Categories
ತೀರ್ಥಹಳ್ಳಿ ಸಿನಿಮಾ

ಕಾಟೇರ ಚಿತ್ರ: ಭರ್ಜರಿ ಯಶಸ್ಸು

ಕಾಟೇರ ಚಿತ್ರ: ಭರ್ಜರಿ ಯಶಸ್ಸು
– ರಾಜ್ಯದೆಲ್ಲಡೆ ಕಾಟೇರ ಹವಾ!
– ಹಳೆಯ ಚಿತ್ರಗಳ ದಾಖಲೆ ಬ್ರೇಕ್!
– ಕೇಕ್ ಕತ್ತರಿಸಿ ಸಂಭ್ರಮಮಿಸಿದ ದರ್ಶನ್ ಅಭಿಮಾನಿಗಳು!

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದೆಲ್ಲಡೆ ಯಶಸ್ವೀ ಪ್ರದರ್ಶನ ಕಾಣುತ್ತಿರುವ ‌ಕಾಟೇರ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿರುವ ‌ಸಂದರ್ಭ. ಕಾಂತಾರ ಸಿನಿಮಾದ ನಂತರ ಇತ್ತೀಚೆಗೆ ಕನ್ನಡದಲ್ಲಿ ಧೂಳೆಬ್ಬಿಸುತ್ತಿರುವ ಇನ್ನೊಂದು ಚಿತ್ರ ಕಾಟೇರ. ಹಿಂದಿನ ಕಾಲದ ರೈತಾಪಿ ಜೀವನದ ಚಿತ್ರಕತೆಯನ್ನು ಒಳಗೊಂಡ ಈ ಸಿನಿಮಾದ ಚಿತ್ರಕತೆ, ನಿರ್ದೇಶನ, ಸಂಭಾಷಣೆ, ಸ್ಕ್ರೀನ್‌ ಪ್ಲೇ ಎಲ್ಲವೂ ಅದ್ಭುತವಾಗಿದ್ದು ಎಲ್ಲರ ನಟನೆಯೂ ಚಿತ್ರಕ್ಕೆ ನ್ಯಾಯ ಒದಗಿಸಿದೆ.

ರಾಜ್ಯಾದ್ಯಂತ ಕಾಟೇರ ಚಿತ್ರ ಗ್ರ್ಯಾಂಡ್ ಸಕ್ಸಸ್ ಕಾಣುತ್ತಿರುವ ಹಿನ್ನಲೆಯಲ್ಲಿ ಎಲ್ಲೆಡೆ ಡಿ.ಬಾಸ್ ಸಂಭ್ರಮ ಜೋರಾಗಿದೆ. ತೀರ್ಥಹಳ್ಳಿಯಲ್ಲಿ ಬಿಡುಗಡೆಯಾದ ಮೊದಲ ದಿನದಿಂದಲೇ ಕಿಕ್ಕಿರಿದು ತುಂಬಿದ ಚಿತ್ರಮಂದಿರದ ಮುಂದೆ ಇಂದಿಗೂ ಸಾಲು ಕಮ್ಮಿಯಾಗಿಲ್ಲ. ತೀರ್ಥಹಳ್ಳಿಯ ದರ್ಶನ್ ಅಭಿಮಾನಿಗಳು, ಸಿನಿ ಪ್ರಿಯರು, ಡಿ. ಬಾಸ್ ಅಸೋಸಿಯೇಷನ್ ನ ಸದಸ್ಯರು, ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಮೂಲಕ ಈ ಚಿತ್ರದ ಯಶಸ್ಸನ್ನು ಹಂಚಿಕೊಂಡಿದ್ದಾರೆ. ಚಿತ್ರ ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.