ಶೃಂಗೇರಿಯಲ್ಲೂ ಶುರುವಾಯಿತು ಕಾಡಾನೆ ಕಾಟ !!
* ಯಡೂರು,ಮಾರನಕೊಡಿಗೆ ಭಾಗದಲ್ಲಿ ಆನೆಯ ಓಡಾಟ
* ಕುಂಚೇಬೈಲು ತೋಟವೊಂದರಲ್ಲಿ ಕಾಣಿಸಿಕೊಂಡ ಕಾಡಾನೆ
NAMMMUR EXPRESS NEWS
ಶೃಂಗೇರಿ: ಕಳೆದ ಕೆಲವು ದಿನಗಳಿಂದ ಕೊಪ್ಪ,ಜಯಪುರ,ಬಾಳೆಹೊನ್ನೂರು ಭಾಗದಲ್ಲಿ ಸಂಚರಿಸಿ ರೈತರ ಬೆಳೆ ನಾಶ ಮಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದ ಕಾಡಾನೆ ಈಗ ಶೃಂಗೇರಿ ತಾಲೂಕಿಗೂ ಎಂಟ್ರಿ ಕೊಟ್ಟಿವೆ. ಕಳೆದ ರಾತ್ರಿ ತಾಲೂಕಿನ ಯಡೂರು,ಮಾರನಕೊಡಿಗೆ,ಕುಂಚೇಬೈಲು ಭಾಗದಲ್ಲಿ ಸಂಚಾರ ನಡೃಸಿದ ಮಾಹಿತಿ ಲಭ್ಯವಾಗಿದೆ. ಕಳೆದ ರಾತ್ರಿ ಜಯಪುರ ಸಮೀಪದ ಕೂಳೂರು ಶೇಶಪ್ಪಗೌಡ ಅವರ ತೋಟಕ್ಕೆ ಬಂದ ಆನೆಗಳು ಬೆಳೆ ನಾಶ ಮಾಡಿದೆ. ಶೃಂಗೇರಿ ತಾಲೂಕಿನ ಯಡೂರು,ಮಾರನಕೊಡಿಗೆ ಭಾಗದಲ್ಲಿ ಸಂಚರಿಸಿ ಇಂದು ಬೆಳಿಗ್ಗೆ ಕುಂಚೇಬೈಲು ಹೊಸೂರಿನ ಸುಬ್ರಮಣ್ಯ ಭಟ್ ಇವರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ಇರುವುದರಿಂದ ತಾಲೂಕಿನ ಮೆಣಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೌಳಿ,ಕುಂತೂರು,ಕಿಕ್ರೆ,ಶಿಡ್ಲೆ,ಕುಂಚೇಬೈಲು ಸೇರಿದಂತೆ ಅದರ ಅಕ್ಕಪಕ್ಕ ಗ್ರಾಮಗಳ ಗ್ರಾಮಸ್ಥರು ಶಾಲಾ ಮಕ್ಕಳು ಎಚ್ಚರಿಕೆ ಇಂದಿರುವಂತೆ ಅರಣ್ಯ ಇಲಾಖೆ ಮನವಿ ಮಾಡಲಾಗಿದೆ. ಆನೆಗಳ ಚಲನವಲನ ಕಂಡು ಬಂದಲ್ಲಿ ಅರಣ್ಯ ಇಲಾಖೆಯ ಫಾರೆಸ್ಟರ್ ಶಂಕರ್ ಪತ್ತಾರ್ ಇವರ ದೂರವಾಣಿ ಸಂಖ್ಯೆ 8088556436 ಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದೆ.
