Categories
ತೀರ್ಥಹಳ್ಳಿ ಸಿನಿಮಾ

ತೀರ್ಥಹಳ್ಳಿ ಹುಡುಗರ ಶಾರ್ಟ್ ಮೂವಿ ಸೂಪರ್!

ತೀರ್ಥಹಳ್ಳಿ ಹುಡುಗರ ಶಾರ್ಟ್ ಮೂವಿ ಸೂಪರ್!
– ಬೋರ್ಡ್ ಗಲ್ಲು ಶಾರ್ಟ್ ಮೂವಿಗೆ ಜನರ ಮೆಚ್ಚುಗೆ
– ಹಳ್ಳಿ -ಪಳ್ಳಿ ಹುಡುಗರು ಯೂಟ್ಯೂಬ್ ಚಾನೆಲ್ ಅಲ್ಲಿ ವೀಕ್ಷಿಸಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕಲಾವಿದರ ತವರು. ಅನೇಕರು ಈ ಭಾಗದ ಪ್ರತಿಭೆಗಳು ಸಿನಿಮಾ, ಕಿರುತೆರೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೀಗ ಬೋರ್ಡ್ ಗಲ್ಲು ಶಾರ್ಟ್ ಫಿಲ್ಮ್ ಮೂಲಕ ಮತ್ತಷ್ಟು ಪ್ರತಿಭೆಗಳು ಎಂಟ್ರಿ ಆಗಿವೆ.
ಬೋರ್ಡ್ ಗಲ್ಲು ಶಾರ್ಟ್ ಮೂವಿ ಥ್ರಿಲ್ಲರ್ ಮ್ಯೂಸಿಕ್ ನೊಂದಿಗೆ ವಿಭಿನ್ನ ಮೋಟಿವೇಷನ್ ಕಥೆ ಹೇಳಿದೆ. ಒಳ್ಳೆಯತನ, ಶ್ರಮ, ತಾಳ್ಮೆಗೆ ಒಂದು ದಿನ ಯಶಸ್ಸು ಸಿಗಲಿದೆ ಎಂಬ ಕಥೆ ಯನ್ನು ಈ ಸಣ್ಣ ಸಿನಿಮಾ ಹೇಳಿದೆ.ಮಲೆನಾಡಿನ ಹುಡುಗರ ಕ್ರಿಯಾಶೀಲತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮಲೆನಾಡಿನಲ್ಲಿ ಟ್ರೆಂಡಿಂಗ್ ನಲ್ಲಿರುವ ಈ ಬೋರ್ಡ್ ಗಲ್ಲು ಶಾರ್ಟ್ ಮೂವಿ ಉತ್ತಮ ಸ್ಪಂದನೆ ಪಡೆದು 10 ಸಾವಿರ ಕ್ಕೂ ಹೆಚ್ಚು ವೀವ್ಸ್ ಪಡೆದಿದೆ.

ಹಳ್ಳಿ -ಪಳ್ಳಿ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಶಾರ್ಟ್ ಮೂವಿ ಸಿನಿಮಾ ರಿಲೀಸ್ ಆಗಿದೆ. ರಾಹುಲ್ ಬಿ,ಪಿ,ಬರೆದು ನಿರ್ದೇಶಿಸಿ ಸಿನಿಮಾ ಸಂಕೇತ್ ಎಸ್, ಕ್ಷಿತಿಜ ಮಲ್ನಾಡ್, ಶ್ರೀಪಾದ ತೀರ್ಥಹಳ್ಳಿ ವಿನಯ್ ಶೆಟ್ಟಿ, ಕಾರ್ತಿಕ್ ಕುರ್ಕುರೆ, ರಿತೇಶ್ ಈಡಿಗ, ನೂತನ್ ಶೆಟ್ಟಿ ಕೊಪ್ಪ, ಸುಹಾಸ್ ಶೆಟ್ಟಿ, ಗಿರೀಶ್ ಬಂಡಾರಿ,ರಾಕೇಶ್ ಗೌಡ,ನಿಕಿತ್ ಗೌಡ,ಅಂಕಿತ್ ಶೆಟ್ಟಿ, ವಿಖ್ಯಾತ್ ಬಿ. ವಿ, ಜ್ಞಾನೇಂದ್ರ ಎಸ್, ಸೇರಿದಂತೆ ಹಲವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
https://youtu.be/QTRp1APvses?si=V7cIR3asWXkV_SZN
ಎಲ್ಲರೂ ಈ ಸಿನಿಮಾ ವೀಕ್ಷಿಸಿ ತೀರ್ಥಹಳ್ಳಿ ಕಲಾವಿದರನ್ನು ಬೆಂಬಲಿಸಿ. ಮೇಲಿನ ಲಿಂಕ್ ಕ್ಲಿಕ್ ಮಾಡಿ..ಸ್ನೇಹಿತರಿಗೂ ಶೇರ್ ಮಾಡಿರಿ.

[embedyt] https://www.youtube.com/watch?v=QTRp1APvses%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.