Categories
ಮಲ್ನಾಡ್ ಸಾಗರ ಸಿನಿಮಾ

ಮಲೆನಾಡ ಚಿತ್ರಣಗಳ ಕೆರೆಬೇಟೆ ಚಿತ್ರ

ಮಲೆನಾಡ ಚಿತ್ರಣಗಳ ಕೆರೆಬೇಟೆ ಚಿತ್ರ
– ಶಿವಮೊಗ್ಗ ಜಿಲ್ಲೆಯಲ್ಲಿ ಬಹುಪಾಲು ಚಿತ್ರೀಕರಣ!
– ಅದ್ಧೂರಿ ಟೀಸರ್ ಬಿಡುಗಡೆ ಕಾರ್ಯಕ್ರಮ!

NAMMUR EXPRESS NEWS
ಸಾಗರ : ಮಲೆನಾಡಿನಲ್ಲಿ ಚಿತ್ರೀಕರಣಗೊಂಡ ಕೆರೆ ಬೇಟೆ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಯುವನಟ ಗೌರಿಶಂಕರ್ ರವರು ಪಕ್ಕಾ ಹಳ್ಳಿಗಾಡಿನ ಹುಲಿಯಂತೆ ನಟಿಸಿರುವ ಕೆರೆ ಬೇಟೆ ಚಿತ್ರ ಇದೀಗ ರಾಜ್ಯಾದ್ಯಂತ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದ್ದು, ಮಲೆನಾಡ ಮಡಿಲಾದ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಸೊರಬದಲ್ಲಿ ಚಿತ್ರದ ಪ್ರತಿಶತ 70ರಷ್ಟು ಶೂಟಿಂಗ್ ನಡೆದಿದೆ.

ಮೋಶನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ನಿಂದ ಬಾರಿ ನಿರೀಕ್ಷೆ ಹುಟ್ಟು ಹಾಕಿರುವ ಕೆರೆ ಬೇಟೆ ಚಿತ್ರದ ಟೀಸರ್ ಕಾರ್ಯಕ್ರಮ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಬಿಡುಗಡೆಗೊಂಡಿದ್ದು, ಡಾಲಿ ಧನಂಜಯ್ ಹಾಗೂ ದಿನಕರ್ ತೂಗುದೀಪ್ ರವರು ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಹಳ್ಳಿ ಸೊಗಡಿನ ಚಿತ್ರ ಇದಾಗಿದ್ದು ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನೆಯ ಅಂಶಗಳು ಚಿತ್ರದಲ್ಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.