Categories
ಸಿನಿಮಾ

ಡಿ ಬಾಸ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್ ಹವಾ!

ಡಿ ಬಾಸ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್ ಹವಾ!
– ಬಿಡುಗಡೆಯಾದ ಕೆಲವೇ ಗಂಟೆಗೆ 5 ಮಿಲಿಯನ್ ವೀಕ್ಷಣೆ
– ಹುಬ್ಬಳ್ಳಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ
– ಸಿನಿಮಾ ಡಿ.29ರಂದು ರಾಜ್ಯದಾದ್ಯಂತ ರಿಲೀಸ್

NAMMUR EXPRESS NEWS
ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಭರವಸೆಯೊಂದಿಗೆ ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರ ಡಿಸೆಂಬರ್ 29ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಶನಿವಾರ ಹುಬ್ಬಳ್ಳಿಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದ್ದು ಈಗಾಗಲೇ ಆನಂದ್ ಆಡಿಯೋ ಯೂಟ್ಯೂಬಲ್ಲಿ ಬಿಡುಗಡೆಯಾದ ಕೆಲವೇ ಗಂಟೆಯೊಳಗೆ 5 ಮಿಲಿಯನ್ ವೀಕ್ಷಣೆ ಪಡೆದಿದೆ. 1972ರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು, ರೈತರ ಜೀವನದ ಆಧಾರಿತ ಚಿತ್ರವಾಗಿದೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಧೀರ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆರಾಧನಾ ರಾಮ್, ಕುಮಾರ್ ಗೋವಿಂದ್, ಜಗಪತಿ ಬಾಬು, ಶೃತಿ, ವೈಜನಾಥ್ ಬಿರಾದಾರ್, ರಾಷ್ಟ್ರ ಪ್ರಶಸ್ತಿ ವಿಜೇತ ಮಾಸ್ಟರ್ ರೋಹಿತ್ ಅಭಿನಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ದರ್ಶನ್ ಸೇರಿ ಸಿನಿಮಾ, ಸಾಮಾಜಿಕ ಕ್ಷೇತ್ರದ ಗಣ್ಯರು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಕಾಟೇರ ಚಿತ್ರವು ಶತದಿನೋತ್ಸವ ಪೂರೈಸಲಿ ಎಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್, ಎಲ್ಲಾ ದರ್ಶನ್ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಟ್ರೈಲರ್ ಲಿಂಕ್ ನೋಡಿ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.