Categories
ಸಿನಿಮಾ

ನೂತನ ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ!

ನೂತನ ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ!

– ತೀರ್ಥಹಳ್ಳಿ ಕಲಾವಿದರಿಗೆ ಮೊದಲ ಆದ್ಯತೆ
– ಪುರುಷ ಹಾಗೂ ಮಹಿಳೆಯರಿಗೆ ಸುವರ್ಣ ಅವಕಾಶ

NAMMUR EXPRESS NEWS

ಅನ್ವೇಷಣೆ ಚಿತ್ರ ಸಂಸ್ಥೆಯಿಂದ ತೀರ್ಥಹಳ್ಳಿಯ ತಂತ್ರಜ್ಞರು ಹಾಗೂ ಕಲಾವಿದರನ್ನೇ ಬಳಸಿಕೊಂಡು ಗಿರೀಶ್ ಕಾಸರವಳ್ಳಿಯವರು ಅನಂತಮೂರ್ತಿಯವರ “ಆಕಾಶ ಮತ್ತು ಬೆಕ್ಕು” ಹಾಗೂ ಕೋಡ್ಲು ರಾಮಕೃಷ್ಣ ರವರು ರಕ್ಷಿತ್ ತೀರ್ಥಹಳ್ಳಿಯವರ ಸಣ್ಣ ಕಥೆ ಆಧಾರಿತ ಇನ್ನೂ ಹೆಸರಿಡದ ಚಿತ್ರಗಳು ತಯಾರಾಗುತ್ತಿವೆ. ಆಗಸ್ಟ್ ಕೊನೆಯಲ್ಲಿ ಪ್ರಾರಂಭವಾಗಲಿರುವ ಕೋಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರಕ್ಕೆ ಸುಮಾರು 25 ರಿಂದ 60 ವರ್ಷ ವಯೋಮಾನದ (ಪುರುಷ ಹಾಗೂ ಮಹಿಳೆಯವರು) ತೀರ್ಥಹಳ್ಳಿ ತಾಲೂಕಿನವರಾದ ಕಲಾವಿದರ ಅವಶ್ಯಕತೆ ಇದ್ದು ಈ ಸಲುವಾಗಿ ದಿನಾಂಕ 17/07/24 ಹಾಗೂ 18/07/24 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಸುಮಾರು 60 ವಿವಿಧ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಸ್ಥಳ: ತೀರ್ಥಹಳ್ಳಿ ಬಾಳೇಬೈಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ಸಭಾಂಗಣದಲ್ಲಿ ( ಹೋಟೆಲ್ ಪಾಂಡುರಂಗ ಭವನ ಪಕ್ಕ)

ಸಂಪರ್ಕ : 9482176365, 9036016365

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.