Categories
ಸಿನಿಮಾ

ಅಂತೂ ಕಾಂತಾರ 2 ಕ್ಕೆ ಬಂತು ಮುಹೂರ್ತ!

  • ನಟ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಆ. 27ಕ್ಕೆ ಮೂಹೂರ್ತ
  • ಯಾರು ಯಾರು ಈ ಸಿನಿಮಾದಲ್ಲಿ ನಟಿಸ್ತಾರೆ?

ಸಿನಿಮಾ : ಕಳೆದ ವರ್ಷ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಮನ್ನಣೆಯನ್ನು ಪಡೆಯಿತು. ಅಷ್ಟೇ ಅಲ್ಲದೇ ಇಡೀ ಭಾರತೀಯ ಸಿನಿರಂಗ ಸ್ಯಾಂಡಲ್‌ವುಡ್‌ನತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದೆ. ಈ ಸಿನಿಮಾವು ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಭರ್ಜರಿ ಕಲೆಕ್ಷನ್‌ನ್ನು ಕಂಡಿದೆ.
ಕಾಂತಾರ ಸಿನಿಮಾವನ್ನು ನೋಡಿದ ಸಿನಿಪ್ರೇಕ್ಷಕರು ಇದರ ಮುಂದುವರೆದ ಭಾಗ ಬರಬೇಕೆಂದು ಹೇಳಿದರು. ಪ್ರೇಕ್ಷಕರ ಆಸೆಯಂತೆ ಕಾಂತಾರ ಸಿನಿಮಾದ ಪ್ರೀಕ್ವೆಲ್ ಸಿದ್ಧಗೊಳಿಸುವಂತೆ ನಟ, ನಿರ್ದೇಶಕ ಹೇಳಿಕೊಂಡಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಹೊರಗಡೆ ಬಂದಿದೆ. ಅದೆನೆಂದರೆ ಆಗಸ್ಟ್ ತಿಂಗಳಲ್ಲಿ ಸಿನಿಮಾ ಮೂಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿ ಆಗಿದ್ದು, ಈ ವಿಷಯ ತಿಳಿದ ಅಭಿಮಾನಿಗಳು ಸಂತಸಪಟ್ಟಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾವು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 400 ಕೋಟಿ ರೂ.ಗಳಷ್ಟು ಗಳಿಕೆ ಕಂಡಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ ಸಂಸ್ಥೆಗೆ ದೊಡ್ಡ ಮಟ್ಟದ ಲಾಭ ತಂದು ಕೊಟ್ಟಿತು. ಹಾಗೆಯೇ ಎಲ್ಲಡೆ ಪ್ರಶಂಸೆ ಕೂಡ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ ಈ ಸಿನಿಮಾದ ಎರಡನೇ ಭಾಗವನ್ನು ಮಾಡಲು ನಿರ್ದೇಶಕ ರಿಷಬ್ ಶೆಟ್ಟಿ ನಿರ್ಧಾರ ಮಾಡಿದ್ದರು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾದ ಮೂಹೂರ್ತವು ಆಗಸ್ಟ್ 27ರಂದು ನೆರವೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ತದನಂತರದ ದಿನಗಳಲ್ಲಿ ಸಿನಿತಂಡ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಲಿದೆ.
ಇನ್ನು ಕಾಂತಾರ 2 ಸಿನಿಮಾಕ್ಕೆ ಮಳೆಗಾಲದ ಅವಶ್ಯಕತೆ ಇರುವುದರಿಂದ ಆಗಸ್ಟ್ ಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲು ರಿಷಬ್ ಶೆಟ್ಟಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಯಾರೆಲ್ಲ ನಟನೆ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.