Categories
ಚಿಕ್ಕಮಗಳೂರು

ಕೊಪ್ಪ ತಾಲೂಕಲ್ಲಿ ವಿಶ್ವನಾಥ್ ಗದ್ದೆಮನೆ ಸೇವಾ ಹೆಜ್ಜೆ!

ಕೊಪ್ಪ ತಾಲೂಕಲ್ಲಿ ವಿಶ್ವನಾಥ್ ಗದ್ದೆಮನೆ ಸೇವಾ ಹೆಜ್ಜೆ!
* ವಿಶ್ವನಾಥ್ ಅಭಿಮಾನಿಗಳ ಬಳಗದಿಂದ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ
* ಗೋಲೋಕ ಗೋ ಶಾಲೆಗೆ ಪ್ರತಿ ತಿಂಗಳು ಸಹಾಯದ ಭರವಸೆ

NAMMMUR EXPRESS NEWS
ಕೊಪ್ಪ: ಸಮಾಜ ಸೇವಕರು, ಉದ್ಯಮಿಗಳು ಆದ ವಿಶ್ವನಾಥ್ ಗದ್ದೆಮನೆ ಅವರಿಂದ ಕೊಪ್ಪ ತಾಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ ಮಾಡಲಾಯಿತು. ಈ ಮೂಲಕ ವಿಶ್ವನಾಥ್ ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿ ಆಯಿತು.
ಕೊಪ್ಪ ತಾಲೂಕಿನ ವಿವಿಧ ಶಾಲೆಗಳಾದ ಬಸರೀಕಟ್ಟೆ, ಜಯಪುರ, ನಿಲುವಾಗಿಲು,ಕಮ್ಮರಡಿ,ಹರಿಹರಪುರ,ಕೊಪ್ಪ ಭಾಗದ ಸುಮಾರು 40 ಶಾಲೆಗಳ 2500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಒಂದು ಜೊತೆ ಟ್ರಾಕ್ ಸೂಟ್,ಒಂದು ಜೊತೆ ಯೂನಿ ಫಾರಂನ್ನು ವಿತರಿಸಲಾಯಿತು.

ಮೂರು ತಾಲೂಕಿನ ಎಲ್ಲಾ ಶಾಲೆಗಳಿಗೆ ವಿತರಣೆ ಗುರಿ

ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಒಳಗೆ ಶೃಂಗೇರಿ,ಕೊಪ್ಪ,ಎನ್.ಆರ್ ಪುರ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡುವ ಗುರಿ ಹೊಂದಿರುವ ವಿಶ್ವನಾಥ್ ಅಭಿಮಾನ ಬಳಗ ತಂಡ ಕಳೆದ ತಿಂಗಳು ಶೃಂಗೇರಿ, ಮತ್ತು ತೀರ್ಥಹಳ್ಳಿ ತಾಲೂಕಿನ ಶಾಲೆಗಳಿಗೆ ಭೇಟಿನೀಡಿ ಶೈಕ್ಷಣಿಕ ಪರಿಕರ ವಿತರಿಸಿತ್ತು.

* ಗೋಲೋಕ ಗೋಶಾಲೆಗೆ ಪ್ರತಿ ತಿಂಗಳು ಸಹಾಯದ ಭರವಸೆ

ಸಮಾಜ ಸೇವೆಯ ಮುಂದುವರಿದು ಕೊಪ್ಪ ತಾಲೂಕಿನ ಹರಿಹರಪುರ ಬಳಿಯ ಗೋಲೋಕ ಗೋಶಾಲೆಗೆ ಭೇಟಿ ನೀಡಿದ ವಿಶ್ವನಾಥ್ ಗದ್ದೆಮನೆಯವರು ಟ್ರಸ್ಟ್‌ನ ಸೇವಾ ಕಾರ್ಯವನ್ನು ಅಭಿನಂದಿಸಿ,ಶ್ಲಾಘಿಸಿದರು. ಈ ಶ್ರೇಷ್ಠ ಕಾರ್ಯಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದರು. ಈ ‌ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಸ್ವಾಮಿ, ಶೈಲೇಶ್ ಹೊಳ್ಳ ಸೇರಿದಂತೆ ಗೋಲೋಕ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.