Categories
ತೀರ್ಥಹಳ್ಳಿ ಸಿನಿಮಾ

ಚಿತ್ರರಂಗಕ್ಕೆ ತೀರ್ಥಹಳ್ಳಿಯ ಮತ್ತೋರ್ವ ಹೊಸ ಪ್ರತಿಭೆ

ಚಿತ್ರರಂಗಕ್ಕೆ ತೀರ್ಥಹಳ್ಳಿಯ ಮತ್ತೋರ್ವ ಹೊಸ ಪ್ರತಿಭೆ
– ತೀರ್ಥಹಳ್ಳಿ ಹುಡುಗ ಮಿಲಿನ್ ಗೌತಮ್ “ಹುಲಿ ನಾಯಕ ” ಸಿನಿಮಾದ ಹೀರೋ

NAMMUR EXPESS NEWS
ತೀರ್ಥಹಳ್ಳಿ: ಕನ್ನಡ ಚಿತ್ರರಂಗಕ್ಕೆ ತೀರ್ಥಹಳ್ಳಿಯ ಅನೇಕ ಪ್ರತಿಭೆಗಳು ತಮ್ಮದೇ ಆದ ಕೊಡುಗೆ ನೀಡಿವೆ. ಇದೀಗ ತೀರ್ಥಹಳ್ಳಿ ಹುಡುಗ ಮಿಲಿನ್ ಗೌತಮ್ “ಹುಲಿ ನಾಯಕ ” ಸಿನಿಮಾದ ಹೀರೋ ಆಗಿದ್ದಾರೆ. ತಮ್ಮ ಅಭಿನಯ ಮತ್ತು ಕ್ಯೂಟ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಮೂಲತಃ ಮಲೆನಾಡಿನ ತೀರ್ಥಹಳ್ಳಿಯ ಹುಡುಗ, ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಓದಿದ್ದು ಎಂಜಿನಿಯರಿಂಗ್‌ ಜೊತೆಗೆ ಇಂಟೀರಿಯರ್ ಡಿಸೈನಿಂಗ್ ಆಸಕ್ತಿಯಿಂದ ಕಾಲ್ಪಟ್ಟದ್ದು ಚಿತ್ರರಂಗಕ್ಕೆ, 2018ರಲ್ಲಿ ಮೊದಲ ಚಿತ್ರದಲ್ಲಿಯೇ ಮಹಾ ನಟ ಅನಂತನಾಗ್‌ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನಂತರ ಸಾಕಷ್ಟು ತಾಲೀಮು ಪಡೆದು 2022ರಲ್ಲಿ ಸೆಟ್ಟೇರಿದ “ಅನಾಕ್ ರಾಘವ’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು, ಸಾಕಷ್ಟು ಭರವಸೆ ಮೂಡಿಸಿದ್ದಾರೆ.

ಸಿನಿಮ್ಯಾಟಿಕ್ ಮಾರ್ಷಿಯಲ್ ಆರ್ಟ್ಸ್, ಡ್ಯಾನ್ಸ್ ಗಳಷ್ಟೇ ಅಲ್ಲದೇ ನುರಿತ ರಂಗಕರ್ಮಿಗಳಂದ ನಟನೆಯ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವ ಮಹದಾಸೆಯೊಂದಿಗೆ – ನಿರ್ದೇಶಕ ಡಿ.ಜಿ.ಚಕ್ರವರ್ತಿ ಮಾರ್ಗದರ್ಶನದಲ್ಲಿ ‘ಹುಲಿ ನಾಯಕ’ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.