Categories
ಸಿನಿಮಾ

ಚಿತ್ರೀಕರಣ ವೇಳೆ ಬಿದ್ದ ನಟ ನವೀನ್ ಡಿ ಪಡೀಲ್!

ಚಿತ್ರೀಕರಣ ವೇಳೆ ಬಿದ್ದ ನಟ ನವೀನ್ ಡಿ ಪಡೀಲ್!

  • ತೊಡೆಯ ಮೂಳೆ ಮುರಿತ: 3 ತಿಂಗಳ ವಿಶ್ರಾಂತಿ
  • ಬೆಳ್ತಂಗಡಿಯ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ

NAMMUR EXPRESS NEWS
ಮಂಗಳೂರು: ಖ್ಯಾತ ತುಳು ನಟ, ಕಲಾವಿದ ನಟ ನವೀನ್ ಡಿ ಪಡೀಲ್ ಚಿತ್ರೀಕರಣ ವೇಳೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಸಿನಿಮಾ ಚಿತ್ರೀಕರಣ ವೇಳೆ ಚಿತ್ರ ನಟ ನವೀನ್ ಡಿ ಪಡೀಲ್ ಬಿದ್ದು ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ನವೀನ್ ಅವರು ಬಿದ್ದು ತೊಡೆಯ ಮೂಳೆ ಮುರಿತವಾಗಿದೆ. ಮೂರು ತಿಂಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮಯೂರ್ ರೈ ತಿಳಿಸಿದ್ದಾರೆ.

ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ

  • ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು

ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದೆ ನಯನಾ ವಿರುದ್ಧ ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿಯಲ್ಲಿ ಕಾಮಿಡಿ ಕಿಲಾಡಿ ಗ್ಯಾಂಗ್‌ನ ಹಾಸ್ಯ ಕಲಾವಿದ ಸೋಮಶೇಖರ್ ದೂರು ದಾಖಲಿಸಿದ್ದಾರೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಖಾಸಗಿ ಚಾನಲ್‌ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ಪಿಯುಸಿ ತಂಡ ದ್ವಿತೀಯ ಬಹುಮಾನ ಪಡೆದಿತ್ತು. ಬಹುಮಾನವಾಗಿ 3 ಲಕ್ಷ ರೂ. ಹಣಬಂದಿತ್ತು. ಅದರಲ್ಲಿ 30% ಕಟ್ ಆಗಿ ತಲಾ 70 ಸಾವಿರ ಬಂದಿತ್ತು. ಪಿಯುಸಿ ತಂಡದಲ್ಲಿ ನಟಿಸಿದ್ದ ಸೋಮಶೇಖರ್ ಸೇರಿ ಇನ್ನೂ ಮೂವರು ಇದ್ದರು. ಮೂವರಿಗೆ ಜೂನಿಯರ್ ಆರ್ಟಿಸ್ಟ್ ಅಂತಾನೆ ಹಣ ನೀಡಲಾಗುತ್ತದೆ. ಆ ತಂಡದಲ್ಲಿ ಇನ್ನೂ ಇಬ್ಬರು ಸೀನಿಯರ್‌ಗಳಿಗೆ ತಿಂಗಳ ಸಂಬಳ ಇರ್ತಿತ್ತು. ಅನೀಶ್ ಮತ್ತು ಚಿದಾನಂದ್ ಪಿಯುಸಿ ತಂಡದಲ್ಲಿ ಸೀನಿಯರ್‌ಗಳಾಗಿದ್ದರು. ಇಬ್ಬರು ಸೀನಿಯರ್‌ಗಳಿಗೆ ಹಣ ನೀಡುವಂತೆ ಇದೀಗ ನಯನಾ ಅವಾಜ್ ಹಾಕಿದ್ದಾರೆ. ಸೋಮಶೇಖರ್ ಹೇಳುವ ಪ್ರಕಾರ ಸೀನಿಯರ್‌ಗಳಿಗೆ ಹಣ ಕೊಡಲು ಚಾನಲ್ ಹೇಳಿಲ್ಲವಂತೆ. ಇಷ್ಟ ಇದ್ರೆ ಮಾತ್ರ ಕೊಡಬಹುದು ಆದರೆ, ಅವರು ಕೇಳುವಂತಿಲ್ಲ ಎಂದು ಚಾನಲ್ ಹೇಳಿತ್ತಂತೆ. ಆದರೂ ಹಣದ ವಿಚಾರಕ್ಕೆ ನಯನಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಸೋಮಶೇಖರ್ ಆರೋಪ ಮಾಡಿದ್ದು, ಈ ಸಂಬಂಧ ಆ‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.