Categories
ತೀರ್ಥಹಳ್ಳಿ ಸಿನಿಮಾ

ತೀರ್ಥಹಳ್ಳಿಯಲ್ಲಿ ಅರ್ಧಂಬರ್ಧ ಪ್ರೇಮ ಕಥೆ ಪ್ರದರ್ಶನ

ತೀರ್ಥಹಳ್ಳಿಯಲ್ಲಿ ಅರ್ಧಂಬರ್ಧ ಪ್ರೇಮ ಕಥೆ ಪ್ರದರ್ಶನ
– ರಾಜ್ಯದ್ಯಂತ ಉತ್ತಮ ಪ್ರದರ್ಶನ
– ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ: ನೀವೂ ನೋಡಿ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ನಟಿ ದಿವ್ಯ ಉರುಡುಗ ನಟನೆಯ ಅರ್ಧಂಬರ್ಧ ಪ್ರೇಮ ಕಥೆ ಚಿತ್ರ ಡಿ.1ರಂದು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ತೀರ್ಥಹಳ್ಳಿಯ ವೆಂಕಟೇಶ್ವರ ಚಿತ್ರಮಂದಿರ ಸೇರಿದಂತೆ ಮಲೆನಾಡಿನ ಹಲವೆಡೆ ತೆರೆ ಕಂಡಿದೆ. ಬಿಗ್ ಬಾಸ್ ಜೋಡಿಯ ಈ ಚಿತ್ರಕ್ಕೆ ಎಲ್ಲೆಡೆ ಪ್ರೇಕ್ಷಕರು ಮೆಚ್ಚುಗೆ ನೀಡಿದ್ದಾರೆ. ಯಾವುದೇ ಪ್ರೇಮಕಥೆಗೆ ಸುಖಾಂತ್ಯ ಅಥವಾ ದುಃಖಾಂತ್ಯ ಸಿಕ್ಕರೆ ಅಲ್ಲಿಗೆ ಆ ಪ್ರೇಮಕಥೆ ಮುಗಿದು ಹೋದಂತೆ! ಆದರೆ ನಿಜವಾದ ಪ್ರೇಮಕಥೆ ಎಂದಿಗೂ ಮುಗಿಯುವುದಿಲ್ಲ. ಅದು ನಡೆಯುತ್ತಲೇ ಇರುತ್ತದೆ ಎಂದು ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾದ ಟೈಟಲ್‌ನಲ್ಲಿ ಇರುವಂತೆ, ಇದು ನಿಜಕ್ಕೂ “ಅರ್ಧಂಬರ್ಧ ಪ್ರೇಮಕಥೆ’ಯ ಸಿನಿಮಾ ಎಂದು ಖಂಡಿತವಾಗಿಯೂ ಹೇಳಬಹುದು. ಇಂದಿನ ಜನರೇಶನ್‌ನ ಹುಡುಗ-ಹುಡುಗಿಯರ ಬದುಕಿನ ದೃಷ್ಟಿ, ಪ್ರೀತಿ, ಪ್ರೇಮದ ಬಗ್ಗೆ ಅವರ ವ್ಯಾಖ್ಯಾನ ಎಲ್ಲವನ್ನೂ ತಮ್ಮದೇ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಇದು ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ಇನ್ನು ಇಡೀ ಸಿನಿಮಾದ ಬಹುಭಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಜೋಡಿಯ ಸುತ್ತಾಟ ಆವರಿಸಿಕೊಂಡಿದ್ದು, ದಿವ್ಯಾ ತಮ್ಮ ಲವಲವಿಕೆಯ ಅಭಿನಯ ದಲ್ಲಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಇನ್ನೂ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಜನರು ಆಗಮಿಸಿ ವೀಕ್ಷಿಸಬೇಕೆಂದು ಅವರ ಅಭಿಮಾನಿಗಳು ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.