Categories
ಸಿನಿಮಾ

ರಜನಿಕಾಂತ್ ಜತೆ ಯಶ್ ನಟನೆ ?! – ಸಾವಿರ ಕೋಟಿ ಬಜೆಟ್

ರಜನಿಕಾಂತ್ ಜತೆ ಯಶ್ ನಟನೆ?!
– ಯಶ್ ಮುಂದಿನ ಸಿನಿಮಾ ಸಾವಿರ ಕೋಟಿ ಬಜೆಟ್
– ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ಹವಾ

NAMMUR EXPRESS NEWS
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ರಾಷ್ಟ್ರ ಮಟ್ಟದ ಹೀರೋ. ಅವರ ಕಾಲಿಶೀಟ್ ಪಡೆಯಲು ದೇಶದ ಟಾಪ್ ನಿರ್ದೇಶಕರು ಕೂಡ ಕ್ಯೂ ನಿಲ್ಲುತ್ತಾರೆ. ಅವರು ತಮ್ಮ 19ನೇ ಸಿನಿಮಾವನ್ನು ಯಾವಾಗ ಅನೌನ್ಸ್ ಮಾಡುತ್ತಾರೆ ಎಂಬ ಕುತೂಹಲದಲ್ಲಿ ಅವರ ಅಭಿಮಾನಿಗಳಿದ್ದಾರೆ.

ಈ ನಡುವೆ ಭಾರತದ ಮತ್ತೊಬ್ಬ ಸಿನಿಮಾ ದಿಗ್ಗಜರಾದ ರಜನೀಕಾಂತ್ ಅವರ ಜತೆ ಯಶ್ ಮಗನಾಗಿ ನಟನೆ ಮಾಡಲಿದ್ದಾರೆ ಎಂಬ ಚರ್ಚೆ ಕೇಳಿ ಬಂದಿದೆ.  ಅವರು ಆ ಸಿನಿಮಾದಲ್ಲಿ ನಟಿಸುತ್ತಾರೆ, ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂಬಂತಹ ಸುದ್ದಿಗಳು ಹಬ್ಬುತ್ತಲೇ ಇವೆ. ಮೊನ್ನೆ ಎಷ್ಟೇ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿ ಅದು ಇಲ್ಲ ಎಂದು ಮತ್ತೊಂದು ಸುದ್ದಿಯಾಗಿತ್ತು.

ಈಗ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾದಲ್ಲಿ ಯಶ್ ಮಗನಾಗಿ ನಟಿಸಬಹುದು ಎನ್ನಲಾಗುತ್ತಿದೆ. ರಜನಿಕಾಂತ್ ಅವರಿಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುವುದು ಖಚಿತಗೊಂಡಿದ್ದು ಅದೊಂದು ಆಕ್ಷನ್ ಡ್ರಾಮಾ ಕಥೆಯಾಗಿದೆ, ಅದರಲ್ಲಿ ಯಶ್ ಅವರನ್ನು ಪ್ರಮುಖವಾದ ಪಾತ್ರ ಒಂದರಲ್ಲಿ ನಟಿಸುವಂತೆ ಕೇಳಲು ಚಿತ್ರತಂಡ ಯೋಚನೆ ಮಾಡಿದೆ ಎಂದು ತಮಿಳು ಚಿತ್ರರಂಗದಲ್ಲಿ ಸುದ್ದಿಯಾಗಿದೆ. ಮೂಲಗಳ ಪ್ರಕಾರ ಯಶ್ ಮತ್ತು ಲೋಕೇಶ್ ಸದ್ಯದಲ್ಲೇ ಭೇಟಿಯಾಗಲಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ಈಗ ಟಾಪ್ ನಟರಾಗಿದ್ದಾರೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.