Categories
ಚಿಕ್ಕಮಗಳೂರು

ಕೊಪ್ಪ ಪಟ್ಟಣದ ಬಳಿ ಎರಡು ಕಾಡಾನೆ ಪ್ರತ್ಯಕ್ಷ,ಜನರಲ್ಲಿ ಆತಂಕ ಸೃಷ್ಠಿ

ಕೊಪ್ಪ ಪಟ್ಟಣದ ಬಳಿ ಎರಡು ಕಾಡಾನೆ ಪ್ರತ್ಯಕ್ಷ,ಜನರಲ್ಲಿ ಆತಂಕ ಸೃಷ್ಠಿ

* ಕೊಪ್ಪ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ತೋಟದಲ್ಲಿರುವ ಕಾಡಾನೆ
* ಆನೆಗಳಿಗೆ ತೊಂದರೆ ಕೊಡದಿರಿ,ಜನರು ಎಚ್ಚರಿಕೆಯಿಂದ ಇರಿ ಎಂದ ಅರಣ್ಯ ಇಲಾಖೆ

NAMMMUR EXPRESS NEWS
ಕೊಪ್ಪ: ತಿಂಗಳುಗಳಿಂದ ಶೃಂಗೇರಿ ಕ್ಷೇತ್ರದಾದ್ಯಂತ ಕಾಡಾನೆ ಉಪಟಳ ಹೆಚ್ಚಾಗಿದ್ದು ಕಳೆದ ವಾರ ಬಾಳೆಹೊನ್ನೂರು- ಕೊಪ್ಪ ಗಡಿಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಈಗ ಕೊಪ್ಪ ಪಟ್ಟಣದ ಸಮೀಪ ಪ್ರತ್ಯಕ್ಷಗೊಂಡಿವೆ. ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಕೊಪ್ಪ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ತೋಟದಲ್ಲಿ ಕಾಣಿಸಿಕೊಂಡ ಕಾಡಾನೆಗಳಿಂದ ಜನರಲ್ಲಿ ಭಾರೀ ಆತಂಕ ಸೃಷ್ಠಿಯಾಗಿದೆ.
ಕಾಡಾನೆಗಳು ಬಾಳಗಡಿ,ಬಿಂತ್ರವಳ್ಳಿ,ನುಗ್ಗಿ,ಬಪ್ಪುಂಜಿ,ಮೇಲ್ಪಾಲ್ ಮಾರ್ಗವಾಗಿ ಸಂಚರಿಸಿ ಸ್ವಸ್ಥಾನಕ್ಕೆ ತೆರಳುವ ಸಾಧ್ಯತೆಯಿದ್ದು,ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಆನೆಗಳ ಸಂಚಾರ ಗಮನಿಸುತ್ತಿದ್ದು ಈ ಮಾರ್ಗದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾಡಾನೆಗಳಿಗೆ ಯಾವುದೇ ತೊಂದರೆಯಾಗದಂತೆ ಅವು ಸಂಚರಿಸಿ ಸ್ವಸ್ಥಾನಕ್ಕೆ ಹಿಂತಿರುಗಳು ಅನುವು ಮಾಡಿಕೊಡುವಂತೆ ಮನವಿ ಮಾಡಿದೆ.
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಜಾಗೃತರಾಗಿದ್ದು, ಮಕ್ಕಳು,ವೃದ್ಧರನ್ನು ಮನೆಯಿಂದ ಹೊರಗೆ ಬಿಡದೇ,ಅನವಶ್ಯಕವಾಗಿ ಹೊರಗೆ ಬಾರದೇ ಎಚ್ಚರಿಕೆ ವಹಿಸಿ,ಆನೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅರಣ್ಯ ಇಲಾಖೆಯ ಗಮನಕ್ಕೆ ತರುವಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.