Categories
ಸಿನಿಮಾ

ದಿವ್ಯಾ ಉರುಡುಗ ಹೊಸ ಫೋಟೋ ಶೂಟ್!

ದಿವ್ಯಾ ಉರುಡುಗ ಹೊಸ ಫೋಟೋ ಶೂಟ್!
– ಕನ್ನಡದ ಬಹು ಬೇಡಿಕೆಯ ನಟಿ ಮದುವೆ ಯಾವಾಗ?
– ಮತ್ತಷ್ಟು ಸಿನಿಮಾದಲ್ಲಿ ನಟಿಸ್ತಾರಾ ನಟಿ!?

NAMMUR EXPRESS NEWS
ನಟಿ, ಬಿಗ್ ಬ್ಯಾಸ್ ಖ್ಯಾತಿಯ ದಿವ್ಯಾ ಉರುಡುಗ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋಸ್ ವೈರಲ್ ಆಗಿದೆ.

ದಿವ್ಯಾ ಉರುಡುಗ ಎರಡು ಬಾರಿ ಅವರು ಬಿಗ್ ಬಾಸ್​ಗೆ ಕಾಲಿಟ್ಟಿದ್ದರು. ಈಗ ದಿವ್ಯಾ ಉರುಡುಗ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಇದರ ಜೊತೆಗೆ ಎರಡು ಪ್ರಶ್ನೆ ಇಟ್ಟಿದ್ದಾರೆ.ದಿವ್ಯಾ ಉರುಡುಗ ಅವರು ಅರವಿಂದ್ ಕೆಪಿಯನ್ನು ಪ್ರೀತಿಸುತ್ತಿದ್ದಾರೆ. ಇವರ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಮೊದಲ ಪ್ರಶ್ನೆ. ಅಲ್ಲದೆ ದಿವ್ಯಾ ಹಾಗೂ ಅರವಿಂದ್ ಕೆಪಿ ಒಟ್ಟಾಗಿ ‘ಅರ್ದಂಬರ್ಧ ಪ್ರೇಮ ಕಥೆ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ದಿನಾಂಕಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಎರಡೂ ಪ್ರಶ್ನೆಗೆ ದಿವ್ಯಾ ಕಡೆಯಿಂದ ಉತ್ತರ ಸಿಕ್ಕಿಲ್ಲ.
ದಿವ್ಯಾ ಅವರ ಫ್ಯಾಷನಿಸಮ್ ಎಲ್ಲರ ಗಮನ ಸೆಳೆದಿದ್ದು ಮತ್ತಷ್ಟು ಅವಕಾಶ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.