Categories
ಸಿನಿಮಾ

ಕನ್ನಡಕ್ಕೆ ಹೊಸ ಸಿನಿಮಾ ಪಾರಿತೋಷಕ!

ಕನ್ನಡಕ್ಕೆ ಹೊಸ ಸಿನಿಮಾ ಪಾರಿತೋಷಕ!
– ಮಾ. 14ಕ್ಕೆ ರಾಜ್ಯದಲ್ಲಿ ಬಿಡುಗಡೆ
– ಹೊಸ ಭರವಸೆ ಮೂಡಿಸಿರುವ ಹೊಸಬರ ಸಿನಿಮಾ

NAMMUR EXPRESS NEWS
ಬೆಂಗಳೂರು: ಶಿವಮೊಗ್ಗ ಹಾಗೂ ಚಿತ್ರದುರ್ಗ ಮೂಲದ ಉತ್ಸಾಹಿ ಯುವಕರ ತಂಡವೇ ನಿರ್ಮಿಸಿ, ನಿರ್ದೇಶಿಸಿದ ‘ಪಾರಿತೋಷಕ’ ಹೆಸರಿನ ಚಿತ್ರವು ಮಾ. 14ರಂದು ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ ಎಂದು ಚಿತ್ರದ ನಿರ್ದೇಶಕ ಪ್ರದೀಪ್ ತಿಳಿಸಿದರು.
ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದ ತಂಡದೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಾಮ ಮಾರ್ಗಗಳ ಮೂಲಕ ಸುಲಭವಾಗಿ ಗಳಿಸಿದ ಹಣವು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಅಂತಿಮವಾಗಿ ಕಷ್ಟಪಟ್ಟು ಗಳಿಸಿದ್ದೇ ಶಾಶ್ವತ ಎನ್ನುವ ಥೀಮ್ ಇಟ್ಟುಕೊಂಡು ನಿರ್ಮಾಣ ಮಾಡಿದ ಚಿತ್ರ ಇದ್ದಾಗಿದ್ದು, ಚಿತ್ರದ ಕಥೆಗೆ ತಕ್ಕಂತೆ ಬಂಡವಾಳ ಹೂಡಲಾಗಿದೆ. ಚಿತ್ರವು ಕುಟುಂಬ ಸಮೇತ ನೋಡಬಹುದಾದ ಕಥಾ ಹಂದರವನ್ನು ಹೊಂದಿದೆ. ರಾತ್ರಿ ಸಮಯದಲ್ಲಿಯೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ತುಂಬಾ ರಿಸ್ಕ್ ತೆಗೆದುಕೊಂಡು, ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಎಂದರು.
ಶಿವಮೊಗ್ಗ ಮೂಲದ ಶ್ರೀನಿಧಿ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸಬರು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ. ಹೊಸಬರಿಗೆ ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಮುಂದಿನ ದಾರಿಗೂ ಅನುಕೂಲವಾಗಲಿದೆ ಎಂದರು.
ಚಿತ್ರದ ನಾಯಕ ನಟ ಮನು ಮಾತನಾಡಿ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆನ್ನುವ ಹಂಬಲದೊಂದಿಗೆ ಬೆಂಗಳೂರಿಗೆ ಹೋಗಿ ಅಲ್ಲಿ ನೆಲೆ ಕಾಣದೆ ವಾಪಾಸ್ ಬಂದು ಈ ಸಿನಿಮಾ ಮಾಡಿದ್ದೇವೆ. ಬೆಂಗಳೂರು ‘ಸಮುದ್ರ ಇದ್ದಂತೆ’ ಅಲ್ಲಿದ್ದು ಸಿನಿಮಾದಲ್ಲಿ ಗುರುತಿಸಿಕೊಳ್ಳುವುದು ಕಷ್ಟ. ನಮಗೆ ಅವಕಾಶ ಸಿಗಲಿಲ್ಲ. ಹಾಗಾಗಿ ವಾಪಾಸ್ ಬಂದು ನಾವೇ ಸಿನಿಮಾ ಮಾಡಿದ್ದೇವೆ ಎಂದರು.
ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ನಟಿಸಿದ್ದಾರೆ. ಶಂಕರ್ ಛಾಯಾಗ್ರಹಣ, ಚಂದನ್ ಹೆಗಡೆ ಸಂಗೀತ ಚಿತ್ರಕ್ಕಿದೆ. ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಲಾವಿದ ಹೇಮಂತ್ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.