Categories
ಮಲ್ನಾಡ್ ಸಿನಿಮಾ

ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕನ ಭೇಟಿ ಮಾಡಿದ ನಟ ದರ್ಶನ್!

ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕನ ಭೇಟಿ ಮಾಡಿದ ನಟ ದರ್ಶನ್!
– ಹೊಸನಗರ ತಾಲೂಕಿನ ಯುವಕನಿಗೆ ಡಿ ಬಾಸ್ ಜೋಷ್
– ಏನಿದು ದರ್ಶನ್ ಹಾಗೂ ಅಭಿಮಾನಿ ಕಥೆ?

NAMMUR EXPRESS NEWS
ಹೊಸನಗರ: ಚಿತ್ರ ನಟ ದರ್ಶನ್ ತೂಗುದೀಪ್ ಅವರನ್ನು ನೋಡಬೇಕು ಎಂದು ಹಗಲಿರುಳು ಪರಿತಪ್ಪಿಸುತ್ತಾ ಖಿನ್ನತೆಗೊಳಗಾಗಿದ್ದ ಮಲೆನಾಡಿನ ಕುಗ್ರಾಮ ಮತ್ತಿಕೊಪ್ಪದ ಯುವಕನನ್ನು ದರ್ಶನ್ ಶುಕ್ರವಾರ ಭೇಟಿಯಾಗಿದ್ದಾರೆ.
ಚಿಕ್ಕಂದಿನಿಂದಲೇ ದರ್ಶನ್ ಬಗ್ಗೆ ಅಪಾರ ಅಭಿಮಾನವನ್ನಿಟ್ಟು ಕೊಂಡಿರುವ ಸುದೀಪ ದರ್ಶನ್ ರವರನ್ನು ಹಲವು ಬಾರಿ ಭೇಟಿ ಮಾಡಲು ಪ್ರಯತ್ನಿಸಿ ವಿಫಲನಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಚಿತ್ರನಟ ದರ್ಶನ್ ಶುಕ್ರವಾರ ಯುವಕನನ್ನು ಮೈಸೂರಿಗೆ ಕರೆಸಿಕೊಂಡು ಭೇಟಿಯಾಗಿ ಧೈರ್ಯ ತುಂಬುವ ಮಾತುಗಳನ್ನಾಡುವ ಮೂಲಕ ಯುವಕನಲ್ಲಿ ಭರವಸೆ ಮೂಡಿಸಿದ್ದಾರೆ.

ಚಿತ್ರ ನಟ ದರ್ಶನ್ ನಟಿಸಿರುವ ಹಲವು ಚಿತ್ರಗಳನ್ನು ನೋಡಿ ಅಕರ್ಷಿತನಾದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತ್ತಿಕೊಪ್ಪ ವಾಸಿ ಬಡಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ ಇಪ್ಪತ್ನಾಲ್ಕು ವರ್ಷದ ಸುದೀಪ್ ಚಿತ್ರನಟ ದರ್ಶನ್ ದರ್ಶನಕ್ಕಾಗಿ ಹಾತೊರೆಯುತಿದ್ದಾನೆ.

ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅರನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ ಚಿತ್ರನಟ ದರ್ಶನರವರ ಅಪ್ಪಟ ಅಭಿಮಾನಿಯಾಗಿ ದರ್ಶನ ನಟಿಸಿರುವ ಹಲವು ಚಿತ್ರಗಳನ್ನು ನೋಡುವುದರೊಂದಿಗೆ ಖಿನ್ನತೆಗೊಳ್ಳಗಾಗಿ ಮಣಿಪಾಲ ಅಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಹೀಗೆ ಶಿವಮೊಗ್ಗ ಅಸ್ಪತ್ರೆಯಲ್ಲಿ ಮಾನಸಿಕ ರೋಗದ ಚಿಕಿತ್ಸೆ ಪಡೆಯುತ್ತಿರುವ ಈ ಯುವ ಅಭಿಮಾನಿ ನಟನ ದರ್ಶನಕ್ಕಾಗಿ ಮನೆ ಬಿಟ್ಟು ಗಂಟೂ ಮೂಟೆ ಕಟ್ಟಿಕೊಂಡು ಬೆಂಗಳೂರಿನ ದರ್ಶನ್ ರವರ ತೂಗುದೀಪ ನಿವಾಸದ ಮನೆಬಾಗಿಲಿಗೆ ಹೋದರೂ ದರ್ಶನ್ ರನ್ನು ನೋಡುವ ಭಾಗ್ಯ ದೊರಕುತ್ತಿಲ್ಲ ಎಂದು ತನ್ನ ಮನದಾಳದ ನೋವಯನ್ನು ಹಂಚಿಕೊಂಡಿದ್ದರು.

ತಂದೆ ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿರುವ 24 ವರ್ಷದ ಸುದೀಪ್ ನನಗೆ ದರ್ಶನ್ ಎಂದರೇ ಪಂಚಪ್ರಾಣ,ಅವರು ಉತ್ತಮವಾಗಿ ನಟಿಸುತ್ತಾರೆ. ಅವರನ್ನು ನೋಡಲು ಹಲವಾರು ಬಾರಿ ಮನೆಯವರಿಗೂ ತಿಳಿಸದೇ ಓಡಿ ಹೋಗಿ ಬೆಂಗಳೂರು ರೈಲು ಹತ್ತಿ ನಟ ದರ್ಶನರವರ ಬೆಂಗಳೂರು ಮನೆ ಹತ್ತಿರ ಹೋದರೆ ಅವರನ್ನು ನೋಡಲು ವಾಚಮನ್ ಒಳ ಬಿಡದೇ ಗೇಟ್ ಬಳಿ ನಿಲ್ಲಿಸಿ ಊರಲ್ಲಿಲ್ಲ ಎಂದು ಹೇಳಿ ಕಳುಹಿಸುತ್ತಾರೆ ಎನ್ನುತಿದ್ದ ಸುದೀಪ್ ಗೆ ಈಗ ದರ್ಶನ್ ದರ್ಶನ ಭಾಗ್ಯ ಸಿಕ್ಕಿದೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.