Categories
ಸಿನಿಮಾ

ಕಾಮಿಡಿ ಕಿಂಗ್ ಚಿಕ್ಕಣ್ಣ ‘ಉಪಾಧ್ಯಕ್ಷ’

  • ನಾಯಕನಾಗಿ ನಗಿಸಲು ಬರುತ್ತಿರುವ ಚಿಕ್ಕಣ್ಣ

ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾ ಬಂದಿರುವ ಚಿಕ್ಕಣ್ಣ ಇವರು ಇದೀಗ ನಾಯಕ ನಟನಾಗಿ ಮಿಂಚಲು ಬರುತ್ತಿದ್ದಾರೆ.
ಈ ಹಿಂದೆ ಅಧ್ಯಕ್ಷ ಚಿತ್ರದಲ್ಲಿ ನಟ ಶರಣ್ ಅವರ ಜೊತೆ ಗೆಳೆಯನ ಪಾತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದರು. ಇದೀಗ ಉಪಾಧ್ಯಕ್ಷ
ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ.
ರಾಬರ್ಟ್ ಹಾಗೂ ಮದಗಜದ ನಂತರ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರವನ್ನು ಉಮಾಪತಿ ಶ್ರೀನಿವಾಸ ನಿರ್ಮಾಣಕ್ಕೆ
ಮುಂದಾಗಿದ್ದು , ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಚಂದ್ರ ಮೋಹನ್
ಉಪಾಧ್ಯಕ್ಷ ಅವರು ನಿರ್ದೇಶಿಸುತ್ತಿದ್ದಾರೆ.
ನಾಯಕ ನಟನಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಣ್ಣ ಅವರು, ಚಿತ್ರರಂಗದಲ್ಲಿ ಪ್ರತೀಯೊಬ್ಬ ನಟನಿಗೂ ಇದೊಂದು
ಅತ್ಯಂತ ಪ್ರಮುಖವಾಗ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.