Categories
ರಾಜ್ಯ ಸಿನಿಮಾ

ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಹಿರಿಮೆ!

ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಹಿರಿಮೆ!

* ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ
* ‘ಕಾಂತಾರ’ ನಟನೆಗಾಗಿ ಬೆಸ್ಟ್‌ ಆ್ಯಕ್ಟ‌ರ್ ನ್ಯಾಷನಲ್ ಅವಾರ್ಡ್‌

NAMMUR EXPRESS NEWS
ಬೆಂಗಳೂರು :ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಬೆಸ್ಟ್‌ ಆ್ಯಕ್ಟ‌ರ್ ನ್ಯಾಷನಲ್ ಅವಾರ್ಡ್‌ ಪಡೆದುಕೊಂಡಿದ್ದಾರೆ. 2022ರಲ್ಲಿ ‘ಹೊಂಬಾಳೆ ಫಿಲ್ಸ್’ ಮೂಲಕ ನಿರ್ಮಾಣಗೊಂಡ ‘ಕಾಂತಾರ’ ಸಿನಿಮಾಕ್ಕೆ ಸ್ವತಃ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು.

ಭೂತಕೋಲದ ಕಥೆ ಇರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋ‌ರ್, ಅಚ್ಯುತ್ ಕುಮಾರ್, ಪ್ರಮೋದ್‌ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶಕನಕ್ಕೆ ಯಶಸ್ಸು ಕಂಡಿತ್ತು. ಕನ್ನಡ ಮಾತ್ರವಲ್ಲೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿಯೂ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.
ರಿಷಬ್ ಶೆಟ್ಟಿ ಅವರು ಪ್ರಶಸ್ತಿ ಪದಾನ ಸಮಾರಂಭದಲ್ಲಿ ಪಂಚೆ ಧರಿಸಿ ತೆರಳಿದ್ದು ಗಮನ ಸೆಳೆಯಿತು. ಖ್ಯಾತಿಯ ಹೊರತಾಗಿಯೂ ನೆಲದ ಸೊಗಡನ್ನೇ ಅನುಸರಿಸುವ ರಿಷಬ್ ನಡೆಯ ಬಗ್ಗೆಯೂ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.