ಯತೆಗಳಿವೆ. ಈ ಮೀನುಗಳು ಕೊಳೆತು ನದಿ ನೀರು ಸೇರುತ್ತಿದೆ. ಕೆಲವು ಗ್ರಾಮಗಳ ಜನರು ಹೇಮಾವತಿ ನದಿ ನೀರನ್ನೇ ಕುಡಿಯಲುಬಳಸುತ್ತಾರೆ. ನದಿ ತೀರದಲ್ಲಿ ಮೀನು ಎಸೆದವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸೋಮವಾರ ಸಂತೆ ದಿನ. ಕೆಲವು ಮೀನು ಸಾಗಿಸುವ ವಾಹನ ಚಾಲಕರು ವಾಹನ ತೊಳೆಯಲು ಹೋಗಿ ಕೊಳೆತ ಮೀನು ನದಿ ದಂಡೆಯಲ್ಲಿ ಬಿಸಾಕಿದ್ದಾರೆ’ ಎಂದು ಸಮಾಜ ಸೇವಕ ಮೊಹಮ್ಮದ್ ಆರೀಫ್ ಹೇಳಿದರು. ಹೇಮಾವತಿ ನದಿ ತೀರದಲ್ಲಿ ಕೊಳೆತ ಮೀನು ಎಸೆದಿರುವ ಬಗ್ಗೆ ದೂರು ಬಂದಿದೆ. ಅದನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಮೀನು ಸಾಗಿಸುವ ವಾಹನಗಳ ಚಾಲಕರು ಹಾಗೂ ಮೀನು ವ್ಯಾಪಾರಿಗಳಿಗೆ ನದಿಯ ಬದಿಯಲ್ಲಿ ಕೊಳೆತ ಮೀನು ಎಸೆಯದಂತೆ ಎಚ್ಚರಿಕೆ ನೀಡಲಾಗಿದೆ. ಇದು ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಬಣಕಲ್ ಗ್ರಾ.ಪಂ. ಅಧ್ಯಕ್ಷೆ ಅತಿಕಾಭಾನು ಹೇಳಿದರು.
